ಐಆರ್‌ಸಿಟಿಸಿ ಐಪಿಒಗೆ 112 ಪಟ್ಟು ಬೇಡಿಕೆ!
ರೈಲುಗಳ ಆನ್‌ಲೈನ್ ಟಿಕೆಟ್ ಬುಕ್ಕಿಂಗ್, ಕೇಟರಿಂಗ್ ಹಾಗೂ ಇತರೆ ಸೇವೆಗಳನ್ನು ಒದಗಿಸುವ ಇಂಡಿಯನ್ ರೈಲ್ವೆ ಕೇಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೋರೆಷನ್ (ಐಆರ್‌ಸಿಟಿಸಿ) ಷೇರುಪೇಟೆಯಿಂದ ಬಂಡವಾಳ ಸಂಗ್ರಹಿಸಲು ಬಿಡುಗಡೆ ಮಾಡಿದ್ದ ಐಪಿಒಗೆ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ.
ಮುಂಬೈ (ಅ. 04): ರೈಲುಗಳ ಆನ್‌ಲೈನ್ ಟಿಕೆಟ್ ಬುಕ್ಕಿಂಗ್, ಕೇಟರಿಂಗ್ ಹಾಗೂ ಇತರೆ ಸೇವೆಗಳನ್ನು ಒದಗಿಸುವ ಇಂಡಿಯನ್ ರೈಲ್ವೆ ಕೇಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೋರೆಷನ್ (ಐಆರ್‌ಸಿಟಿಸಿ) ಷೇರುಪೇಟೆಯಿಂದ ಬಂಡವಾಳ ಸಂಗ್ರಹಿಸಲು ಬಿಡುಗಡೆ ಮಾಡಿದ್ದ ಐಪಿಒಗೆ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ. ಐಪಿಒಗೆ 112 ಪಟ್ಟು ಬೇಡಿಕೆ ಬಂದಿದೆ.
ಷೇರುಪೇಟೆಯಿಂದ 645 ಕೋಟಿ ರು. ಸಂಗ್ರಹಿಸುವ ಗುರಿಯೊಂದಿಗೆ 2.02 ಕೋಟಿ ಷೇರುಗಳನ್ನು ಐಆರ್‌ಸಿಟಿಸಿ ಬಿಡುಗಡೆ ಮಾಡಿತ್ತು. ಐಪಿಒ ಕೊನೆಯ ದಿನವಾದ ಗುರುವಾರ ಸಂಜೆ 6 ವೇಳೆಗೆ 225 ಕೋಟಿ ಷೇರುಗಳಿಗೆ ಬೇಡಿಕೆ ಬಂದಿದ್ದು, 72 ಸಾವಿರ ಕೋಟಿ ರು. ಸಂಗ್ರಹವಾಗಿದೆ! ಅ.15ರಂದು ಐಆರ್‌ಸಿಟಿಸಿ ಷೇರುಗಳು ಪೇಟೆಯಲ್ಲಿ ನೋಂದಣಿಯಾಗಲಿವೆ. ಷೇರು ಹಂಚಿಕೆಯಾದವರನ್ನು ಬಿಟ್ಟು ಉಳಿದವರಿಗೆ ಹಣ ಮರಳಿಸಲಾಗುತ್ತದೆ.