ಇನ್ಫೋಸಿಸ್ ಗೆ  3,612 ಕೋಟಿ ರೂ. ಲಾಭಪ್ರಥಮ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಸಾಧನೆ270 ಕೋಟಿ ರೂ. ಲಾಭ ಕಡಿಮೆಯಾಗಿದೆಪನಾಯ ಸಂಸ್ಥೆ ಮಾರಾಟದ ಪರಿಣಾಮನಿವ್ವಳ ಲಾಭ ಶೇ.3.7 ರಷ್ಟು ಏರಿಕೆ

ಬೆಂಗಳೂರು(ಜು.13): ಜೂ.30 ಕ್ಕೆ ಕೊನೆಯಾದ 2018 ರ ಮೊದಲ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಸಂಸ್ಥೆ 3,612 ಕೋಟಿ ರೂಪಾಯಿ ಲಾಭ ಗಳಿಸಿದೆ. 

Add Asianetnews Kannada as a Preferred SourcegooglePreferred

ಈ ಹಿಂದೆ ಇನ್ಫೋಸಿಸ್ ಖರೀದಿಸಿದ್ದ ಇಸ್ರೇಲಿ ತಂತ್ರಜ್ಞಾನ ಸಂಸ್ಥೆ ಪನಾಯವನ್ನು ಮಾರಾಟ ಮಾಡಿದ್ದರಿಂದ ಸುಮಾರು 270 ಕೋಟಿ ರೂಪಾಯಿ ವರೆಗೆ ಸಂಸ್ಥೆಯ ಲಾಭದ ಮೇಲೆ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿಸುಮಾರು 270 ಕೋಟಿ ರೂಪಾಯಿ ವರೆಗೆ ಲಾಭ ಕಡಿಮೆಯಾಗಿದೆ ಎನ್ನಲಾಗಿದೆ.

 ಅಷ್ಟೇ ಅಲ್ಲದೇ ಈಕ್ವಿಟಿ ಷೇರಿನ ಮೌಲ್ಯವೂ ರೂ.1.24 ವರೆಗೆ ಕಡಿಮೆಯಾಗಿದೆ ಎಂದು ಸಂಸ್ಥೆ ಹೇಳಿದೆ. ವರ್ಷದ ಬೆಳವಣಿಗೆಯಲ್ಲಿ ಶೇ.12 ರಷ್ಟು ಏರಿಕೆಯಾಗಿದ್ದು, ನಿವ್ವಳ ಲಾಭ ಶೇ.3.7 ರಷ್ಟು ಏರಿಕೆಯಾಗಿದೆ. ಆದರೆ ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ತ್ರೈಮಾಸಿಕದಲ್ಲಿ ಶೇ.2.1 ರಷ್ಟು ಕಡಿಮೆಯಾಗಿದೆ ಎಂದು ಸಂಸ್ಥೆ ಹೇಳಿದೆ.