ಡಾಲರ್ ಎದುರು ಅದುರಿದ ರುಪಾಯಿ: ₹86.7ಕ್ಕೆ ಕುಸಿತ, 2 ವರ್ಷದಲ್ಲೇ ಕನಿಷ್ಠ!
ಅಂತರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಸೋಮವಾರ ಬೆಳಗ್ಗೆ ಡಾಲರ್ ಎದುರು ರುಪಾಯಿ ಮೌಲ್ಯ 1 ಪೈಸೆ ಕುಸಿತದೊಂದಿಗೆ 86.12ರಲ್ಲಿ ಆರಂಭವಾಯಿತು. ಆದರೆ ದಿನದಂತ್ಯಕ್ಕೆ ಮತ್ತೆ 65 ಪೈಸೆ ಕುಸಿದು 86.70ಕ್ಕೆ ತಲುಪಿತು. ಇದು ಕಳೆದ 2 ವರ್ಷಗಳಲ್ಲೇ ಒಂದೇ ದಿನದಲ್ಲಿ ರುಪಾಯಿಯ ಗರಿಷ್ಠ ಕುಸಿತವಾಗಿದೆ.
ಮುಂಬೈ(ಜ.14): ಕಳೆದ ಕೆಲದಿನಗಳಿಂದ ಸತತ ಕುಸಿತದ ಹಾದಿಯಲ್ಲಿದ್ದ ರುಪಾಯಿ ಮೌಲ್ಯ, ಸೋಮವಾರ ಒಂದೇ ದಿನ 66 ಪೈಸೆಗಳಷ್ಟು ಭಾರೀ ಕುಸಿತ ಕಾಣುವ ಮೂಲಕ 86.70ರಲ್ಲಿ ಅಂತ್ಯವಾಗಿದೆ. ಇದು ಡಾಲರ್ ಎದುರು ರುಪಾಯಿಯ ಸಾರ್ವಕಾಲಿಕ ಕನಿಷ್ಠ ಮೌಲ್ಯವಾಗಿದೆ. ಇದರಿಂದ ಆಮದು ವೆಚ್ಚ ಹೆಚ್ಚಿ ವಸ್ತುಗಳು ದುಬಾರಿ ಸಂಭವವಿದೆ.
ಇಲ್ಲಿನ ಅಂತರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಸೋಮವಾರ ಬೆಳಗ್ಗೆ ಡಾಲರ್ ಎದುರು ರುಪಾಯಿ ಮೌಲ್ಯ 1 ಪೈಸೆ ಕುಸಿತದೊಂದಿಗೆ 86.12ರಲ್ಲಿ ಆರಂಭವಾಯಿತು. ಆದರೆ ದಿನದಂತ್ಯಕ್ಕೆ ಮತ್ತೆ 65 ಪೈಸೆ ಕುಸಿದು 86.70ಕ್ಕೆ ತಲುಪಿತು. ಇದು ಕಳೆದ 2 ವರ್ಷಗಳಲ್ಲೇ ಒಂದೇ ದಿನದಲ್ಲಿ ರುಪಾಯಿಯ ಗರಿಷ್ಠ ಕುಸಿತವಾಗಿದೆ. 2023ರ ಫೆ.6ರಂದು 68 ಪೈಸೆ ಕುಸಿತ ಈ ಹಿಂದಿನ ದಾಖಲೆಯಾಗಿತ್ತು. ಕಳೆದ 2 ವಾರದ ಅವಧಿಯಲ್ಲಿ ರುಪಾಯಿ ಮೌಲ್ಯ 1 ರು.ಗಿಂತ ಹೆಚ್ಚು ಕುಸಿತ ಕಂಡಿದೆ. ಕಾರಣಏನು?: ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಡಾಲರ್ ಖರೀದಿಗೆ ಮುಂದಾಗಿದ್ದು, ವಿದೇಶಿಸಾಂಸ್ಥಿಕೆಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ ಭಾರೀ ಪ್ರಮಾಣದಲ್ಲಿ ಹಣ ಹಿಂಪಡೆಯುತ್ತಿರುವುದು ರುಪಾಯಿ ಮೌಲ್ಯ ಭಾರೀ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ.
ಜನವರಿ 15 ರ ಒಳಗೆ ಐಟಿಆರ್ ಫೈಲ್ ಮಾಡಿ, ಇಲ್ಲದಿದ್ರೆ ದಂಡ ಫಿಕ್ಸ್!
ಪರಿಣಾಮ ಏನು?
• ಆಮದು ದುಬಾರಿ: ವಿದೇಶಗಳಿಂದ ತರಿಸಿಕೊಳ್ಳುವ ವಸ್ತುಗಳಿಗೆ ಆಮದುದಾರರು ವಿದೇಶಿ ಕರೆನ್ಸಿಯಲ್ಲೇ ಹಣ ಪಾವತಿ ಮಾಡಬೇಕಾದ ಕಾರಣ, ಆಮದು ವೆಚ್ಚ ಹೆಚ್ಚುತ್ತದೆ.
• ಹಣದುಬ್ಬರ: ಆಮದು ಶುಲ್ಕ ಹೆಚ್ಚಿದ ಕಾರಣ. ಹಣದುಬ್ಬರವೂ ಏರಿಕೆಯಾಗುತ್ತದೆ. ಇದು ಜನರ ಕೊಳ್ಳುವಿಕೆ ಶಕ್ತಿ ಕಡಿಮೆ ಮಾಡುತ್ತೆ, ಆರ್ಥಿಕ ಸ್ಥಿರತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
• ವಿತ್ತೀಯ ಕೊರತೆ ಹೆಚ್ಚಳ: ಆಮದು ಶುಲ್ಕ ಹೆಚ್ಚಾಗಿ, ಡಾಲರ್ ಸಂಗ್ರಹ ಇಳಿಕೆಯಾದಂತೆ ದೇಶದ ವಿತ್ತೀಯ ಕೊರತೆ ಹೆಚ್ಚಾಗುತ್ತದೆ. ಇದು ಮತ್ತಷ್ಟು ರುಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗುತ್ತದೆ.
• ವಿದೇಶಿ ಹೂಡಿಕೆ: ರುಪಾಯಿ ಮೌಲ್ಯ ಕುಸಿದಷ್ಟೂ, ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ ಮತ್ತಷ್ಟು ಹಣ ಹಿಂದಕ್ಕೆ ಪಡೆಯುತ್ತಾರೆ. ಇದರಿಂದ ಹಣಕಾಸು ಮಾರುಕಟ್ಟೆ, ಬಂಡವಾಳ ಹರಿವಿಗೆ ಅಡ್ಡಿ.
• ತೈಲ ಬೆಲೆ ಏರಿಕೆ: ಭಾರತ ತನ್ನ ಬಹುತೇಕ ಕಚ್ಚಾತೈಲಕ್ಕೆ ವಿದೇಶಗಳನ್ನೇ ಅವಲಂಬಿಸಿದೆ. ಹೀಗಾಗಿ ಕಚ್ಚಾತೈಲಕ್ಕೆ ಹೆಚ್ಚಿನ ಬೆಲೆ ನೀಡಬೇಕು. ಇದು ದೇಶೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಕಾರಣವಾಗುತ್ತದೆ.
• ರಫ್ಟಿಗೆ ಅನುಕೂಲ: ರುಪಾಯಿ ಮೌಲ್ಯ ಕುಸಿತದಿಂದ ರಫ್ತುದಾರರಿಗೆ ಮಾತ್ರ ಲಾಭವಾಗುತ್ತದೆ. ಕಾರಣ ಅವರಿಗೆ ಡಾಲರ್ ರೂಪದಲ್ಲಿ ಹಣ ಬರುವ ಕಾರಣ ಹೆಚ್ಚಿನ ಆದಾಯ ಬರುತ್ತದೆ.
ಸೆನ್ಸೆಕ್ಸ್ 1129 ಅಂಕ ಪತನ: ₹14 ಲಕ್ಷ ಕೋಟಿ ರು. ನಷ್ಟ
ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನೆಕ್ ಸೋಮವಾರ 1129 ಅಂಕಗಳ ಭಾರೀ ಕುಸಿತ ಕಂಡು 76249 ಅಂಕಗಳಲ್ಲಿ ಮುಕ್ತಾಯವಾಗಿದೆ. ನಿಫ್ಟಿ ಕೂಡಾ 345 ಅಂಕ ಕುಸಿದು 23085ರಲ್ಲಿ ಕೊನೆಗೊಂಡಿದೆ. ಸೋಮವಾರ ಷೇರುಪೇಟೆಯ ಭಾರೀ ಕುಸಿತದ ಕಾರಣ ಹೂಡಿಕೆದಾರರಿಗೆ 14 ಲಕ್ಷ ಕೋಟಿ ರು.ನಷ್ಟು ಭಾರೀ ನಷ್ಟವಾಗಿದೆ. ಕಳೆದ 4 ದಿನಗಳಲ್ಲಿ ಸೂಚ್ಯಂಕ ಒಟ್ಟಾರೆ 1869 ಅಂಕ ಕುಸಿದ ಕಾರಣ ಹೂಡಿಕೆದಾರರ 25 ಲಕ್ಷ ಕೋಟಿ ರು.ನಷ್ಟು ಸಂಪತ್ತು ಕರಗಿ ಹೋಗಿದೆ. ~~ 3 ಅಮೆರಿಕದಲ್ಲಿ ಬಡ್ಡಿದರ ಕಡಿತ ಸಾಧ್ಯತೆ ದೂರ, ರುಪಾಯಿ ಮೌಲ್ಯ ಕುಸಿತ, ವಿದೇಶಿ ಸಾಂಸ್ಥಿಕೆ ಹೂಡಿಕೆದಾರರು ಭಾರೀ ಪ್ರಮಾಣದ ಹಣ ಹಿಂಪಡೆಯುತ್ತಿರುವುದು, ಕಚ್ಚಾತೈಲದ ಬೆಲೆ ಏರಿಕೆ, ಜಾಗತಿಕ ಷೇರುಪೇಟೆಯ ಒತ್ತಡವು ಭಾರತೀಯ ಷೇರುಪೇಟೆಯ ಮೇಲೂ ಪ್ರಭಾವ ಬೀರಿತು.