Asianet Suvarna News Asianet Suvarna News

ಕೈಬೀಸಿ ಕರೆಯುತ್ತಿದೆ ಇಂಡಿಯನ್ ಬ್ಯಾಂಕ್: ಅರ್ಜಿ ಸಲ್ಲಿಸಲು ಹೀಗೆ ಮಾಡಿ!

ಇಂಡಿಯನ್ ಬ್ಯಾಂಕ್ ನಲ್ಲಿ ಪ್ರೊಬೆಷನರಿ ಆಫೀಸರ್‌ಗಳ ನೇಮಕ! ಒಟ್ಟು 417 ಪ್ರೊಬೆಷನರಿ ಆಫೀಸರ್‌ಗಳನ್ನು ನೇಮಕ! ಎರಡು ಹಂತದ ಲಿಖಿತ ಪರೀಕ್ಷೆ ಮತ್ತು ಸಂದರ್ಶನ! ಅಕ್ಟೋಬರ್‌ನಲ್ಲಿ ಪೂರ್ವಭಾವಿ ಹಾಗೂ ನವೆಂಬರ್‌ನಲ್ಲಿ ಮುಖ್ಯ ಪರೀಕ್ಷೆ
 

Indian Bank Recruitment 2018
Author
Bengaluru, First Published Aug 24, 2018, 9:48 PM IST

ಬೆಂಗಳೂರು(ಆ.24): ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಗಳಲ್ಲಿ ಒಂದಾದ ಇಂಡಿಯನ್‌ ಬ್ಯಾಂಕ್‌, ಪ್ರೊಬೆಷನರಿ ಆಫೀಸರ್‌ಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಇಂಡಿಯನ್ ಬ್ಯಾಂಕ್ ಒಟ್ಟು 417 ಪ್ರೊಬೆಷನರಿ ಆಫೀಸರ್‌ಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. 

ಒಟ್ಟು ಹುದ್ದೆಗಳ ಪೈಕಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 212, ಒಬಿಸಿ ಅಭ್ಯರ್ಥಿಗಳಿಗೆ 112, ಎಸ್‌ಟಿ ಅಭ್ಯರ್ಥಿಗಳಿಗೆ 31 ಹಾಗೂ ಎಸ್‌ಸಿ ಅಭ್ಯರ್ಥಿಗಳಿಗೆ 62 ಹುದ್ದೆಗಳನ್ನು ಮೀಸಲಿಡಲಾಗಿದೆ ಎಂದು ಬ್ಯಾಂಕ್ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. 

ಎರಡು ಹಂತದ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳನ್ನು ದೇಶದ ವಿವಿಧೆಡೆ ಇರುವ ಶಾಖೆಗಳಲ್ಲಿ ಪ್ರೊಬೆಷನರಿ ಆಫೀಸರ್‌ಗಳಾಗಿ ನೇಮಕ ಮಾಡಲಿದೆ. 

ದೇಶದ ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 20 ವರ್ಷ ಮತ್ತು ಗರಿಷ್ಠ 30 ವರ್ಷ ಇರಬೇಕು. ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷಗಳ ವಯೋಮಿತಿಯಲ್ಲಿ ಸಡಿಲಿಕೆ ಇದೆ. 

ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 600 ರೂ.ಮತ್ತು ಎಸ್‌ಸಿ/ಎಸ್‌ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 100 ರೂ. ಶುಲ್ಕ ನಿಗದಿಪಡಿಸಲಾಗಿದೆ. ಆನ್‌ಲೈನ್‌ನಲ್ಲಿಯೇ ಅರ್ಜಿ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ. 

ಅಕ್ಟೋಬರ್‌ನಲ್ಲಿ ಪೂರ್ವಭಾವಿ ಹಾಗೂ ನವೆಂಬರ್‌ನಲ್ಲಿ ಮುಖ್ಯ ಪರೀಕ್ಷೆಗಳು ನಡೆಯಲಿವೆ. ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಐದು ನಗರಗಳಲ್ಲಿ ಪರೀಕ್ಷಾ ಕೇಂದ್ರಗಳು ಇರಲಿವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವೆಬ್‌ಸೈಟ್‌ಗೆ ಕ್ಲಿಕ್ ಮಾಡಿ. http://www.indianbank.in/

Follow Us:
Download App:
  • android
  • ios