2025ರ ಬಜೆಟ್‌ನಲ್ಲಿ ತೆರಿಗೆ ವಿನಾಯಿತಿಯಿಂದ ಹಿಡಿದು ಸಾಲದ ಮಿತಿ ಹೆಚ್ಚಳದವರೆಗೆ ಹಲವು ದೊಡ್ಡ ಬದಲಾವಣೆಗಳಾಗಿವೆ. ರೈತರು, MSME, ಸ್ಟಾರ್ಟ್‌ಅಪ್‌ಗಳು ಮತ್ತು ಸಾಮಾನ್ಯ ನಾಗರಿಕರು, ಎಲ್ಲರಿಗೂ ಈ ಬಜೆಟ್‌ನಲ್ಲಿ ಏನಾದರು ಒಂದು ಸಿಕ್ಕಿದೆ.
2025ರ ಕೇಂದ್ರ ಬಜೆಟ್: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025ರ ಬಜೆಟ್ನಲ್ಲಿ ರೈತರಿಂದ ಹಿಡಿದು ಉದ್ಯೋಗಿಗಳವರೆಗೆ ಎಲ್ಲರಿಗೂ ಉಡುಗೊರೆಗಳ ಸುರಿಮಳೆಗೈದಿದ್ದಾರೆ. ಬಜೆಟ್‌ನ 20 ದೊಡ್ಡ ಘೋಷಣೆಗಳನ್ನು ನೋಡೋಣ...
1. ಆದಾಯ ತೆರಿಗೆ ವಿನಾಯಿತಿ: ಹೊಸ ನಿಯಮದ ಪ್ರಕಾರ 12 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ಇಲ್ಲ.
2. ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮಿತಿ ಹೆಚ್ಚಳ: ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಮೂಲಕ ರೈತರಿಗೆ ಸಿಗುವ ಸಾಲದ ಮಿತಿಯನ್ನು ಹೆಚ್ಚಿಸಲಾಗಿದೆ. ಇದರಿಂದ 7.7 ಕೋಟಿ ರೈತರು, ಮೀನುಗಾರರು ಮತ್ತು ಡೈರಿ ರೈತರಿಗೆ ಲಾಭವಾಗಲಿದೆ. ಅವರು ಈಗ 3 ಲಕ್ಷ ರೂ. ಬದಲಿಗೆ 5 ಲಕ್ಷ ರೂ.ವರೆಗೆ ಸಾಲ ಪಡೆಯಬಹುದು.
3. ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ 10 ಕೋಟಿ ರೂ. ಸಾಲ: ಸೂಕ್ಷ್ಮ ಮತ್ತು ಸಣ್ಣ ಉದ್ಯಮ ನಡೆಸುವವರು ಈಗ 5 ಕೋಟಿ ರೂ. ಬದಲಿಗೆ 10 ಕೋಟಿ ರೂ.ವರೆಗೆ ಸಾಲ ಪಡೆಯಬಹುದು.
4. ಸ್ಟಾರ್ಟ್‌ಅಪ್‌ಗಳಿಗೆ 20 ಕೋಟಿ ರೂ.ವರೆಗೆ ಸಾಲ: ಸ್ಟಾರ್ಟ್‌ಅಪ್‌ಗಳಿಗೆ ಈಗ 20 ಕೋಟಿ ರೂ.ವರೆಗೆ ಸಾಲ ಸಿಗಲಿದೆ. ಮೊದಲು ಈ ಮಿತಿ 10 ಕೋಟಿ ರೂ. ಆಗಿತ್ತು.
5. MSMEಗಳಿಗೆ 20 ಕೋಟಿ ರೂ.ವರೆಗೆ ಸಾಲ: ರಫ್ತಿಗೆ ಸಂಬಂಧಿಸಿದ MSMEಗಳು 20 ಕೋಟಿ ರೂ.ವರೆಗೆ ಸಾಲ ಪಡೆಯಬಹುದು.
6. ಜೀವರಕ್ಷಕ ಔಷಧಿಗಳ ಬೆಲೆ ಕಡಿಮೆ: ಸರ್ಕಾರವು 36 ಜೀವರಕ್ಷಕ ಔಷಧಿಗಳನ್ನು ಮೂಲ ಸೀಮಾ ಸುಂಕದಿಂದ ಸಂಪೂರ್ಣವಾಗಿ ವಿನಾಯಿತಿ ಪಡೆದ ಔಷಧಿಗಳ ಪಟ್ಟಿಗೆ ಸೇರಿಸಿದೆ.
7. 5 ಲಕ್ಷ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ‘ಫಸ್ಟ್-ಮೀ ಎಂಟರ್‌ಪ್ರೆನ್ಯೂರ್ಸ್’ ಯೋಜನೆ ಆರಂಭವಾಗಲಿದೆ. ಇದರಿಂದ ಮುಂದಿನ 5 ವರ್ಷಗಳಲ್ಲಿ 2 ಕೋಟಿ ರೂ.ವರೆಗೆ ಸಾಲ ನೀಡಲಾಗುವುದು.
8. ಪಾದರಕ್ಷೆ ಮತ್ತು ಚರ್ಮ ಕ್ಷೇತ್ರಕ್ಕೆ ಫೋಕಸ್ ಉತ್ಪನ್ನ ಯೋಜನೆ ಜಾರಿಗೆ ಬರಲಿದೆ. ಇದರಿಂದ 22 ಲಕ್ಷ ಜನರಿಗೆ ಉದ್ಯೋಗ ಸಿಗಲಿದೆ. 4 ಲಕ್ಷ ಕೋಟಿ ರೂ. ವ್ಯವಹಾರವಾಗಲಿದೆ. 1.1 ಲಕ್ಷ ಕೋಟಿ ರೂ.ಗಿಂತ ಹೆಚ್ಚು ರಫ್ತಾಗುವ ನಿರೀಕ್ಷೆಯಿದೆ.
9. 5 IITಗಳಲ್ಲಿ 6,500 ಸೀಟುಗಳು ಹೆಚ್ಚಾಗಲಿವೆ. ಇದಕ್ಕಾಗಿ ಮೂಲಸೌಕರ್ಯ ನಿರ್ಮಾಣವಾಗಲಿದೆ.
10. ಮುಂದಿನ 5 ವರ್ಷಗಳಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ 75 ಸಾವಿರ ಸೀಟುಗಳು ಹೆಚ್ಚಾಗಲಿವೆ.
11.ಮುಂದಿನ 3 ವರ್ಷಗಳಲ್ಲಿ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಹಗಲಿನ ಆರೈಕೆ ಕ್ಯಾನ್ಸರ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು. 2025-26ರಲ್ಲಿ 200 ಕೇಂದ್ರಗಳನ್ನು ಸ್ಥಾಪಿಸಲಾಗುವುದು.
12. ಮುಂದಿನ 10 ವರ್ಷಗಳಲ್ಲಿ 120 ಹೊಸ ವಿಮಾನ ನಿಲ್ದಾಣಗಳು ನಿರ್ಮಾಣವಾಗಲಿವೆ. ಇದರಿಂದ ಪ್ರಾದೇಶಿಕ ಸಂಪರ್ಕ ಹೆಚ್ಚಾಗಲಿದೆ.
13. ಪಶ್ಚಿಮ ಕೋಶಿ ಕಾಲುವೆ ERM ಯೋಜನೆಗೆ ಆರ್ಥಿಕ ನೆರವು ನೀಡಲಾಗುವುದು. ಬಿಹಾರದ ಮಿಥಿಲಾಂಚಲ್‌ನಲ್ಲಿ 50 ಸಾವಿರ ಹೆಕ್ಟೇರ್‌ಗಿಂತ ಹೆಚ್ಚು ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದೆ.
14. ವಿಮಾ ಕ್ಷೇತ್ರದಲ್ಲಿ ನೇರ ವಿದೇಶಿ ಹೂಡಿಕೆಯ ಮಿತಿಯನ್ನು 74% ರಿಂದ 100%ಕ್ಕೆ ಹೆಚ್ಚಿಸಲಾಗುವುದು.
15. ರಾಜ್ಯ ಸರ್ಕಾರಗಳೊಂದಿಗೆ ಸೇರಿ 50 ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲಾಗುವುದು.
16. ಹೋಮ್‌ಸ್ಟೇ ತೆರೆಯಲು ಮುದ್ರಾ ಯೋಜನೆಯಿಂದ ಸಾಲ ಸಿಗಲಿದೆ.
17.ಅಸ್ಸಾಂನ ನಾಮರೂಪ್‌ನಲ್ಲಿ ವಾರ್ಷಿಕ 12.7 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಯೂರಿಯಾ ಘಟಕ ಸ್ಥಾಪನೆಯಾಗಲಿದೆ.
18. ಜಾಗತಿಕ ಅನುಭವ ಮತ್ತು ಪಾಲುದಾರಿಕೆಯೊಂದಿಗೆ ಕೌಶಲ್ಯ ಅಭಿವೃದ್ಧಿಗಾಗಿ 5 ರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
19. ಗ್ರಾಮೀಣ ಪ್ರದೇಶಗಳ ಎಲ್ಲಾ ಸರ್ಕಾರಿ ಪ್ರೌಢಶಾಲೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬ್ರಾಡ್‌ಬ್ಯಾಂಡ್ ಸಂಪರ್ಕ (ಭಾರತ್‌ನೆಟ್)ದೊಂದಿಗೆ ಸಂಪರ್ಕಿಸಲಾಗುವುದು.
20. ಶಿಕ್ಷಣಕ್ಕಾಗಿ AI (ಕೃತಕ ಬುದ್ಧಿಮತ್ತೆ)ಯಲ್ಲಿ ಉತ್ಕೃಷ್ಟತಾ ಕೇಂದ್ರ ಸ್ಥಾಪನೆಯಾಗಲಿದೆ. 500 ಕೋಟಿ ರೂ. ವೆಚ್ಚವಾಗಲಿದೆ.
ಬಜೆಟ್ ಏನೇ ಇರಲಿ, ಭಾರತದ ಇಲ್ಲಿ ಮಾತ್ರ ಒಂದು ರೂಪಾಯಿ ತೆರಿಗೆ ಇಲ್ಲ
Budget 2025: ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಹಿಂದಿನ ಬಜೆಟ್‌ಗಿಂತ 5 ಕೋಟಿ ಹೆಚ್ಚು ನೀಡಿದ ನಿರ್ಮಲಾ!
