Asianet Suvarna News Asianet Suvarna News

ಜಾಗತಿಕ ಬ್ರ್ಯಾಂಡ್ ಮೌಲ್ಯ: ಗೆದ್ದು ಸೋತ ಮೋದಿ ಭಾರತ!

ಬ್ರ್ಯಾಂಡ್​ ಫೈನಾನ್ಸ್​ ವಾರ್ಷಿಕ ಬ್ರ್ಯಾಂಡ್​- 2018ರ ವರದಿ ಪ್ರಕಟ! ಭಾರತದ ಬ್ರ್ಯಾಂಡ್​ ಮೌಲ್ಯ ಶೇ.5 ರಷ್ಟು ಏರಿಕೆ! 10 ರಾಷ್ಟ್ರಗಳ ಸಾಲಿನಲ್ಲಿ ಭಾರತಕ್ಕೆ 9ನೇ ಸ್ಥಾನ! 2018ರಲ್ಲಿ  2,159 ಬಿಲಿಯನ್ ಡಾಲರ್​ ಬ್ರ್ಯಾಂಡ್​ ಮೌಲ್ಯ! ಅಮೆರಿಕ, ಚೀನಾ ಬ್ರ್ಯಾಂಡ್ ಮೌಲ್ಯ ಪಟ್ಟಿಯಲ್ಲಿ ಮೊದಲೆರಡು ಸ್ಥಾನ

India is 9th Most Valuable Nation Brand
Author
Bengaluru, First Published Oct 21, 2018, 4:53 PM IST

ನವದೆಹಲಿ(ಅ.21): ವಿಶ್ವದ ಅತಿ ಹೆಚ್ಚು ಮೌಲ್ಯಯುತ ರಾಷ್ಟ್ರಗಳ ಸಾಲಿನಲ್ಲಿ ಭಾರತದ ಬ್ರ್ಯಾಂಡ್​ ಮೌಲ್ಯ ಶೇ.5 ರಷ್ಟು ಏರಿಕೆ ಕಂಡಿದೆ. ಈ ಮೂಲಕ ಭಾರತ ಅಗ್ರ 10 ರಾಷ್ಟ್ರಗಳ ಸಾಲಿನಲ್ಲಿ 9ನೇ ಸ್ಥಾನ ಪಡೆದಿದೆ.

ಬ್ರ್ಯಾಂಡ್​ ಫೈನಾನ್ಸ್​ ವಾರ್ಷಿಕ ಬ್ರ್ಯಾಂಡ್​- 2018ರ ವರದಿ ಪ್ರಕಟವಾಗಿದ್ದು, ಭಾರತದ ಕಳಪೆ ಸಾಧನೆ ಚಿಂತೆಗೀಡು ಮಾಡಿದೆ. ಕಳೆದ ವರ್ಷ ಭಾರತ 8ನೇ ಸ್ಥಾನ ಪಡಿದಿದ್ದು, 2018ರಲ್ಲಿ ಒಂದು ಅಂಕ ಕಳೆದುಕೊಂಡು 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. 

ಆದರೂ, ಶೇ.5  ಬ್ರ್ಯಾಂಡ್​ ಮೌಲ್ಯ ಏರಿಕೆ ಆಗಿದ್ದು, 2016ರಲ್ಲಿ 'ಬ್ರ್ಯಾಂಡ್​ ಇಂಡಿಯಾ' ಮೌಲ್ಯ 2,046 ಬಿಲಿಯನ್​ ಡಾಲರ್​ನಷ್ಟಿತ್ತು. ಕಳೆದ ಎರಡು ವರ್ಷಗಳಲ್ಲಿ 113 ಬಿಲಿಯನ್​ ಡಾಲರ್​ನಷ್ಟು ಏರಿಕೆ ಕಂಡು 2018ರಲ್ಲಿ  2,159 ಬಿಲಿಯನ್ ಡಾಲರ್​ ಬ್ರ್ಯಾಂಡ್​ ಮೌಲ್ಯ ಹೊಂದಿದೆ.

ಅಮೆರಿಕ ಮತ್ತು ಚೀನಾ ಕ್ರಮವಾಗಿ 25,899 ಹಾಗೂ 12,779 ಶತಕೋಟಿ ಡಾಲರ್​ ಮೌಲ್ಯದೊಂದಿಗೆ ಮೊದಲ ಎರಡು ಸ್ಥಾನದಲ್ಲಿವೆ. ಕಳೆದ ವರ್ಷದಿಂದ ಅಮೆರಿಕದ ಆರ್ಥಿಕತೆ ತ್ವರಿತಗತಿಯಲ್ಲಿ ಬೆಳೆಯುತ್ತಿದ್ದು, ವರ್ಷದ  ಬ್ರ್ಯಾಂಡ್​ ಮೌಲ್ಯದ ಬೆಳವಣಿಗೆ ಶೇ.23 ರಷ್ಟಿದೆ. ಚೀನಾ ಶೇ.25 ರಷ್ಟು  ಬ್ರ್ಯಾಂಡ್​ ಮೌಲ್ಯವನ್ನು ಕಾಪಾಡಿಕೊಂಡಿದೆ. ನಂತರದ ಸ್ಥಾನದಲ್ಲಿ ಜರ್ಮನಿ, ಇಂಗ್ಲೆಂಡ್​, ಜಪಾನ್ ಮತ್ತು ಫ್ರಾನ್ಸ್​ ರಾಷ್ಟ್ರಗಳು ಇವೆ.

ಮುಂದಿನ ಐದು ವರ್ಷಗಳಲ್ಲಿ ಜಗತ್ತಿನ ವಿವಿಧ ದೇಶಗಳ ಬೃಹತ್ ಕಂಪನಿಗಳ ಎಲ್ಲಾ  ಬ್ರ್ಯಾಂಡ್​ ಉತ್ಪನ್ನಗಳ ಅಂದಾಜು ಮಾರಾಟ ಮೌಲ್ಯದ ಆಧಾರದಲ್ಲಿ ಆಯಾ ದೇಶದ ರಾಷ್ಟ್ರೀಯ  ಬ್ರ್ಯಾಂಡ್​ ಮೌಲ್ಯವನ್ನು ನಿರ್ಧರಿಸಲಾಗುತ್ತದೆ.

Follow Us:
Download App:
  • android
  • ios