ಜುಲೈ ತಿಂಗಳ ಅಂತ್ಯದೊಳಗೆ ಐಟಿ ರಿಟರ್ನ್ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಇನ್ನು 20 ದಿನಗಳು ಮಾತ್ರ ಬಾಕಿ ಉಳಿದಿದೆ. ರಿಟರ್ನ್ ಸಲ್ಲಿಕೆ ಮಾಡಲು ಪರಿಣಿತರು ಕನಿಷ್ಠ 1500 ರೂಪಾಯಿ ಚಾರ್ಜ್ ಮಾಡುತ್ತಾರೆ. ಇದೀಗ ಜಿಯೋ ಫೈನಾನ್ಸ್ ಕೇವಲ 24 ರೂಪಾಯಿಯಲ್ಲಿ ಈ ಸೇವೆ ನೀಡುತ್ತಿದೆ.

ಬೆಂಗಳೂರು (ಜು.11) ಆದಾಯ ತೆರಿಗೆ ವಿವರ ಸಲ್ಲಿಕೆಗೆ ಜುಲೈ 31 ಕೊನೆಯ ದಿನಾಂಕ. ಈ ಬಾರಿ ದಿನಾಂಕ ವಿಸ್ತರಣೆ ಮಾಡುವ ಸಾಧ್ಯತೆಗಳಿಲ್ಲ. ಇನ್ನುಳಿದ 20 ದಿನಗಳಲ್ಲಿ ಐಟಿ ರಿಟರ್ನ್ ಫೈಲ್ ಮಾಡಬೇಕಿದೆ. ಸಿಎ ಸೇರಿದಂತೆ ಪರಿಣಿತರಿಂದ ಆದಾಯ ತೆರಿಗೆ ವಿವರ ಸಲ್ಲಿಕೆ ಮಾಡಲು ಕನಿಷ್ಠ 1500 ರೂಪಾಯಿ ಶುಲ್ಕ ವಿಧಿಸುತ್ತಾರೆ. 12 ಲಕ್ಷ ರೂಪಾಯಿ ವರೆಗೆ ಶೂನ್ಯ ತೆರಿಗೆ ಕಾರಣ ಈ ಮೊತ್ತದೊಳಗಿನ ವೇತನದಾರರಿಗೆ ಯಾವುದೇ ರಿಟರ್ನ್ ಇರುವುದಿಲ್ಲ. ಹೀಗಾಗಿ ಕೇವಲ ಫೈಲಿಂಗ್ ಮಾಡಲು 1500 ರೂಪಾಯಿ ಪಾವತಿ ಮಾಡುವುದು ದುಬಾರಿಯಾಗುತ್ತದೆ. ಇದಕ್ಕೆ ಪರಿಹಾರವಾಗಿ ಜಿಯೋ ಫೈನಾನ್ಸ್‌ನಿಂದ ಐಟಿ ರಿಟರ್ನ್ಸ್ ಸೇವೆ ಆರಂಭಗೊಂಡಿದೆ. ಕೇವಲ 24 ರೂಪಾಯಿಯಲ್ಲಿ ಐಟಿ ರಿಟರ್ನ್ಸ್ ಫೈಲ್ ಮಾಡಲು ಸಾಧ್ಯವಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಿಯೋ ರಿವಾರ್ಡ್ ಪಾಯಿಂಟ್ಸ್

ಭಾರತದಲ್ಲಿ ಆದಾಯ ತೆರಿಗೆ ವಿವಿರ ಸಲ್ಲಿಕೆ ಸರಳಗೊಳಿಸಲು ಜಿಯೋ ಫೈನಾನ್ಸ್ ಹೊಸ ಸೇವೆ ಆರಂಭಿಸಿದೆ. ವಿಶೇಷ ಅಂದರೆ ತೆರಿಗೆದಾರರು ಆದಾಯ ತೆರಿಗೆ ವಿವರ ಸಲ್ಲಿಕೆ ಮಾಡುವಾಗ ಶೇಕಡಾ 25ರಷ್ಟು ಜಿಯೋ ರಿವಾರ್ಡ್ ಪಾಯಿಂಟ್ಸ್ ಪಡೆಯಲಿದ್ದಾರೆ. ಈ ಅಂಕಗಳನ್ನು ಮುಂದಿನ ದಿನಗಳಲ್ಲಿ ಆ್ಯಪ್ ಮೂಲಕ ಬ್ರ್ಯಾಂಡ್ ವೋಚರ್, ಶಾಪಿಂಗ್ ಡೀಲ್‌ಗಳಾಗಿ ಪರಿವರ್ತನೆ ಮಾಡಲು ಸಾಧ್ಯವಿದೆ.

ಜಿಯೋಫೈನಾನ್ಸ್ ಈ ಸೇವೆಯನ್ನು ನೋಂದಾಯಿತ ಇ-ರಿಟರ್ನ್ ಇಂಟರ್ಮೀಡಿಯರಿ ಆಗಿರುವ ಟ್ಯಾಕ್ಸ್‌ಬಡ್ಡಿ (ಎಸ್‌ಎಸ್‌ ಬಿಎ ಇನ್ನೊವೇಶನ್ಸ್‌ ಲಿಮಿಟೆಡ್) ಸಹಯೋಗದೊಂದಿಗೆ ನೀಡಲಾಗಿದೆ. ಇದು ಬಿಲ್ಟ್‌ ಇನ್‌ ಕಂಪ್ಲಯನ್ಸ್‌ ಟೂಲ್ಸ್‌, ಟ್ಯಾಕ್ಸ್‌ ಪ್ಲಾನರ್‌, ವೃತ್ತಿಪರ ಸಲಹೆಗಳ ಸೇವೆಯನ್ನು ಒಳಗೊಂಡಿದೆ. ಬಳಕೆದಾರರು 80 ಸಿ ಮತ್ತು 80 ಡಿ ಅಡಿಯಲ್ಲಿ ತೆರಿಗೆ ಕಡಿತಗಳನ್ನು ಪಡೆಯಲು ಮತ್ತು ತೆರಿಗೆ ಪದ್ಧತಿಗಳನ್ನು ಪರಿಶೀಲಿಸಲು ನೆರವು ನೀಡುತ್ತದೆ. ಬಳಕೆದಾರರ ಎಲ್ಲಾ ಡೇಟಾವನ್ನು ಟ್ಯಾಕ್ಸ್‌ಬಡ್ಡಿಯ ಎನ್‌ಕ್ರಿಪ್ಟ್ ಮಾಡಲಾದ ಫ್ರೇಮ್‌ವರ್ಕ್‌ನಲ್ಲಿ ಮಾತ್ರ ನಿರ್ವಹಿಸಲಾಗುತ್ತದೆ. ಜಿಯೋ ಫೈನಾನ್ಸ್ ಈ ಡೇಟಾವನ್ನು ಯಾವುದೇ ಉದ್ದೇಶಕ್ಕಾಗಿ ಬಳಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ತೆರಿಗೆದಾರರು ಸುಲಭಾಗಿ ಐಟಿ ರಿಟರ್ನ್ ಸಲ್ಲಿಕೆ

ಯಾವಾಗಲೂ ಸಂಕೀರ್ಣವಾದ ಆರ್ಥಿಕ ಕಾರ್ಯಗಳನ್ನು ಸರಳಗೊಳಿಸುವುದು ಮತ್ತು ಬಳಕೆದಾರರಿಗೆ ಅವರ ಆರ್ಥಿಕ ಯೋಗಕ್ಷೇಮದ ಮೇಲೆ ಸಂಪೂರ್ಣ ನಿಯಂತ್ರಣವನ್ನು ನೀಡುವುದೇ ಜಿಯೋ ಫೈನಾನ್ಸ್‌ ಗುರಿಯಾಗಿದೆ ಎಂದು ಜಿಯೋ ಅಧಿಕಾರಿ ಸುರ್ಬೆ ಎಸ್ ಶರ್ಮಾ ಹೇಳಿದ್ದಾರೆ. ನಮ್ಮ ಅತ್ಯಂತ ಸುಲಭ ಮತ್ತು ಕೈಗೆಟುಕುವ ತೆರಿಗೆ ಮಾಡ್ಯೂಲ್‌ನೊಂದಿಗೆ, ನಾವು ಐಟಿಆರ್ (ITR) ಸಲ್ಲಿಕೆಯಲ್ಲಿನ ಸಾಂಪ್ರದಾಯಿಕ ಅಡೆತಡೆಗಳನ್ನು ಮತ್ತು ಹೆಚ್ಚಿನ ವೆಚ್ಚಗಳನ್ನು ಬಗೆಹರಿಸುತ್ತಿದ್ದೇವೆ. ಇದು ಸಂಪೂರ್ಣ ಸುರಕ್ಷಿತವಾಗಿದೆ. ಮತ್ತು ಬಳಕೆದಾರರಿಗೆ ಲಾಭದಾಯವಾಗಿದೆ ಎಂದಿದ್ದಾರೆ.

ಈ ಮಾದರಿಯಲ್ಲಿ 'ಡು-ಇಟ್-ಯುವರ್‌ಸೆಲ್ಫ್' ಯೋಜನೆಗಳು ಆದಾಯ ತೆರಿಗೆ ಇಲಾಖೆಯ ಪೋರ್ಟಲ್‌ನಿಂದ ಸಮಗ್ರ ದತ್ತಾಂಶವನ್ನು ಪಡೆದುಕೊಳ್ಳುವುದರೊಂದಿಗೆ ಐಚ್ಛಿಕ ನೋಟಿಸ್ ನಿರ್ವಹಣೆಯನ್ನು ಒದಗಿಸುತ್ತವೆಯಾದರೂ, ತಜ್ಞರ ನೆರವಿನ ಆಯ್ಕೆಗಳು, ಉಚಿತ ನೋಟಿಸ್ ನಿರ್ವಹಣೆಯನ್ನು ಒಳಗೊಂಡಿರುತ್ತವೆ. ಹಾಗೂ ಸಲ್ಲಿಸಿದ ರಿಟರ್ನ್‌ಗೆ ಸಂಬಂಧಿಸಿ ನಂತರದಲ್ಲಿ ಯಾವುದೇ ಅಧಿಕೃತ ತೆರಿಗೆ ನೋಟಿಸ್ ಬಂದರೆ, ತಂಡವು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಅದಕ್ಕೆ ಉತ್ತರಿಸುವ ಪ್ರಕ್ರಿಯೆಯನ್ನು ನಿರ್ವಹಿಸುತ್ತದೆ ಎಂದು ಜಿಯೋ ಫೈನಾನ್ಸ್‌ ತಿಳಿಸಿದೆ.