ಐಡಿಯಾ-ವೋಡಫೋನ್ ವಿಲೀನ ವಿಚಾರ! ಟ್ವಿಟ್ಟರ್ ನಲ್ಲಿ ಜಿಯೋ-ವೋಡಫೊನ್ ಟ್ವೀಟ್ ವಾರ್! ವಿಲೀನ ಪ್ರಕ್ರಿಯೆ ಕುರಿತು ವೋಡಫೋನ್ ಕಾಲೆಳೆದ ಜಿಯೋ! 2016 ರಿಂದಲೂ ದೇಶದ ಜನರನ್ನು ಒಗ್ಗೂಡಿಸಿದ್ದು ನಾನು ಎಂದ ಜಿಯೋ! ವೋಡಫೋನ್ ಟ್ವೀಟ್ ಗೆ ನಾಜೂಕಾಗಿಯೇ ಕಾಲೆಳೆದ ಜಿಯೋ

ಮುಂಬೈ(ಸೆ.5): ವ್ಯಾಪಾರ ಅಂದ್ಮೇಲೆ ಒಂದು ಮಾತು ಹೋಗುತ್ತೆ, ಒಂದು ಮಾತು ಬರುತ್ತೆ. ಅದರಲ್ಲೂ ಒಂದೇ ಬಗೆಯ ವ್ಯವಹಾರದಲ್ಲಿ ತೊಡಗಿಕೊಂಡಿರುವ ಎರಡು ಕಂಪೊನಿಗಳು ಪರಸ್ಪರರ ಕಾಲೆಳೆಯುವುದು, ಪರಸ್ಪರ ನಡುವೆ ಜಿದ್ದಾಜಿದ್ದಿ ಇವೆಲ್ಲಾ ತೀರ ಸಾಮಾನ್ಯ. ಅದರಂತೆ ಭಾರತದ ಟೆಲಿಕಾಂ ದಿಗ್ಗಜ ಸಂಸ್ಥೆಗಳಾದ, ಇತ್ತಿಚಿಗೆ ವಿಲೀನಗೊಂಡ ಐಇಡಿಯಾ-ವೋಡಫೋನ್ ಮತ್ತಯ ಜಿಯೋ ಪರಸ್ಪರ ನಾಜೂಕಾಗಿ ಕಾಲೆಳೆದುಕೊಂಡಿವೆ.

ವೊಡಾಪೋನ್​ ಮತ್ತು ಐಡಿಯಾ ಎರಡೂ ವಿಲೀನವಾಗಿರುವುದು ನಮಗೆಲ್ಲಾ ತಿಳಿದ ವಿಚಾರ. ಈ ಕುರಿತು ವೋಡಾಫೊನ್ ತನ್ನ ಟ್ವಿಟ್ಟರ್ ಅಕೌಂಟ್ ನಲ್ಲಿ ಬರೆದುಕೊಂಡಿತ್ತು. ಎರಡೂ ಬೃಹತ್​ ಕಂಪೆನಿಗಳು ಒಂದಾಗಿರುವ ಸೂಚನೆಯಾಗಿ ವೊಡಾಪೋನ್​ ಹಾಗೂ ಐಡಿಯಾ ಹೆಸರು ಜೊತೆಗಿರುವ ವೆಬ್​ಸೈಟ್ ವಿಳಾಸವನ್ನು ಟ್ವೀಟ್​ ಮಾಡಿತ್ತು.

ಈ ಟ್ವೀಟ್​ಗೆ ತನ್ನದೇ ಆದ ರೀತಿಯಲ್ಲಿ ರೀ-ಟ್ವೀಟ್​ ಮಾಡಿ ಛೇಡಿಸಿರುವ ಜಿಯೋ, 2016ರಿಂದ ಜನರನ್ನು ಒಗ್ಗೂಡಿಸಿಉತ್ತಿರುವ ಜಿಯೋ, ವೊಡಾಫೋನ್​, ಐಡಿಯಾವನ್ನು ಕೂಡ ಪ್ರೀತಿಸುತ್ತದೆ ಎಂದು ಹೇಳಿದೆ. ಜಿಯೋದ ಮಾತಿನ ಹಿಂದೆ ವ್ಯಂಗ್ಯೋಕ್ತಿಯೂ ಇದೆ ಎಂಬುದು ಐಡಿಯಾ-ವೋಡಫೋನ್ ಗೆ ತಿಳಿದ ವಿಚಾರವೇನಲ್ಲ. 

ಅಂದಹಾಗೆ, ಮಾರುಕಟ್ಟೆಯಲ್ಲಿ ಫಿನಿಕ್ಸ್​ನಂತೆ ನುಗ್ಗಿ, ಭಾರಿ ಸಂಚಲನ ಉಂಟುಮಾಡಿದ್ದ ಜಿಯೋವನ್ನು ಹೇಗಾದರೂ ಬಗ್ಗುಬಡಿಯಬೇಕೆಂಬ ಉದ್ದೇಶದಿಂದಲೇ, ಈ ಎರಡೂ ಕಂಪನಿಗಳು ಒಂದಾಗಲು ಒಪ್ಪಂದ ಮಾಡಿಕೊಂಡಿದ್ದು ಗುಟ್ಟಿನ ವಿಷೆಯವೇನಲ್ಲ.