Asianet Suvarna News Asianet Suvarna News

ಐಸಿಐಸಿಐ ಗ್ರಾಹಕರಿಗೆ ಬಂಪರ್ ಆಫರ್: ಲಾಭದ ಪಾಲು ಸೂಪರ್!

ಐಸಿಐಸಿಐ ಗ್ರಾಹಕರಿಗೆ ಬಂತೊಂದು ಸಿಹಿ ಸುದ್ದಿ! ಸಂಸ್ಥೆಯ ತ್ರೈಮಾಸಿಕ ಲಾಭಾಂಶದಲ್ಲಿ ಭಾರೀ ಏರಿಕೆ! 134.22 ಕೋಟಿ ರೂ. ತ್ರೈಮಾಸಿಕ ಲಾಭ ಗಳಿಸಿದ ಐಸಿಐಸಿಐ! ಲಾಭದ ಪಾಲು ಗ್ರಾಹಕರಿಗೆ ನೀಡಲು ಷೇರಿನ ಬೆಲೆ ಹೆಚ್ಚಳ

ICICI Q2 Profit Reports 3.22 Percent Rice
Author
Bengaluru, First Published Oct 21, 2018, 12:57 PM IST
  • Facebook
  • Twitter
  • Whatsapp

ನವದೆಹಲಿ(ಅ.21): ದೇಶದ ಪ್ರಮುಖ ಹೂಡಿಕೆ ಸೇವಗಳ ಐಸಿಐಸಿಐ ಬ್ಯಾಂಕ್​ ಜುಲೈ- ಸೆಪ್ಟೆಂಬರ್​ ತ್ರೈಮಾಸಿಕದಲ್ಲಿ ತೆರಿಗೆ ನಂತರದ ಆದಾಯದಲ್ಲಿ (ಪಿಎಟಿ) 134.22 ಕೋಟಿ ರೂ.ಲಾಭಾಂಶ ಗಳಿಸಿದೆ. ಈ ಮೂಲಕ ಐಸಿಐಸಿಐ ಶೇ.3.22 ರಷ್ಟು ಪ್ರಗತಿ ಸಾಧಿಸಿದೆ.

2017ರ ಇದೇ ಅವಧಿಯಲ್ಲಿ ಸಂಸ್ಥೆಯ ಪಿಎಟಿ ಮೊತ್ತ 130.03 ಕೋಟಿ ರೂ. ಆಗಿತ್ತು.  2017ರ ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ ಸಂಸ್ಥೆಯ ಒಟ್ಟು ಆದಾಯ 455.10 ಕೋಟಿ ರೂ.ಆಗಿತ್ತು.

ಲಾಭಾಂಶದ ಬೆನ್ನಲ್ಲೇ ಸಂಸ್ಥೆಯು ತನ್ನ ಗ್ರಾಹಕರಿಗೆ ಪ್ರತಿ ಷೇರಿನ ಮೇಲೆ 3.70 ರೂ. ಮಧ್ಯಂತರ ಡಿವಿಡೆಂಡ್ (ಬ್ಯಾಂಕ್‌ಗಳ ಠೇವಣಿಗಿಂತ ಹೆಚ್ಚು ಪ್ರತಿಫಲದ ನಿರೀಕ್ಷೆ) ಘೋಷಿಸಿದೆ.
ಪ್ರಸಕ್ತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಕಂಪನಿಯ ಬಡ್ಡಿ ಆದಾಯ ಶೇ.4 ಹೆಚ್ಚಳವಾಗಿ 292 ಕೋಟಿ ರೂ.ಗೆ ಏರಿಕೆ ಆಗಿದೆ. ವಿತರಣಾ ಉದ್ಯಮದಿಂದ ಶೇ.19 ಆದಾಯ ಹೆಚ್ಚಳವಾಗಿ 128 ಕೋಟಿ ರೂ. ಲಾಭಾಂಶ ಬಂದಿದೆ.

ಈ ಕುರಿತು ಮಾಹಿತಿ ನೀಡಿರುವ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಕುಮಾರ್, ಭಾರತೀಯ ಬಂಡವಾಳ ಮಾರುಕಟ್ಟೆಯ ದೀರ್ಘಕಾಲದ ನಿರೀಕ್ಷೆಗಳಿಗೆ ಸಂಸ್ಥೆ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

Follow Us:
Download App:
  • android
  • ios