Asianet Suvarna News Asianet Suvarna News

‘ಈ’ ವಿಷಯದಲ್ಲಿ ನಾನೂ ಟ್ರಂಪ್ ಒಂದೇ: ಮೋದಿ!

ಅಭಿವೃದ್ಧಿಯೇ ನನ್ನ ಮತ್ತು ಟ್ರಂಪ್ ಗುರಿ! ಪ್ರಧಾನಿ ನರೇಂದ್ರ ಮೋದಿ ಅಭಿಮತ! ಅಭಿವೃದ್ಧಿಯಲ್ಲಿ ಭಾರತ-ಅಮೆರಿಕ ಪಾಲುದಾರ! ವಾಣಿಜ್ಯ ಸಮರ ಕೇವಲ ಒಂದು ಭಾಗವಷ್ಟೇ
 
 

I SHARE TRUMP'S VISION OF PROSPERITY FOR INDIA, US: MODI
Author
Bengaluru, First Published Aug 12, 2018, 5:37 PM IST

ನವದೆಹಲಿ(ಆ.12): ಭಾರತ-ಅಮೆರಿಕ ಅಭಿವೃದ್ಧಿ ವಿಷಯದಲ್ಲಿ ನನ್ನ ಹಾಗೂ ಟ್ರಂಪ್ ಅವರ ಗುರಿ ಒಂದೇ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ವಾಣಿಜ್ಯ ಹಾಗೂ ವೀಸಾ ನೀತಿಗಳಿಗೆ ಸಂಬಂಧಿಸಿದಂತೆ ಭಾರತ- ಅಮೆರಿಕದ ನಡುವಿನ ದ್ವಿಪಕ್ಷೀಯ ಸಂಬಂಧದಲ್ಲಿ ಅಸ್ಥಿರತೆ ಉಂಟಾಗಿರುವ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಜಾಗತಿಕ ವಣಿಜ್ಯ ಸಮರ, ಅಮೆರಿಕ-ಚೀನಾ ನಡುವಿನ ವೈಮನಸ್ಸು, ಜಾಗತಿಕ ತೈಲ ಬೆಲೆ ಏರಿಕೆ ಮುಂತಾದ ಹಲವು ಅಡೆತಡೆಗಳ ನಡುವೆಯೂ ನಾವಿಬ್ಬರೂ ನಮ್ಮ ರಾಷ್ಟ್ರದ ಹಿತ ಕಾಪಾಡಲು ಬದ್ಧ ಎಂದು ಮೋದಿ ಹೇಳಿದ್ದಾರೆ.

ಜಾಗತಿಕ ವಾಣಿಜ್ಯ ಏರುಪೇರು ಸಹಜ ವಿದ್ಯಮಾನವಾಗಿದ್ದು, ಇದರಿಂದ ಭಾರತ-ಅಮೆರಿಕ ನಡುವಿನ ಸಂಬಂಧಕ್ಕೆ ಧಕ್ಕೆಯಾಗಲಿದೆ ಎಂಬುದು ಕೇವಲ ಊಹಾಪೋಹ ಎಂದಿರುವ ಮೋದಿ, ವಾಣಿಜ್ಯದ ಹೊರತಾಗಿಯೂ ಎರಡೂ ರಾಷ್ಟ್ರಗಳ ನಡುವೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಹಕಾರ ಹೊಂದಿವೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ. 

ನಮ್ಮ ರಾಷ್ಟ್ರದ ಜನತೆಯ ಒಳಿತಿಗಾಗಿ ಅಮೆರಿಕ-ಭಾರತ ಪಾಲುದಾರಿಕೆಯ ಮೂಲಕ ನಾನು ಹಾಗೂ ಟ್ರಂಪ್ ಒಂದೇ ದೃಷ್ಟಿಕೋನ ಹೊಂದಿದ್ದೇವೆ, ನಾನು ಹಾಗೂ ಟ್ರಂಪ್ ಹಲವು ಬಾರಿ ಭೇಟಿ ಮಾಡಿದ್ದೇವೆ, ಹಲವು ಸಂದರ್ಭಗಳಲ್ಲಿ ಮಾತುಕತೆ ನಡೆಸಿದ್ದೇವೆ ಎಂದು ಮೋದಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಭಾರತ-ಅಮೆರಿಕ 2+2 ದ್ವಿಪಕ್ಷೀಯ ಮಾತುಕತೆ ನಡೆಯುವುದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಈ ಹೇಳಿಕೆ ನೀಡಿರುವುದು ಮತ್ತಷ್ಟು ಪ್ರಾಮುಖ್ಯತೆ ಪಡೆದಿದೆ.

Follow Us:
Download App:
  • android
  • ios