ವಿಶ್ವದ ಶ್ರೀಮಂತ ನಗರ ಯಾವುದು? ಈ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ವಿಶೇಷ ಅಂದರೆ ಈ ನಗರದಲ್ಲಿ 3.5 ಲಕ್ಷ ಮಿಲೇನಿಯರ್ಸ್ ಇದ್ದಾರೆ, 60 ಬಿಲಿನೇಯರ್ ಕೂಡ ಇದೆ ನಗರದಲ್ಲಿದ್ದಾರೆ. ಇದು ದುಬೈ, ಲಂಡನ್ ಅಲ್ಲ. 

ನವದೆಹಲಿ(ಮಾ.04) ಶ್ರೀಮಂತ ಉದ್ಯಮಿಗಳು ಸೇರಿದಂತೆ ಹಲವು ಶ್ರೀಮಂತರ ಪಟ್ಟಿ ಈಗಾಗಲೇ ಬಿಡುಗಡೆಯಾಗಿದೆ. ಇದೀಗ ವಿಶ್ವದ ಶ್ರೀಮಂತರ ನಗರ ಯಾವುದು ಅನ್ನೋದು ಬಹಿರಂಗವಾಗಿದೆ. ಈ ನಗರದಲ್ಲಿ ಬರೋಬ್ಬರಿ 3.5 ಲಕ್ಷ ಮಿಲೇನಿಯರ್ಸ್, 60 ಬಿಲಿಯೇನಿಯರ್ಸ್ ಇದ್ದಾರೆ. ವಿಶೇಷ ಅಂದರೆ ಶ್ರೀಮಂತ ವ್ಯಕ್ತಿಗಳ ಬಹುಪಾಲು ಇಲ್ಲೇ ಇದ್ದಾರೆ. ಇದು ದುಬೈ, ಲಂಡನ್, ಪ್ಯಾರಿಸ್, ಮುಂಬೈ, ಬೀಜಿಂಗ್, ಟೊಕಿಯೋ, ವಾಶಿಂಗ್ಟನ್ ಸೇರಿದಂತೆ ಜನಪ್ರಿಯ ನಗರಳು ಅಲ್ಲವೇ ಇಲ್ಲ. ವಿಶ್ವದ ಶ್ರೀಮಂತರ ನಗರ ಅಮೆರಿಕದ ನ್ಯೂಯಾರ್ಕ್.

ಹೆನ್ಲಿ ಆ್ಯಂಡ್ ಪಾರ್ಟ್ನರ್ಸ್ ಇದೀಗ 2024ರ ವಿಶ್ವದ ಶ್ರೀಮಂತರ ನಗರದ ಪಟ್ಟಿ ಬಿಡುಗಡೆ ಮಾಡಿದೆ. ನ್ಯೂಯಾರ್ಕ್ ನಗರದದಲ್ಲಿ 349,500 ಮಿಲೇನಿಯರ್ಸ್( ಒಬ್ಬೊಬ್ಬರ ಒಟ್ಟು ಆಸ್ತಿ ಕನಿಷ್ಠ £100 ಮಿಲಿಯನ್ ಮೇಲ್ಪಟ್ಟು ) ಹಾಗೂ 60 ಬಿಲೇನಿಯರ್ಸ್ ಇದ್ದಾರೆ. ಜಗತ್ತಿನಲ್ಲಿನ ಅತೀ ಹೆಚ್ಚಿನ ಶ್ರೀಮಂತರು ಇದೇ ನಗರದಲ್ಲಿದ್ದಾರೆ. ವಿಶ್ವದ ಅತೀ ದೊಡ್ಡ ಷೇರುಮಾರುಕಟ್ಟೆಯಾಗಿರುವ ನ್ಯೂಯಾರ್ಕ್ ಸ್ಟಾಕ್ ಎಕ್ಸ್ಟಚೇಂಜ್ ಕೂಡ ಇಲ್ಲೇ ಇದೆ. ಈ ನಗರದ ಸಂಪತ್ತು £1 ಟ್ರಿಲಿಯನ್. 

1900 ಕೋಟಿ ರೂ ಒಡೆಯ, ಒಯೋ ಸಿಇಒ ಹೊಟೆಲ್‌ನಲ್ಲಿ ಈಗಲೂ ಕ್ಲೀನ್ ಮಾಡ್ತಾರೆ ವಾಶ್‌ರೂಂ

ಜೆಪಿ ಮಾರ್ಗನ್ ಚೇಸ್, ಸಿಟಿಗ್ರೂಪ್, ಮಾರ್ಗನ್ ಸ್ಟಾನ್ಲೆ, ಗೊಲ್ಡಮನ್ ಸ್ಯಾಚ್ಸ್ ಸೇರಿದಂತೆ ಅತೀ ಹೆಚ್ಚು ತೆರಿಗೆ ಪಾವತಿಸುವ ಕಂಪನಿಗಳು ಇಲ್ಲೇ ಇದೆ. ಫ್ಯಾಶನ್, ಹೆಲ್ತ್‌ಕೇರ್, ರಿಯಲ್ ಎಸ್ಟೇಟ್ ಸೇರಿದಂತೆ ಅತೀ ದೊಡ್ಡ ಮೊತ್ತದ ವ್ಯವಹಾರ ಮಾಡುವ ಕಂಪನಿಗಳು ಇಲ್ಲೇ ಇವೆ. ಇಷ್ಟೇ ಅಲ್ಲ ಗೂಗಲ್, ಫೇಸ್‌ಬುಕ್, ಅಮೇಜಾನ್ ಸೇರಿದಂತೆ ಟೆಕ್ ದಿಗ್ಗಜ ಕಂಪನಿಗಳ ಪ್ರಧಾನ ಕಚೇರಿ ಇದೇ ನ್ಯೂಯಾರ್ಕ್ ನಗರದಲ್ಲಿದೆ. ನ್ಯೂಯಾರ್ಕ್ ವಿಶ್ವದ ಅತೀ ಶ್ರೀಮಂತ ನಗರ. ಇಲ್ಲಿ ಉದ್ಯೋಗ, ರಿಯಲ್ ಎಸ್ಟೇಟ್, ಮಾಧ್ಯಮ, ಆರೋಗ್ಯ ಕ್ಷೇತ್ರ, ಕೈಗಾರಿಕೆ, ಐಟಿ ಸೇರಿದಂತೆ ಎಲ್ಲವೂ ಇದೆ ಎಂದು ವರದಿ ಹೇಳುತ್ತಿದೆ.

ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿರುವ ಭಾರತೀಯ ಕುಟುಂಬಗಳು
ಭಾರತವು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಮತ್ತು ಈಗ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ಸಾಗುತ್ತಿದೆ. ಭಾರತ ಮಾತ್ರವಲ್ಲ, ಭಾರತೀಯರೂ ಸಹ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿದ್ದಾರೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅನೇಕ ಭಾರತೀಯರಿದ್ದಾರೆ. ಈಗ ಏಷ್ಯಾದ 20 ಶ್ರೀಮಂತ ಕುಟುಂಬಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂಬುದು ವಿಶೇಷ. ಬ್ಲೂಮ್‌ಬರ್ಗ್ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಏಷ್ಯಾದ 20 ಶ್ರೀಮಂತ ಕುಟುಂಬಗಳ ಪಟ್ಟಿಯಲ್ಲಿ ಅಂಬಾನಿ ಕುಟುಂಬವು ಮೊದಲ ಸ್ಥಾನದಲ್ಲಿದೆ ಎಂಬುದು ವಿಶೇಷ. ಅಂಬಾನಿ ಕುಟುಂಬದೊಂದಿಗೆ ಒಟ್ಟು 6 ಭಾರತೀಯ ಕುಟುಂಬಗಳು ಈ ಪಟ್ಟಿಯಲ್ಲಿವೆ.

ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿರುವ ಭಾರತೀಯ ಕುಟುಂಬಗಳು
ಅಂಬಾನಿ ಕುಟುಂಬ, ರಿಲಯನ್ಸ್ ಗ್ರೂಪ್ (ಭಾರತ)
ಮಿಸ್ತ್ರಿ ಕುಟುಂಬ, ಶಾಪೂರ್ಜಿ ಪಾಲೊಂಜಿ, ಟಾಟಾ ಸನ್ಸ್ (ಭಾರತ)
ಜಿಂದಾಲ್, ಒಪಿ ಜಿಂದಾಲ್ ಗ್ರೂಪ್ (ಭಾರತ)
ಬಿರ್ಲಾ, ಆದಿತ್ಯ ಬಿರ್ಲಾ ಗ್ರೂಪ್ (ಭಾರತ)
ಬಜಾಜ್, ಬಜಾಜ್ ಗ್ರೂಪ್ (ಭಾರತ)
ಹಿಂದೂಜಾ, ಹಿಂದೂಜಾ ಗ್ರೂಪ್ (ಭಾರತ)

ಈ ಪಟ್ಟಿಯಲ್ಲಿ ಭಾರತದ 6 ಕುಟುಂಬಗಳಿವೆ. ಈ ಪಟ್ಟಿಯಲ್ಲಿ ಅತಿ ಹೆಚ್ಚು ಭಾರತೀಯ ಕುಟುಂಬಗಳಿವೆ ಎಂಬುದು ವಿಶೇಷ. ಅದೇ ಸಮಯದಲ್ಲಿ, ಹಾಂಗ್ ಕಾಂಗ್‌ನ ನಾಲ್ಕು ಕುಟುಂಬಗಳು ಈ ಪಟ್ಟಿಯಲ್ಲಿವೆ. ಅತಿದೊಡ್ಡ ಆರ್ಥಿಕತೆ, ವ್ಯಾಪಾರ ಮತ್ತು ಉತ್ಪಾದನಾ ವಲಯವೆಂದು ಪರಿಗಣಿಸಲ್ಪಟ್ಟಿರುವ ಚೀನಾದ ಕೆಲವೇ ಶ್ರೀಮಂತ ಕುಟುಂಬಗಳು ಈ ಪಟ್ಟಿಯಲ್ಲಿವೆ. ಈ ಪಟ್ಟಿಯಲ್ಲಿ ಚೀನಾದ ಒಂದೇ ಒಂದು ಕುಟುಂಬವಿದೆ.

ವಿಶ್ವದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿ ಪ್ರಕಟ, ದಿ ರಾಕ್‌ ನಂ.1