ಪ್ರಾಣಿ ಪ್ರಿಯರು ನೀವಾಗಿದ್ರೆ ಹಣಗಳಿಸಲು ಸುವರ್ಣಾವಕಾಶ
ಪ್ರಾಣಿಗಳ ಮೇಲಿರುವ ಪ್ರೀತಿ ಬಿಸ್ಕತ್ ಹಾಕೋಕೆ ಮಾತ್ರ ಸೀತವಾಗಬಾರದು. ಹಣಗಳಿಸಲೂ ನೆರವಾಗಬೇಕು ಅಂದ್ರೆ ಈಗ್ಲೇ ನೀವು ಈ ಬ್ಯುಸಿನೆಸ್ ಬಗ್ಗೆ ಆಲೋಚನೆ ಮಾಡಿ. ಭಾರತದಲ್ಲಿ ವೇಗ ಪಡೆಯುತ್ತಿರುವ ಈ ಬ್ಯುಸಿನೆಸ್ ನಿಮಗೆ ಲಾಭದಾಯಕವಾಗಿದ.
ಸಾಕುಪ್ರಾಣಿ (pet) ಅದ್ರಲ್ಲೂ ನಾಯಿ, ಬೆಕ್ಕುಗಳ ಮೇಲೆ ನಿಮಗೆ ಅಪಾರ ಪ್ರೀತಿ (love) ಇದೆ, ಅದರೊಂದಿಗೆ ಸಮಯ ಕಳೆಯಲು ನೀವು ಇಷ್ಟಪಡ್ತೀರಾ ಅಂದ್ರೆ ನಿಮ್ಮ ಈ ಸ್ವಭಾವವನ್ನು ಬ್ಯುಸಿನೆಸ್ (Business) ಆಗಿ ಪರಿವರ್ತಿಸಿಕೊಂಡು ಹಣ ಸಂಪಾದನೆ ಮಾಡ್ಬಹುದು. ಅನೇಕರು ಬೀದಿಯಲ್ಲಿ ಹೋಗ್ತಿದ್ದ ನಾಯಿಯನ್ನು ಮುಟ್ಟಿ, ಅದಕ್ಕೆ ಬಿಸ್ಕತ್ ಹಾಕಿ, ಮುದ್ದು ಮಾಡ್ತಾರೆ. ಎಲ್ಲಿ ಬೆಕ್ಕು ಕಂಡ್ರೂ ಅದನ್ನು ಮುದ್ದಿಸುವ ಜನರಿದ್ದಾರೆ. ನಾಯಿ, ಬೆಕ್ಕು ಸೇರಿದಂತೆ ಸಾಕು ಪ್ರಾಣಿಗಳ ಮೇಲೆ ಕೆಲವರಿಗೆ ಅತೀ ಪ್ರೀತಿ, ಕಾಳಜಿ ಇರುತ್ತದೆ. ಅಂಥವರು ಇದನ್ನೇ ಬಂಡವಾಳ ಮಾಡಿಕೊಂಡು ದುಡಿಮೆ ಶುರು ಮಾಡಬಹುದು.
ಭಾರತೀಯ ಮಾರುಕಟ್ಟೆ(Indian Market )ಯಲ್ಲಿ ಇದೀಗ ಹೊಸ ಹೊಸ ಬ್ಯುಸಿನೆಸ್ ಬರ್ತಿದೆ. ಜನರು ಭಿನ್ನವಾಗಿ ಆಲೋಚನೆ ಮಾಡಿ ಅದನ್ನು ವ್ಯಾಪಾರವಾಗಿ ಪರಿವರ್ತನೆ ಮಾಡ್ತಿದ್ದಾರೆ. ವಿದೇಶದಲ್ಲಿ ಹೆಚ್ಚು ಪ್ರಸಿದ್ಧಿಯಲ್ಲಿರುವ ಪೆಟ್ ಸಿಟ್ಟಿಂಗ್ (Pet sitting) ಬ್ಯುಸಿನೆಸ್ ಶುರು ಮಾಡಿ ಲಾಭ ಪಡೆಯಬಹುದು. ಬಹುತೇಕ ಭಾರತೀಯರ ಮನೆಯಲ್ಲಿ ಸಾಕುಪ್ರಾಣಿ ಇದ್ದೇ ಇರುತ್ತೆ. ಆದ್ರೆ ಅವುಗಳನ್ನು ಎಲ್ಲೆಂದರಲ್ಲಿ ಕರೆದೊಯ್ಯಲು ಸಾಧ್ಯವಿಲ್ಲ. ಪ್ರವಾಸಕ್ಕೆ ಹೋಗೋದಿರಲಿ ಅಥವಾ ಬೇರೆ ಇನ್ನಾವುದೇ ಕೆಲಸದ ಮೇಲೆ ಹೊರಗೆ ಹೋಗುವ ಸಮಯದಲ್ಲಿ ಸಾಕು ಪ್ರಾಣಿಗಳನ್ನು ಏನು ಮಾಡ್ಬೇಕು ಎನ್ನುವ ಪ್ರಶ್ನೆ ಜನರನ್ನು ಕಾಡುತ್ತದೆ. ಅಕ್ಕಪಕ್ಕದ ಮನೆಯವರಿಗೆ ಸ್ವಲ್ಪ ನಮ್ಮ ನಾಯಿ ಅಥವಾ ಬೆಕ್ಕನ್ನು ನೋಡ್ಕೊಳ್ಳಿ ಎನ್ನುವ ಕಾಲ ಈಗಿಲ್ಲ. ಇಂಥ ಸಮಯದಲ್ಲಿ ಜನರು, ಇವುಗಳನ್ನು ನೋಡಿಕೊಳ್ಳುವವರ ಹುಡುಕಾಟ ನಡೆಸ್ತಾರೆ. ಕೆಲವು ಕಡೆ ಸಾಕುಪ್ರಾಣಿಗಳ ಆರೈಕೆ, ಮನರಂಜನೆಗೆ ಸ್ಥಳವಿಲ್ಲ. ಅವರಿಗೆ ಸೂಕ್ತ ಔಷಧಿ ಸಿಗ್ತಿಲ್ಲ. ಇವೆಲ್ಲವನ್ನು ನೀವು ಪೆಟ್ ಸಿಟ್ಟಿಂಗ್ ಮೂಲಕ ಒದಗಿಸಬಹುದು.
SGB vs Gold ETF: ದೀಪಾವಳಿಗೆ ಚಿನ್ನದ ಮೇಲೆ ಹೂಡಿಕೆ ಮಾಡೋದಾದ್ರೆ ಇಲ್ಲಿದೆ ಬೆಸ್ಟ್ ಪ್ಲಾನ್
ಪೆಟ್ ಸಿಟ್ಟಿಂಗ್ ಬ್ಯುಸಿನೆಸ್ : ನೀವು ಇದ್ರಲ್ಲಿ ಅನೇಕ ವಿಭಾಗಗಳನ್ನು ನೋಡ್ತೀರಿ. ಪೆಟ್ ಆರೈಕೆ, ಪೆಟ್ ವಾಕಿಂಗ್, ಪೆಟ್ ನೈಟ್ ಬೋರ್ಡಿಂಗ್, ಔಷಧಿ – ಅಗತ್ಯ ವಸ್ತು ಪೂರೈಕೆ ಹೀಗೆ ನಾನಾ ವಿಧಗಳಿವೆ. ಮೊದಲು ನೀವು ಯಾವ ಪ್ರಾಣಿಯನ್ನು ನೋಡಿಕೊಳ್ತೀರಿ ಎಂಬುದನ್ನು ನಿರ್ಧರಿಸಬೇಕು. ಆ ನಂತ್ರ ಯಾವ ಸೇವೆಯನ್ನು ನೀಡ್ತೀರಿ ಎಂಬುದನ್ನು ಪರಿಗಣಿಸಬೇಕು. ನಿಮ್ಮ ಪ್ರದೇಶದಲ್ಲಿ ಎಷ್ಟು ಜನರ ಬಳಿ ಪೆಟ್ ಇದೆ, ನಿಮ್ಮ ಬ್ಯುಸಿನೆಸ್ ನಿಂದ ನಿಮಗೆಷ್ಟು ಲಾಭ, ಅವರಿಗೆಷ್ಟು ಲಾಭ ಎಂಬುದನ್ನು ಮೊದಲು ರಿಸರ್ಚ್ ಮಾಡ್ಬೇಕು. ಜಾಗ, ಶುಲ್ಕ ಎಲ್ಲವನ್ನೂ ನಿರ್ಧರಿಸಿದ ನಂತ್ರ ನೀವು ಫೀಲ್ಡ್ ಗೆ ಇಳಿಯಬೇಕಾಗುತ್ತದೆ.
ಪೆಟ್ ಸಿಟ್ಟಿಂಗ್ ಖರ್ಚು : ಸಾಮಾನ್ಯ ಲೆಕ್ಕಾಚಾರದಲ್ಲಿ ನೋಡಿದ್ರೆ ಪೆಟ್ ಸಿಟ್ಟಿಂಗ್ ಬ್ಯುಸಿನೆಸ್ ಗೆ ಒಂದು ಲಕ್ಷದ ಮೇಲೆ ಆರಂಭಿಕ ವೆಚ್ಚವಾಗುತ್ತದೆ. ನಿಮ್ಮ ಬ್ಯುಸಿನೆಸ್ ಗೆ ಪರವಾನಿಗೆ ಪಡೆಯಲು 4,100 ರಿಂದ 41,000 ರೂಪಾಯಿವರೆಗೆ ಖರ್ಚಾಗುತ್ತದೆ. ಅಂಗಡಿ ಸೇರಿದಂತೆ ಎಲ್ಲ ವ್ಯವಸ್ಥೆಗೆ 85 ಸಾವಿರ ರೂಪಾಯಿ ವೆಚ್ಚವಾಗುತ್ತದೆ.
10 ರೂ. ನಾಣ್ಯಗಳ ಚಲಾವಣೆ ಬಗ್ಗೆ ಆರ್‌ಬಿಐ ಸ್ಪಷ್ಟನೆ
ಸ್ಥಳ ಮತ್ತು ಸಿಬ್ಬಂದಿ : ಪೆಟ್ ಸಿಟ್ಟಿಂಗ್ ನಲ್ಲಿ ಇದು ಬಹಳ ಮುಖ್ಯ. ಪ್ರಾಣಿಗಳಿಗೆ ದೊಡ್ಡ ಸ್ಥಳದ ಅಗತ್ಯವಿದೆ. ಆರಾಮವಾಗಿ ಸುತ್ತಾಡಲು, ತಿರುಗಾಡಲು ವಿಶಾಲ ಜಾಗವನ್ನು ಒದಗಿಸಬೇಕು. ಹಾಗೆಯೇ ಇವುಗಳನ್ನು ಅತ್ಯಂತ ಕಾಳಜಿಯಿಂದ ಆರೈಕೆ ಮಾಡ್ಬೇಕಾಗುತ್ತದೆ. ಹಾಗಾಗಿ ಒಬ್ಬರಿಂದಲೇ ಇದು ಅಸಾಧ್ಯ. ನೀವು 3 -5 ಮಂದಿಯನ್ನು ಕೆಲಸಕ್ಕೆ ನೇಮಿಸಿಕೊಳ್ಳಬೇಕು.
ಇನ್ನು ಜಾಹೀರಾತು ವಿಷ್ಯಕ್ಕೆ ಬಂದ್ರೆ ನೀವು ಸೋಶಿಯಲ್ ಮೀಡಿಯಾ ಬಳಕೆ ಮಾಡ್ಕೊಂಡು ನಿಮ್ಮ ಬ್ಯುಸಿನೆಸ್ ಬಗ್ಗೆ ಮಾಹಿತಿ ನೀಡ್ಬಹುದು. ನೀವು ಉತ್ತಮ ಸೇವೆ ನೀಡಿದ್ರೆ ಬಾಯಿ ಮೂಲಕವೇ ನಿಮ್ಮ ಶಾಪ್ ಫೇಮಸ್ ಆಗುತ್ತೆ.