Business Ideas : ರೇಷನ್ ಅಂಗಡಿ ಶುರು ಮಾಡೋದು ಹೇಗೆ ಗೊತ್ತಾ?
ಬಡವರಿಗೆ ಸರ್ಕಾರ ರೇಷನ್ ನೀಡ್ತಿದೆ. ಇದಕ್ಕಾಗಿ ಅಲ್ಲಲ್ಲಿ ರೇಷನ್ ಅಂಗಡಿಗಳನ್ನು ತೆರೆದಿದೆ. ಪಡಿತರ ಅಂಗಡಿ ತೆರೆಯುವವರು ಸರ್ಕಾರಿ ಪರೀಕ್ಷೆಯಲ್ಲಿ ಪಾಸ್ ಆಗಬೇಕಾಗಿಲ್ಲ. ಆದ್ರೆ ಕೆಲವೊಂದು ನಿಯಮ ಪಾಲನೆ ಮಾಡಬೇಕು.
ಸರ್ಕಾರಿ ಪಡಿತರ ಅಂಗಡಿಯಲ್ಲಿ ನೀವು ಪಡಿತರ ಖರೀದಿಸಿರಬಹುದು. ಅಲ್ಲಿ ನ್ಯಾಯ ಬೆಲೆಗೆ ಪಡಿತರ ಸಿಗುತ್ತದೆ. ನಿಮಗೆ ಪಡಿತರ ಬೇಡ, ಪಡಿತರ ನೀಡುವ ಕೆಲಸ ಮಾಡ್ಬೇಕೆಂದ್ರೂ ನಿಮಗೆ ಸರ್ಕಾರ ಅವಕಾಶ ನೀಡುತ್ತದೆ. ನೀವು ನಿರುದ್ಯೋಗಿಯಾಗಿದ್ದು, ಪಡಿತರ ಅಂಗಡಿ ತೆರೆಯುವ ಆಲೋಚನೆಯಲ್ಲಿದ್ದರೆ ನಾವಿಂದು ಅದ್ರ ಬಗ್ಗೆ ನಿಮಗೆ ಮಾಹಿತಿ ನೀಡ್ತೆವೆ.
ಸರ್ಕಾರಿ (Govt) ಪಡಿತರ (Ration) ಅಂಗಡಿ ತೆರೆಯುವುದು ಹೇಗೆ? : ಇದಕ್ಕಾಗಿ ಮೊದಲು ಸರಿಯಾದ ಸ್ಥಳವನ್ನು ಆಯ್ದುಕೊಳ್ಳಬೇಕು. ನಂತರ ಸರ್ಕಾರಿ ಪಡಿತರ ಅಂಗಡಿಯ ಪರವಾನಗಿ ಪಡೆಯಬೇಕು. ಇದಕ್ಕಾಗಿ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಫಾರ್ಮ್ (Form) ಭರ್ತಿ ಮಾಡಬೇಕು. ಆಧಾರ್, ವಿದ್ಯಾರ್ಹತೆ ಮತ್ತು ಕುಟುಂಬ ಐಡಿಯಂತಹ ಅಗತ್ಯ ದಾಖಲೆಗಳನ್ನು ಲಗತ್ತಿಸಬೇಕಾಗುತ್ತದೆ. ದಾಖಲೆ ಪರಿಶೀಲನೆ ಮಾಡಿ ಸರ್ಕಾರ ಪರವಾನಗಿ ನೀಡಿದ ನಂತ್ರ ನೀವು ಅಂಗಡಿ ತೆರೆಯಬಹುದು.
ಸರ್ಕಾರಿ ಪಡಿತರ ಅಂಗಡಿ ತೆರೆಯಲು ಸ್ಥಳ ಆಯ್ಕೆ ಹೀಗಿರಲಿ : ಸರ್ಕಾರಿ ಪಡಿತರ ಅಂಗಡಿ ತೆರೆಯಲು ಸ್ಥಳದ ಆಯ್ಕೆ ಮುಖ್ಯವಾಗುತ್ತದೆ. ನಿಮ್ಮ ಸ್ವಂತ ಜಾಗದಲ್ಲಿ ನೀವು ಅಂಗಡಿ ತೆರೆಯುವುದು ಒಳ್ಳೆಯದು. ಒಂದ್ವೇಳೆ ಬಾಡಿಗೆ ಜಾಗವಾಗಿದ್ದರೆ ಕರಾರು ಮುಖ್ಯವಾಗುತ್ತದೆ. ಇದು ಒಂದು ವರ್ಷ ನಡೆಸಿ ಮುಚ್ಚುವ ಅಂಗಡಿಯಲ್ಲ. ಹಾಗಾಗಿ ಕರಾರಿಗೆ ನೀವು ಮಹತ್ವ ನೀಡಬೇಕು. ಪಡಿತರ ಅಂಗಡಿಯನ್ನು ತೆರೆಯುತ್ತಿದ್ದರೆ ಆ ಅಂಗಡಿ ಜನನಿಬಿಡ ಪ್ರದೇಶದಲ್ಲಿ ಇಡಬೇಕು. ಅಂಗಡಿ ಮುಂದೆ 8 ರಿಂದ 15 ಅಡಿ ಅಗಲದ ರಸ್ತೆ ಇದ್ದರೆ ಉತ್ತಮ. ಅಂಗಡಿ ಮುಂದೆ ಸ್ವಲ್ಪ ಜಾಗವಿರುವಂತೆ ನೋಡಿಕೊಳ್ಳಿ. ಲಾರಿಗಳು ಬಂದು ನಿಲ್ಲಲು ಜಾಗವಿರುವಂತೆ ನೋಡಿಕೊಳ್ಳಿ. ಸರ್ಕಾರಿ ಪಡಿತರ ಅಂಗಡಿಯು ಸಾಮಾನ್ಯ ಪಡಿತರ ಅಂಗಡಿಗಳಿಗಿಂತ ಸ್ವಲ್ಪ ದೊಡ್ಡದಿರಬೇಕು. ಅಂಗಡಿಯ ಎತ್ತರವು 3 ಮೀಟರ್‌ಗಿಂತ ಹೆಚ್ಚಿರಬೇಕು. ಅಂಗಡಿಯೊಂದಿಗೆ ಗೋದಾಮು ಕೂಡ ನಿರ್ಮಿಸಬೇಕಾಗುತ್ತದೆ. ಹಾಗಾಗಿ ಅಂಗಡಿ ದೊಡ್ಡದಿರುವಂತೆ ನೋಡಿಕೊಳ್ಳಿ. ಪಡಿತರ ಚೀಟಿದಾರರ ಸಂಖ್ಯೆ ಹೆಚ್ಚಿಲ್ಲದಿದ್ದರೆ ಪ್ರತ್ಯೇಕ ಗೋದಾಮು ನಿರ್ಮಿಸುವ ಅಗತ್ಯವಿಲ್ಲ.
Business Ideas: ಹಣ ಗಳಿಸಲು ಪೇಟಿಎಂನಲ್ಲಿದೆ ಇಷ್ಟೊಂದು ದಾರಿ
ಸರ್ಕಾರಿ ಪಡಿತರ ಅಂಗಡಿ ತೆರೆಯಲು ಅರ್ಹತೆಯ ಮಾನದಂಡ : ಪರವಾನಗಿಗಾಗಿ ಅರ್ಜಿ ಸಲ್ಲಿಸುತ್ತಿದ್ದರೆ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ 50000 ರೂಪಾಯಿ ಇರಬೇಕು. ಬ್ಯಾಂಕ್ ಖಾತೆಯಲ್ಲಿ 50000 ರೂಪಾಯಿಗಳ ಬ್ಯಾಲೆನ್ಸ್ ಕಾಪಾಡಿಕೊಳ್ಳಿ. ಭಾರತ (India) ದ ನಾಗರಿಕರು ಮಾತ್ರ ಪಡಿತರ ಅಂಗಡಿಗೆ ಅರ್ಜಿ ಸಲ್ಲಿಸಬಹುದು. ಭಾರತದ ಯಾವುದೇ ಆಹಾರ ನಿಗಮದಿಂದ ಪರವಾನಗಿ ಹೊಂದಿದ್ದರೆ ನಿಮಗೆ ಪಡಿತರ ಅಂಗಡಿ ಪರವಾನಗಿ ಸಿಗುವುದಿಲ್ಲ.
ಸರ್ಕಾರಿ ಪಡಿತರ ಅಂಗಡಿಗೆ ಪರವಾನಗಿ ಪಡೆಯಬೇಕಾದರೆ 10ನೇ ತರಗತಿ ಪಾಸ್ ಆಗಿರಬೇಕು. ಹಲವೆಡೆ 12ನೇ ತರಗತಿ ಹಾಗೂ ಪದವಿ ಮಾರ್ಕ್ಸ್ ಕಾರ್ಡ್ ಕೇಳುತ್ತಾರೆ.
India Passport : ಭಾರತದ ಪಾಸ್ಪೋರ್ಟ್ ಬಣ್ಣದ ಬಗ್ಗೆ ನಿಮಗೆಷ್ಟು ಗೊತ್ತು?
ಸರ್ಕಾರಿ ಪಡಿತರ ಅಂಗಡಿ ವಿಧಗಳು : ಸರ್ಕಾರಿ ಪಡಿತರ ಅಂಗಡಿಗೆ ಅರ್ಜಿ ಸಲ್ಲಿಸಲು ಬಯಸಿದರೆ ಇಲ್ಲಿ ಇರುವ ಎರಡು ವಿಧಗಳನ್ನು ನೀವು ತಿಳಿದಿರಬೇಕು. ಗ್ರಾಮೀಣ ಪ್ರದೇಶದ ಪಡಿತರ ಅಂಗಡಿ ಹಾಗೂ ನಗರ ಪ್ರದೇಶದ ಪಡಿತರ ಅಂಗಡಿ ಎಂದು ಎರಡು ವಿಭಾಗ ಮಾಡಲಾಗಿದೆ. ಇವೆರಡಕ್ಕೂ ಪ್ರತ್ಯೇಕ ಅರ್ಜಿ ಲಭ್ಯವಿದೆ. ಗ್ರಾಮೀಣ ಪ್ರದೇಶದಲ್ಲಿ ಪಡಿತರ ಅಂಗಡಿ ತೆರೆಯಲು ಬಯಸಿದರೆ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ನಗರ ಪ್ರದೇಶದ ಪಡಿತರ ಅಂಗಡಿಗಾಗಿ ನೀವು ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು. ಗ್ರಾಮೀಣ ಪ್ರದೇಶದಲ್ಲಿ ಪಡಿತರ ಅಂಗಡಿ ತೆರೆಯುವ ಮುನ್ನ ಕಾರಣವನ್ನು ಹೇಳಬೇಕಾಗುತ್ತದೆ. ಪಡಿತರ ಅಂಗಡಿ ದೂರವಿದೆ ಅಥವಾ ಈಗಿರುವ ಅಂಗಡಿಯಲ್ಲಿ ಅಕ್ರಮ ನಡೆಯುತ್ತಿದೆ ಎಂಬುದನ್ನು ನೀವು ಸಾಭೀತುಪಡಿಸಬೇಕು. ನಿಮ್ಮ ಅರ್ಜಿಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ರವಾನೆ ಮಾಡಲಾಗುತ್ತದೆ. ನಂತ್ರ ಪರವಾನಗಿ ನೀಡಲಾಗುತ್ತದೆ.