60ನೇ ವರ್ಷದ ಸಂಭ್ರಮದಲ್ಲಿರುವ GRT ಜ್ಯುವೆಲರ್ಸ್‌ನಿಂದ ಗಿನ್ನೆಸ್ ದಾಖಲೆ; 3.527 ಕೆಜಿ ತೂಕದ ಜುಮುಕಿ ಅನಾವರಣ

GRT ಜ್ಯುವೆಲರ್ಸ್ ತನ್ನ 60 ನೇ ವಾರ್ಷಿಕೋತ್ಸವವನ್ನು ವಿಶ್ವದ ಅತ್ಯಂತ ಭಾರವಾದ ಚಿನ್ನದ ಕಿವಿಯೋಲೆಗಳನ್ನು ರಚಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸುವ ಮೂಲಕ ಆಚರಿಸುತ್ತಿದೆ. ಈ ಮೈಲಿಗಲ್ಲು GRTಯ ಶ್ರೀಮಂತ ಪರಂಪರೆ, ನಾವೀನ್ಯತೆ ಮತ್ತು ಅಸಾಧಾರಣ ಕರಕುಶಲತೆಗೆ ಸಾಕ್ಷಿಯಾಗಿದೆ.

Guinness World Record from GRT Jewelers celebrating its 60th anniversary mrq

ಸುದೀರ್ಘ ಆರು ದಶಕಗಳಿಂದ ಅತ್ಯುತ್ತಮ ಆಭರಣಗಳನ್ನು ರಚಿಸುತ್ತಾ, ಜನಜನಿತವಾಗಿರುವ GRT ಜ್ಯುವೆಲರ್ಸ್, ತನ್ನ 60 ನೇ ವರ್ಷದ ಶ್ರೇಷ್ಠತೆಯನ್ನು ಹೆಮ್ಮೆಯಿಂದ ಆಚರಿಸುತ್ತಿದೆ. ಆಧುನಿಕ ಕಲಾತ್ಮಕತೆಯೊಂದಿಗೆ ಸಂಪ್ರದಾಯವನ್ನು ಸಂಯೋಜಿಸಲು ಹೆಸರುವಾಸಿಯಾಗಿರುವ ಬ್ರಾಂಡ್, ಜೀವನದ ಅತ್ಯಂತ ಅಮೂಲ್ಯ ಕ್ಷಣಗಳಿಗೆ ಗೌರವ ಸಲ್ಲಿಸುವ ಶುದ್ಧತೆ, ನಂಬಿಕೆ ಮತ್ತು ಶ್ರೇಷ್ಠ ವಿನ್ಯಾಸಗಳಿಗೆ ಸಮಾನಾರ್ಥಕವಾಗಿದೆ. ಭಾರತ ಮತ್ತು ಸಿಂಗಾಪುರದಾದ್ಯಂತ ಬಲವಾಗಿ ನೆಲೆಗೊಂಡಿರುವ, GRTಯು ಸೊಗಸಾದ ಆಭರಣಗಳನ್ನು ರಚಿಸಿ ಸಮರ್ಪಣೆಯೊಂದಿಗೆ ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುವುದನ್ನು ಮುಂದುವರೆಸುತ್ತಲೇ ಬಂದಿದೆ.

60 ವರ್ಷಗಳ ಈ ಮಹತ್ವದ ಮೈಲಿಗಲ್ಲಿನ ಭಾಗವಾಗಿ, GRT ಜ್ಯುವೆಲರ್ಸ್ ತನ್ನದೇ ಆದ ಗಿನ್ನೆಸ್ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ಅಸಾಮಾನ್ಯ ಸಾಧನೆಯನ್ನು ಸಾಧಿಸಿದೆ. 22 ಕ್ಯಾರೆಟ್ ಚಿನ್ನದಲ್ಲಿ ತಯಾರಿಸಲಾದ 3.527 ಕಿಲೋಗ್ರಾಂಗಳಷ್ಟು ತೂಕದ ಕಣ್ಣುಕೋರೈಸುವ ಬೃಹತ್ ಜುಮುಕಿಗಳನ್ನು ನಮ್ಮ ಬ್ರಾಂಡ್ ಅನಾವರಣಗೊಳಿಸಿತು. ಈ ಸೂಜುಗದ ವಿನ್ಯಾಸವು ದಕ್ಷಿಣ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಗೌರವ ಸಲ್ಲಿಸುವುದರ ಜೊತೆಗೆ GRTಯ ನುರಿತ ಕುಶಲಕರ್ಮಿಗಳ ಸಾಟಿಯಿಲ್ಲದ ಕರಕುಶಲತೆಯನ್ನು ಪ್ರದರ್ಶಿಸುತ್ತದೆ. ಈ ಜುಮುಕಿಗಳೊಂದಿಗೆ GRT ಜ್ಯುವೆಲರ್ಸ್, ವಿಶ್ವದ ಅತ್ಯಂತ ಭಾರವಾದ ಜೋಡಿ ಚಿನ್ನದ ಕಿವಿಯೋಲೆಗಳನ್ನು ನಿರ್ಮಿಸುವ ಮೂಲಕ ಮತ್ತೊಮ್ಮೆ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಪ್ರವೇಶಿಸಿತು. 

ಈ ಐತಿಹಾಸಿಕ ಸಾಧನೆಯನ್ನು ಗಿನ್ನಿಸ್ ವಿಶ್ವ ದಾಖಲೆಯ ತೀರ್ಪುಗಾರರು ಅಧಿಕೃತವಾಗಿ ಗುರುತಿಸಿದ್ದಾರೆ. ಅವರು GRT ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ.ಜಿ.ಆರ್.ಆನಂದ್ ಅನಂತಪದ್ಮನಾಭನ್ ಮತ್ತು ಶ್ರೀ.ಜಿ.ಆ‌ರ್.ರಾಧಾಕೃಷ್ಣನ್ ಅವರಿಗೆ ಪ್ರಶಸ್ತಿಯನ್ನು ನೀಡಿದರು. ಈ ದಾಖಲೆಯು GRT ಯ ನಿರಂತರ ಅನ್ವೇಷಣೆಯ ನಾವೀನ್ಯತೆ ಮತ್ತು ಆಭರಣ ಉದ್ಯಮದಲ್ಲಿ ನೂತನ ಮಾನದಂಡಗಳನ್ನು ರಚಿಸುವಲ್ಲಿ ಅದರ ಸಮರ್ಪಣೆಯನ್ನು ಎತ್ತಿ ತೋರಿಸುತ್ತದೆ.

ಇದನ್ನೂ ಓದಿ: ಚಿನ್ನದ ಬೆಲೆ ಇಳಿಕೆ ಯಾವಾಗ ಪ್ರಶ್ನೆಗೆ ಉತ್ತರಿಸಿದ ಆರ್ಥಿಕ ತಜ್ಞ, ಎಷ್ಟು ಕಡಿಮೆಯಾಗುತ್ತೆ ಅಂತಾನೂ ಹೇಳಿದ್ರು!

Latest Videos
Follow Us:
Download App:
  • android
  • ios