* ದೇಶದ ಆರ್ಥಿಕತೆ ಕೋವಿಡ್‌ನಿಂದ ಸುಧಾರಿಸಿಕೊಂಡಿರುವ ಸುಳಿವು* ಮಾರ್ಚ್‌ನಲ್ಲಿ ಸಾರ್ವಕಾಲಿಕ ದಾಖಲೆಯ ಜಿಎಸ್‌ಟಿ ಸಂಗ್ರಹ* 1.42 ಲಕ್ಷ ಕೋಟಿ ತೆರಿಗೆ ಸಂಗ್ರಹ* ಕಳೆದ ವರ್ಷ ಇದೇ ಅವಧಿಗಿಂತ 15% ಅಧಿಕ

ನವದೆಹಲಿ(ಏ.02): ದೇಶದ ಆರ್ಥಿಕತೆ ಕೋವಿಡ್‌ನಿಂದ ಸುಧಾರಿಸಿಕೊಂಡಿರುವ ಸುಳಿವುಗಳು ಮತ್ತಷ್ಟುಸ್ಪಷ್ಟವಾಗಿ ಹೊರಹೊಮ್ಮಿದ್ದು, ಮಾಚ್‌ರ್‍ ತಿಂಗಳಿನಲ್ಲಿ ಸಾರ್ವಕಾಲಿಕ ದಾಖಲೆಯಾದ 142,095 ಲಕ್ಷ ಕೋಟಿ ರು.ಜಿಎಸ್‌ಟಿ ಸಂಗ್ರಹವಾಗಿದೆ. ಕಳೆದ ಜನವರಿಯಲ್ಲಿ 1.40 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದ್ದೇ ಇದುವರೆಗಿನ ಗರಿಷ್ಠವಾಗಿತ್ತು

ಮಾಚ್‌ರ್‍ನಲ್ಲಿ ಸಂಗ್ರಹವಾದ 1.42 ಲಕ್ಷ ಕೋಟಿ ಪೈಕಿ 25,830 ಕೋಟಿ ರು. ಕೇಂದ್ರಿಯ ಜಿಎಸ್‌ಟಿ, ರಾಜ್ಯ ಜಿಎಸ್‌ಟಿಯಿಂದ 32,378 ಕೋಟಿ ರು. ಮತ್ತು ಏಕೀಕೃತ ಜಿಎಸ್‌ಟಿಯಿಂದ 74,470 ಕೋಟಿ ರು. ಹಾಗೂ ಸೆಸ್‌ನಿಂದ 9417 ಕೋಟಿ ರು. ಆದಾಯ ಬಂದಿದೆ.

ಈ ಮೂಲಕ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಜಿಎಸ್‌ಟಿ ಪ್ರಮಾಣದಲ್ಲಿ ಶೇ.15ರಷ್ಟುಹೆಚ್ಚಳವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

ವಹಿವಾಟಿನಲ್ಲಿ ಚೇತರಿಕೆ ಮತ್ತು ತೆರಿಗೆ ವಂಚನೆ ಸೋರಿಕೆಯನ್ನು ಪತ್ತೆಹಚ್ಚಿ ಅವರನ್ನು ತೆರಿಗೆ ಪಾವತಿ ಮಾಡುವಂತೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದೇ ತೆರಿಗೆ ಸಂಗ್ರಹ ಏರಿಕೆಗೆ ಕಾರಣ ಎನ್ನಲಾಗಿದೆ.

ಜಿಎಸ್‌ಟಿ ಸಂಗ್ರಹದಲ್ಲಿ ಶೇ 42ರಷ್ಟುಹೆಚ್ಚಳ

ಬೆಳಗಾವಿಯ ಕೇಂದ್ರ ಜಿಎಸ್‌ಟಿ ಆಯುಕ್ತಾಲಯದಿಂದ 2021-22ನೇ ಆರ್ಥಿಕ ವರ್ಷದಲ್ಲಿ .10,172 ಕೋಟಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದಾಖಲೆಯ ಸಂಗ್ರಹ ಸಾಧಿಸಿದೆ ಎಂದು ಜಿಎಸ್‌ಟಿ ಆಯುಕ್ತಾಲಯದ ಆಯುಕ್ತ ಬಸವರಾಜ ನಲೆಗಾವೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂತಹ ಜಿಎಸ್‌ಟಿ ಸಂಗ್ರಹ, ದೃಢವಾದ ಆರ್ಥಿಕ ಬೆಳವಣಿಗೆಯ ಸಂಕೇತವಾಗಿದೆ. ಜತೆಗೆ ದೇಶವು ಸಾಂಕ್ರಾಮಿಕದ ನೆರಳಿನಿಂದ ದೂರ ಸರಿದಿದೆ ಎಂಬುವುದರ ಸೂಚಕವಾಗಿದೆ. ಬೆಳಗಾವಿ ಆಯುಕ್ತಾಲಯ ವ್ಯಾಪ್ತಿ ದೊಡ್ಡದಾಗಿದ್ದು, ಇದು ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರ್ಗಿ, ಬೀದರ, ವಿಜಯಪುರ ಮತ್ತು ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಹನ್ನೆರಡು ಜಿಲ್ಲೆಗಳಲ್ಲಿ ವ್ಯಾಪಿಸಿದೆ.

ಈ ಜಿಲ್ಲೆಗಳಲ್ಲಿ ಒಟ್ಟು 2,30,566 ತೆರಿಗೆದಾರರು ಜಿಎಸ್‌ಟಿ ಅಡಿಯಲ್ಲಿ ನೋಂದಾವಣಿ ಮಾಡಿಕೊಂದ್ದಾರೆ ಮತ್ತು ಇವುಗಳನ್ನು ರಾಜ್ಯ ಅಥವಾ ಕೇಂದ್ರ ಜಿಎಸ್‌ಟಿ ಅಧಿಕಾರಿಗಳು ನಿರ್ವಹಿಸುತ್ತಿದ್ದಾರೆ. ಕೇಂದ್ರ ಜಿಎಸ್‌ಟಿ ಆಡಳಿತದ ಅಡಿಯಲ್ಲಿ ನೋಂದಾಯಿಸಲಾದ ತೆರಿಗೆದಾರರಿಂದ, ಬೆಳಗಾವಿ ಕೇಂದ್ರ ಜಿಎಸ್‌ಟಿ ರಚನೆಯಿಂದ .10,172 ಕೋಟಿ ಸಂಗ್ರಹಿಸಲಾಗಿದೆ. 2019-20ನೇ ಸಾಲಿನ ಆಯುಕ್ತಾಲಯದ ಆದಾಯ .7,677 ಕೋಟಿ, 2020-21ರಲ್ಲಿ . 7,124 ಕೋಟಿ ಮತ್ತು 2021-22ನೇ ಸಾಲಿಗೆ . 10,172 ಕೋಟಿಯಷ್ಟಾಗಿದೆ. ಇದು ಹಿಂದಿನ ಆರ್ಥಿಕತೆಗಳ ಸಂಗ್ರಹಕ್ಕಿಂತ ಶೇ 42 ಹೆಚ್ಚಳವಾಗಿದæ ಎಂದಿದ್ದಾರೆ.

ಉಕ್ಕು, ಸಿಮೆಂಚ್‌, ಗಣಿಗಾರಿಕೆ, ಸಕ್ಕರೆಯ ಪ್ರಮುಖ ಕೈಗಾರಿಕೆಗಳಾದ ಜಿಎಸ್‌ಡಬ್ಲ್ಯು ಸ್ಟೀಲ…, ಕೆಸೋರಾಮ… ಇಂಡಸ್ಟ್ರೀಸ್‌, ಓರಿಯಂಟ್‌ ಸಿಮೆಂಟ್‌, ಕೆಜೆಬಿಎ ಇತ್ಯಾದಿಗಳು, ಈ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬೆಳಗಾವಿ ಜಿಎಸ್‌ಟಿ ಆಯುಕ್ತಾಲಯ ತೆರಿಗೆದಾರರ ಅನುಸರಣೆಗೆ ಅನುಕೂಲ ಆಗುವಂತೆ ವಿವಿಧ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.