ಗೂಗಲ್‌ಗೆ 26 ಸಾವಿರ ಕೋಟಿ ರೂ. ದಂಡ, 15 ವರ್ಷಗಳ ಹೋರಾಟದಲ್ಲಿ ದಂಪತಿಗೆ ಜಯ
15 ವರ್ಷಗಳ ಕಾನೂನು ಹೋರಾಟದಲ್ಲಿ ಇಂಗ್ಲೆಂಡ್ ಮೂಲದ ದಂಪತಿಗೆ ಗೆಲುವು ಸಿಕ್ಕಿದ್ದು, ಗೂಗಲ್‌ಗೆ ₹26,000 ಕೋಟಿ ದಂಡ ವಿಧಿಸಲಾಗಿದೆ. ಏನಿದು ಪ್ರಕರಣ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಲಂಡನ್: ಕಳೆದ 15 ವರ್ಷಗಳಿಂದ ನಡೆದುಕೊಂಡಿದ್ದ ಪ್ರಕರಣದಲ್ಲಿ ಟೆಕ್ ಜಾಯಿಂಟ್ ಗೂಗಲ್‌ಗೆ ಸೋಲಾಗಿದೆ. ಈ ಪ್ರಕರಣದಲ್ಲಿ ಇಂಗ್ಲೆಂಡ್ ಮೂಲದ ದಂಪತಿಗೆ ಗೆಲುವು ಸಿಕ್ಕಿದ್ದು, ಗೂಗಲ್‌ಗೆ 26,000 ಕೋಟಿ ರೂಪಾಯಿ (2.4 ಮಿಲಿಯನ್) ದಂಡ ವಿಧಿಸಲಾಗಿದೆ. ಇಂಗ್ಲೆಂಡ್‌ನ ಶಿವೌನ್ ಮತ್ತು ಆಡಂ ರೈಫ್ ದಂಪತಿ 2006ರಲ್ಲಿ "ಪೌಂಡಮ್" ಹೆಸರಿನ ವೆಬ್‌ಸೈಟ್ ಆರಂಭಿಸಿದ್ದರು. ಇದೊಂದು ಬೆಲೆ ಹೋಲಿಕೆಯ (Price Comparison) ವೆಬ್‌ಸೈಟ್ ಆಗಿದ್ದು, ಲೈವ್ ಹೋಗುತ್ತಿದ್ದಂತೆ ಇದರ ವಿಸಿಬಿಲಿಟಿ ಸತತವಾಗಿ ಕುಸಿತ ಕಾಣಲಾರಂಭಿಸಿತು. ವಿಶೇಷವಾಗಿ Googleನಲ್ಲಿ ‘price comparison’ ಮತ್ತು ‘shopping’ ಪದಗಳಲ್ಲಿ ವೆಬ್‌ಸೈಟ್ ಸರ್ಚ್ ಮಾಡಲಾಗುತ್ತಿತ್ತು. ನಂತರ ಗೂಗಲ್‌ನ ಆಟೋಮೆಟಿಕ್ ಸ್ಪ್ಯಾಮ್ ಫಿಲ್ಟರ್‌ನ ಸರ್ಚ್ ಪೆನೆಲ್ಟಿಯಿಂದಾಗಿ ವೆಬ್‌ಸೈಟ್ ವಿಸಿಬಿಲಿಟಿ ಕಡಿಮೆಯಾಗಿದೆ ಎಂಬ ವಿಷಯ ದಂಪತಿಗೆ ಗೊತ್ತಾಗಿದೆ. ಗೂಗಲ್‌ನಿಂದ ತಮ್ಮ ವೆಬ್‌ಸೈಟ್ ಕುಸಿತವಾಗಿದೆ ಎಂಬ ವಿಷಯ ತಿಳಿದು ದಂಪತ ಶಾಕ್ ಆಗಿದ್ದರು.
ಪೌಂಡಮ್ ವೆಬ್‌ಸೈಟ್ ಸ್ಥಾಪಕ ಹೇಳುವ ಪ್ರಕಾರ, ಗೂಗಲ್‌ನ ಆಟೋಮೆಟಿಕ್ ಸ್ಪ್ಯಾಮ್ ಫಿಲ್ಟರ್‌ನ ಸರ್ಚ್ ಪೆನೆಲ್ಟಿಯಿಂದಾಗಿ ಬಳಕೆದಾರರು ನಮ್ಮನ್ನು ತಲುಪೋದು ಕಷ್ಟವಾಯ್ತು. ಬಳಕೆದಾರರು ನಮ್ಮ ವೆಬ್‌ಸೈಟ್‌ಗೆ ಬರಲು ಅಸಮರ್ಥರಾಗಿದ್ದರು. ಈ ಕಾರಣದಿಂದ ರೆವೆನ್ಯೂ ಜನರೇಟ್ ಮಾಡೋದು ನಮಗೆ ದೊಡ್ಡ ಸಮಸ್ಯೆಯನ್ನುಂಟು ಮಾಡಿತು ಎಂದು ಹೇಳುತ್ತಾರೆ. ಆರಂಭದಲ್ಲಿ ವೆಬ್‌ಸೈಟ್ ವಿಸಿಬಿಲಿಟಿ ಕಡಿಮೆಯಾಗಲು ತಾಂತ್ರಿಕದೋಷ ಎಂದು ತಿಳಿದಿದ್ದರು.
ಬಿಬಿಸಿ ಜೊತೆ ಮಾತನಾಡಿರುವ ಆಡಂ, ನಮ್ಮ ಪೇಜ್ ಮತ್ತು Ranking ಗಮನದಲ್ಲಿಟ್ಟುಕೊಂಡು ನೋಡಿದರೂ ವೆಬ್‌ಸೈಟ್‌ಗೆ ಭೇಟಿ ನೀಡುವ ಜನರ ಸಂಖ್ಯೆ ಕುಸಿಯಲಾರಂಭಿಸಿತು. ನಾವು ಸರಿಯಾಗಿ ಕೆಲಸ ಮಾಡಬೇಕು ಮತ್ತು ವಿಶೇಷ ತಂತ್ರಜ್ಞರನ್ನು ಸಂಪರ್ಕಿಸಬೇಕೆಂದು ಯೋಚಿಸಲು ಆರಂಭಿಸಿದೆವು. ಎರಡು ವರ್ಷಗಳ ನಂತರ ಅನೇಕ ಪ್ರಯತ್ನಗಳ ಹೊರತಾಗಿಯೂ, Google ದಂಡವನ್ನು ತೆಗೆದು ಹಾಕಲಿಲ್ಲ. ಫೌಂಡಮ್ ಟ್ರಾಫಿಕ್ ಸಹ ಹಂತ ಹಂತವಾಗಿ ಕ್ಷೀಣಿಸುತ್ತಲೇ ಇತ್ತು. ಆದರೆ ಇತರ ಸರ್ಚ್ ಇಂಜಿನ್‌ಗಳು ಅದನ್ನು ಸಾಮಾನ್ಯವಾಗಿ ಶ್ರೇಣೀಕರಿಸುವುದನ್ನು ಮುಂದುವರೆಸಿದ್ದವು ಎಂದು ಹೇಳಿದ್ದಾರೆ.
ಕೊನೆಗೆ ಆಡಂ 2010ರಲ್ಲಿ ಯುರೋಪಿಯನ್ ಕಮಿಷನ್ ಸಂಪರ್ಕಿಸಿದಾಗ ಪ್ರಕರಣದ ವೇಗ ಪಡೆದುಕೊಂಡಿತು. ಫೌಂಡಮ್ ಸ್ಪರ್ಧೆಗೆ ಹೋಲಿಸಿದ್ರೆ ಗೂಗಲ್ ತನ್ನದೇ ಶಾಪಿಂಗ್ ಸೇವೆಯನ್ನು ಉತ್ತೇಜಿಸುತ್ತಿದೆ ಎಂಬುವುದು ಆಂಟಿಟ್ರಸ್ಟ್ ತನಿಖೆಯಲ್ಲಿ ತಿಳಿದು ಬಂದಿದೆ. 2017ರಲ್ಲಿ ತನಿಖಾ ವರದಿಯನ್ನು ಆಧರಿಸಿ ತೀರ್ಪು ನೀಡಿದ ಯುರೋಪಿಯನ್ ಕಮಿಷನ್, ಗೂಗಲ್ ಮಾರುಕಟ್ಟೆಯ ಮೇಲಿನ ತನ್ನ ನಿಯಂತ್ರಣವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಹೇಳಿತು. ನಂತರ ಗೂಗಲ್‌ಗೆ 2.4 ಬಿಲಿಯನ್ ಪೌಂಡ್ ( ಸರಿಸುಮಾರು 26,172 ಕೋಟಿ ರೂ.) ದಂಡ ವಿಧಿಸಿತು.
ಇದನ್ನೂ ಓದಿ:ಮಾರುಕಟ್ಟೆಗೆ ಬರ್ತಿದೆ ಬಿಎಸ್‌ಎನ್‌ಎಲ್ 5G ಸ್ಮಾರ್ಟ್‌ಫೋನ್: ಏನಿದರ ವಿಶೇಷ? ಬೆಲೆ ಎಷ್ಟು?
ಯುರೋಪಿಯನ್ ಕಮಿಷನ್ ತೀರ್ಪು ಪ್ರಶ್ನಿಸಿ ಯುರೋಪಿಯನ್ ಕೋರ್ಟ್‌ಗೆ ಮೇಲ್ಮನವಿಯನ್ನು ಸಲ್ಲಿಸಿತ್ತು. ಕೋರ್ಟ್‌ನಲ್ಲಿ ಬರೋಬ್ಬರಿ ಏಳು ವರ್ಷಗಳ ಪ್ರಕರಣದ ವಿಚಾರಣೆ ನಡೆಯಿತು. ಅಂತಿಮವಾಗಿ 2024ರಲ್ಲಿ ಯುರೋಪಿಯನ್ ಕಮಿಷನ್ ತೀರ್ಪನ್ನು ಯುರೋಪಿಯನ್ ಕೋರ್ಟ್ ಎತ್ತಿ ಹಿಡಿದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಆಡಂ ಪತ್ನಿ ಶಿವೌನ್, ನಾವಿಬ್ಬರೂ ಬಹುಶಃ ಬದಲಾವಣೆಯನ್ನು ತರಬಹುದು ಎಂಬ ಭ್ರಮೆಯಲ್ಲಿ ಬೆಳೆದಿದ್ದೇವೆ. ನಾವು ನಿಜವಾಗಿಯೂ ಕಿಡಿಗೇಡಿಗಳನ್ನು ಇಷ್ಟಪಡುವುದಿಲ್ಲ ಎಂದು ಮಾರ್ಮಿಕವಾಗಿ ಮಾತನಾಡಿದ್ದರು.
ದಂಪತಿ Google ವಿರುದ್ಧ ನಾಗರಿಕ ಹಾನಿಯ ಪರಿಹಾರದ ಅರ್ಜಿಯನ್ನು ಸಹ ಸಲ್ಲಿಕೆ ಮಾಡಿದ್ದಾರೆ. ಈ ಅರ್ಜಿಯ ವಿಚಾರಣೆಯು 2026 ರಲ್ಲಿ ನಡೆಯಲಿದೆ. 2016ರಲ್ಲಿ ಫೌಂಡಮ್ ವೆಬ್‌ಸೈಟ್ ಕ್ಲೋಸ್ ಮಾಡೋಣ ಎಂಬ ನಿರ್ಧಾರಕ್ಕೂ ದಂಪತಿ ಬಂದಿದ್ದರಂತೆ. ಆದ್ರೆ ಕೊನೆಗೆ ಕಾನೂನು ಹೋರಾಟ ನಡೆಸಲು ನಿರ್ಧರಿಸಿದ್ದರು ಎಂದು ವರದಿಯಾಗಿದೆ.
ಇದನ್ನೂ ಓದಿ: 1500 ರೂಪಾಯಿಯಿಂದ ಆರಂಭಿಸಿ ಇಂದು 3 ಕೋಟಿ ಕಂಪನಿಯ ಒಡತಿಯಾದ ಗೃಹಿಣಿ