ನಂದಿನಿ ಉತ್ಪನ್ನ ಪ್ರಿಯರಿಗೆ ಗುಡ್ ನ್ಯೂಸ್: ನಂದಿನಿ ಸ್ವೀಟ್ಸ್ ಮೇಲೆ ಶೇ.20 ರಿಯಾಯಿತಿ
ರಾಜ್ಯದಲ್ಲಿ ಕರ್ನಾಟಕ ಹಾಲು ಮಹಾಮಂಡಳದಿಂದ ಆಯೋಜನೆ ಮಾಡಲಾಗಿರುವ ನಂದಿನಿ ಸಿಹಿ ಉತ್ಸವದ ವೇಳೆ ಎಲ್ಲ ಸಿಹಿ ಉತ್ಪನ್ನಗಳ ಮೇಲೆ ಶೇ.20 ರಿಯಾಯಿತಿ ನೀಡಲಾಗಿದೆ.

ಬೆಂಗಳೂರು (ಆ.17): ರಾಜ್ಯದಲ್ಲಿ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್)ನ ಉತ್ಪನ್ನವಾದ ನಂದಿನಿ ಬ್ರ್ಯಾಂಡ್‌ನ ಅಡಿಯಲ್ಲಿ ಆ.15ರಿಂದ ಆರಂಭಿಸಲಾಗಿರುವ 'ನಂದಿನಿ ಸಿಹಿ ಉತ್ಸವ-2023' ಅನ್ನು ಸೆ.20ರವರೆಗೆ ನಡೆಸಲು ನಿರ್ಧಾರ ಮಾಡಲಾಗಿದೆ. ಒಟ್ಟು 30ಕ್ಕೂ ಹೆಚ್ಚು ಬಗೆಯ ಸಿಹಿ ತಿಂಡಿಗಳನ್ನು ಮಾರಾಟ ಮಾಡಲು ಕೆಎಂಎಫ್ ಮುಂದಾಗಿದೆ.
ಹೌದು, ದೇಶದ ನಂದಿನಿ ಉತ್ಪನ್ನ ಪ್ರಿಯರಿಗೆ ಕೆಎಂಎಪ್ ಗುಡ್ ನ್ಯೂಸ್ ನೀಡಿದೆ. ಈ ವರ್ಷ ನಂದಿನಿ ಸಿಹಿ ಉತ್ಸವಕ್ಕೆ ಶೇ.20ರಷ್ಟು ರಿಯಾಯಿತಿ ನೀಡುತ್ತಿದೆ. ನಂದಿನಿ ಹೊಸ ಉತ್ಪನ್ನಗಳಾದ ಬೆಲ್ಲದ ಪೇಡ, ಸ್ಪೆಷಲ್ ಹಾಲಿನ ಬರ್ಫಿ, ಚಾಕೊಲೇಟ್ ಕುಕ್ಕಿಸ್, ಕಡಲೇ ಬೀಜದ ಚಿಕ್ಕಿ ಸೇರಿ ಹಲವು ಸಿಹಿ ಪದಾರ್ಥಗಳನ್ನು ಮಾರಾಟ ಮಾಡುತ್ತಿದೆ. ಬೆಲ್ಲದ ಜೊತೆಗೆ ನಂದಿನಿ ಖೋವಾ ಸೇರಿ ತಯಾರಿಸಲಾಗಿರುವ 'ಖೋವ ಕಡಲೆ ಮಿಠಾಯಿ' ಮಾರುಕಟ್ಟೆಗೆ ಬಂದಿದೆ. ಪ್ರಸ್ತುತ ನಂದಿನಿ ಬ್ರ್ಯಾಂಡ್‌ನಲ್ಲಿ 30ಕ್ಕೂ ಹೆಚ್ಚು ವಿವಿಧ ಬಗೆಯ ಸಿಹಿ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತಿದೆ.
ನಟ ಉಪೇಂದ್ರನಿಗೆ ಬಿಗ್ ರಿಲೀಫ್: ಹಲಸೂರು ಗೇಟ್ ಠಾಣೆಯ ಎಫ್‌ಐಆರ್‌ಗೂ ತಡೆಕೊಟ್ಟ ಹೈಕೋರ್ಟ್
ಆ.15ರಿಂದ ಸೆ.20ರವರೆಗೆ ನಂದಿನಿ ಉತ್ಸವ ಆಚರಣೆ: ಇನ್ನು ರಾಜ್ಯದ ನಂದಿನಿ ಬ್ರ್ಯಾಂಡ್ ಗ್ರಾಹಕರಿಗೆ ಸ್ಪರ್ಧಾತ್ಮಕ ಬೆಲೆಗಳಲ್ಲಿ ಸಿಹಿ ಉತ್ಪನ್ನಗಳನ್ನು ಒದಗಿಸುತ್ತಿದೆ. ನಂದಿನಿ ಎಲ್ಲಾ ಸಿಹಿ ಉತ್ಪನ್ನಗಳ ಬಗ್ಗೆ ಗ್ರಾಹಕರಲ್ಲಿ ಅರಿವು ಮೂಡಿಸುತ್ತಿದೆ. ಕಳೆದ 5 ವರ್ಷಗಳಿಂದ ರಾಜ್ಯದ್ಯಾಂತ ವರ್ಷದಲ್ಲಿ ಕನಿಷ್ಠ ಎರಡು ಬಾರಿ ನಂದಿನಿ ಸಿಹಿ ಉತ್ಸವ ನಡೆಯುತ್ತದೆ. ಇದೀಗ ಅಗಸ್ಟ್ 15 ರಿಂದ ಆರಂಭವಾಗಿದ್ದು, ಸೆಪ್ಟೆಂಬರ್ 20 ವರೆಗೆ ನಡೆಯಲಿದೆ. ಗಣೇಶ ಹಬ್ಬದವರೆಗೂ ನಂದಿನಿ ಸಿಹಿ ಉತ್ಸವವನ್ನು ರಾಜ್ಯದ್ಯಾಂತ ನಡೆಯಲಿದೆ.
ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರಾಂಡ್ ಪ್ರಶಸ್ತಿ-2023 ಸ್ವೀಕರಿಸಿದ KSRTC
ಇಲ್ಲಿದೆ ನಂದಿನಿ ಬ್ರ್ಯಾಂಡ್‌ನ ಸಿಹಿ ಪದಾರ್ಥಗಳ ಪಟ್ಟಿ: ಮೈಸೂರ್ ಪಾಕ್, ಹಾಲಿನ ಪೇಡಾ, ಧಾರವಾಡ ಪೇಡ, ಕೇಸರ್ ಪೇಡ, ಏಲಕ್ಕಿ ಪೇಡ, ಬಾದಾಮ್, ಕ್ಯಾಷು, ಡ್ರೈಪ್ರೂರ್ಟ್ಸ್, ಕೋಕೋನಟ್ ಚಾಕೋಲೇಟ್ ಬರ್ಫಿಗಳ ಕುಂದ, ಜಾಮೂನ್, ರಸಗುಲ್ಲಾ, ಸಿರಿಧಾನ್ಯ ಲಾಡು, ಸಿರಿಧಾನ್ಯ ಹಾಲಿನ ಪುಡಿ, ಗೋಧಿ ಲಾಡು, ಕುಕ್ಕೀಸ್ ಮತ್ತು ಎಲ್ಲಾ ಸಿಹಿ ಉತ್ಪನ್ನಗಳ ಮಾರಾಟ ದರದ ಮೇಲೆ ಶೇ. 20 ರಷ್ಟು ರಿಯಾಯಿತಿ ನೇರವಾಗಿ ಗ್ರಾಹಕರಿಗೆ ನೀಡುತ್ತಿದೆ.