Asianet Suvarna News Asianet Suvarna News

ಚಿನ್ನ, ಬೆಳ್ಳಿ ಕೊಳ್ಳೋರಿಗೆ ಭರ್ಜರಿ ಗುಡ್ ನ್ಯೂಸ್

ಹಬ್ಬದ ಈ ಸಂದರ್ಭದಲ್ಲಿ ಚಿನ್ನ ಬೆಳ್ಳಿ ಕೊಳ್ಳೋರಿಗೆ ಶುಭ ಸುದ್ದಿಯೊಂದು ಇಲ್ಲಿದೆ. ಚಿನ್ನ ಹಾಗೂ ಬೆಳ್ಳಿಯ ದರಗಳಲ್ಲಿ ಇಳಿಕೆ ಕಂಡು ಬಂದಿದೆ. 

Gold Slip Further  Down  Rs 150 As Demand Softens
Author
Bengaluru, First Published Oct 17, 2018, 3:10 PM IST

ನವದೆಹಲಿ :  ಜಾಗತಿಕ ಬೇಡಿಕೆಗೆ ಅನುಗುಣವಾಗಿ ನಿರಂತರವಾಗಿ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡು ಬರುತ್ತಿದ್ದು, ಇದೀಗ ಮತ್ತೊಮ್ಮೆ ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. 

10 ಗ್ರಾಂ ಚಿನ್ನದ ಮೇಲೆ 150 ರು. ಇಳಿಕೆ ಕಂಡು ಬಂದಿದ್ದು ಇದರಿಂದ 10 ಗ್ರಾಂ ಚಿನ್ನದ ದರ 32,030 ರು.ನಷ್ಟಾಗಿದೆ. 

ಇನ್ನು ಬೆಳ್ಳಿಯ ದರದಲ್ಲಿಯೂ ಕೂಡ ಇಳಿಕೆ ಕಂಡು ಬಂದಿದ್ದು ಪ್ರತೀ ಕೆಜಿ ಬೆಳ್ಳಿಯ ಮೇಲೆ 220 ರು. ಇಳಿಕೆಯಾಗಿದೆ. ಇದರಿಂದ 1 ಕೆಜಿ ಬೆಳ್ಳಿಯ ದರ 39,480ರು.ನಷ್ಟಾಗಿದೆ. 

ಬೆಳ್ಳಿಯ ನಾಣ್ಯ ತಯಾರಕರಿಂದ ಬೇಡಿಕೆ ಕುಸಿದ ಪರಿಣಾಮ ಬೆಳ್ಳಿಯ ದರದಲ್ಲಿ ಇಳಿಕೆ  ಕಂಡು ಬಂದಿದೆ.

ಸ್ಥಳೀಯ ಮಾರುಕಟ್ಟೆ ಹಾಗೂ ಜಾಗತಿಕವಾಗಿ ಚಿನ್ನದ ಬೇಡಿಕೆಯು ಕುಸಿದ ಪರಿಣಾಮ ಚಿನ್ನದ ದರದಲ್ಲಿ ಕುಸಿತ ಕಂಡು ಬಂದಿದೆ.

Follow Us:
Download App:
  • android
  • ios