Asianet Suvarna News Asianet Suvarna News

ಚಿನ್ನ ಕೊಳ್ಳೋರಿಗೆ ಶಾಕ್

ಜಾಗತಿಕವಾಗಿ ನಿರಂತರವಾಗಿ ಚಿನ್ನದ ದರದಲ್ಲಿ ಏರಿಳಿತ ಕಂಡು ಬರುತ್ತಿದೆ. ಅದರಂತೆ ಚಿನಿವಾರ ಮಾರುಕಟ್ಟೆಯಲ್ಲಿ ಗುರುವಾರ ಚಿನ್ನದ ದರದಲ್ಲಿ ಅಲ್ಪ ಪ್ರಮಾಣದಲ್ಲಿ  ಏರಿಕೆ ಕಂಡು ಬಂದಿದೆ. 

Gold futures gain 0.41 per cent on global cues

ನವದೆಹಲಿ (ಜೂ.7) :  ಜಾಗತಿಕವಾಗಿ ನಿರಂತರವಾಗಿ ಚಿನ್ನದ ದರದಲ್ಲಿ ಏರಿಳಿತ ಕಂಡು ಬರುತ್ತಿದೆ. ಅದರಂತೆ ಚಿನಿವಾರ ಮಾರುಕಟ್ಟೆಯಲ್ಲಿ ಗುರುವಾರ ಚಿನ್ನದ ದರದಲ್ಲಿ ಅಲ್ಪ ಪ್ರಮಾಣದಲ್ಲಿ  ಏರಿಕೆ ಕಂಡು ಬಂದಿದೆ. 

ಪ್ರತೀ 10 ಗ್ರಾಂ ಚಿನ್ನದ ದರದಲ್ಲಿ 0.41 ರು. ಏರಿಕೆ  ಕಂಡು ಬಂದು, 10 ಗ್ರಾಂ ದರವು 30,989 ರು.ನಷ್ಟಾದಂತಾಗಿದೆ. ಚಿನ್ನದ ಮಾರುಕಟ್ಟೆಯಲ್ಲಿನ ಈ ಬೆಲೆ ಏರಿಕೆಯು  ಸಕಾರಾತ್ಮಕವಾದ ಬೆಳವಣಿಗೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಇನ್ನು ಅಮೆರಿಕ ಹಾಗೂ ಅದರ ಮಿತ್ರ ರಾಷ್ಟ್ರಗಳ ನಡುವಿನ ದರ ಸಮರದಿಂದ  ಡಾಲರ್ ಮೌಲ್ಯದಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದ್ದು, ಇದೇ ನಿಟ್ಟಿನಲ್ಲಿ ಚಿನ್ನದ ದರದಲ್ಲಿ  ಏರಿಕೆಯಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 

Follow Us:
Download App:
  • android
  • ios