Asianet Suvarna News Asianet Suvarna News

ಚಿನ್ನ ಕೊಳ್ಳೋರಿಗೆ ಭರ್ಜರಿ ಗುಡ್ ನ್ಯೂಸ್

ಚಿನ್ನ ಕೊಳ್ಳೋರಿಗೆ ಭರ್ಜರಿ ಗುಡ್ ನ್ಯೂಸ್. ಸದ್ಯ ಚಿನ್ನದ ದರದಲ್ಲಿ ಭರ್ಜರಿ ಇಳಿಕೆಯಾಗಿದ್ದು  ಬಂಗಾರ ಕೊಳ್ಳು ಇದು ಉತ್ತಮ ಸಮಯವಾಗಿದೆ. 

Gold extends losses on weak global cues
Author
Bengaluru, First Published Sep 28, 2018, 4:18 PM IST
  • Facebook
  • Twitter
  • Whatsapp

ನವದೆಹಲಿ [ಸೆ.28] :  ಜಾಗತಿಕ ಮಾರುಕಟ್ಟೆಯಲ್ಲಿ ನಿರಂತರವಾಗಿ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡು ಬರುತ್ತದೆ. ಇದೀಗ ಅದರಂತೆ ಮತ್ತೊಮ್ಮೆ ಚಿನ್ನದ ದರದಲ್ಲಿ ಭರ್ಜರಿ ಇಳಿಕೆ ಕಂಡು ಬಂದಿದೆ. 

10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 250ರು. ಇಳಿಕೆಯಾಗಿದ್ದು ಇದರಿಂದ 10 ಗ್ರಾಂ ಚಿನ್ನದ ಬೆಲೆಯು 31,300 ರು.ಗಳಾಗಿದೆ. 

ಸ್ಥಳೀಯ ಮಾರುಕಟ್ಟೆಯಲ್ಲಿ ಚಿನ್ನದ ಮೇಲಿನ ಬೇಡಿಕೆಯು ಕುಸಿದ ಪರಿಣಾಮವಾಗಿ ಚಿನ್ನದ ಬೇಡಿಕೆ ಕುಸಿದಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಇನ್ನು ಇದೇ ವೇಳೆ ಬೆಳ್ಳಿಯ ಬೆಲೆಯಲ್ಲಿಯೂ ಕೂಡ ಇಳಿಕೆ ಕಂಡು ಬಂದಿದೆ. 1 ಕೆಜಿ ಬೆಳ್ಳಿಯ ಬೆಲೆಯಲ್ಲಿ 450 ರು. ಕುಸಿದಿದ್ದು ಪ್ರತೀ ಕೆಜಿ  ಬೆಳ್ಳಿಗೆ 38,000ರು.ನಷ್ಟಾಗಿದೆ. 

Follow Us:
Download App:
  • android
  • ios