ಚಿನ್ನದ ರೇಟ್ ಇಳ್ದೈತಿ: ಮನೆಯೊಡತಿಗೆ ಕೊಡ್ಸಲ್ವಾ ಮೂಗುತಿ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 23, Aug 2018, 11:40 AM IST
Global gold-price softening trend to last for months, not years
Highlights

ಕನಿಷ್ಠ ಮಟ್ಟಕ್ಕೆ ಕುಸಿದ ಚಿನ್ನದ ಬೆಲೆ! ಹಬ್ಬಗಳ ಸೀಸನ್ ನಲ್ಲಿ ವಹಿವಾಟು ಜೋರು! ಡಾಲರ್ ಮೌಲ್ಯ ಹೆಚ್ಚಳವೇ ಚಿನ್ನದ ಬೆಲೆ ಇಳಿಕೆಗೆ ಕಾರಣ! ಕೆಲವೇ ದಿನಗಳಲ್ಲಿ ಮತ್ತೆ ಬೆಲೆ ಏರಿಕೆ ಸಂಭವ! ಚಿನ್ನ ಕೊಳ್ಳಲು ಇದು ಸಕಾಲ ಅಂತಾರೆ ತಜ್ಞರು 

ಬೆಂಗಳೂರು(ಆ.23): ಚಿನ್ನದ ದರ ಕಳೆದ 8 ತಿಂಗಳಿನಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿದಿದ್ದು, ಹಬ್ಬಗಳ ಸೀಸನ್‌ ಕೂಡ ಬಂದಿರುವುದರಿಂದ ಭಾರೀ ವಹಿವಾಟು ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಡಾಲರ್‌ ಮೌಲ್ಯ ಹೆಚ್ಚುತ್ತಿರುವುದು, ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿ ದರಗಳ ಏರಿಕೆ, ಭಾರತದಲ್ಲಿ ಬೇಡಿಕೆ ಕುಸಿದಿರುವುದೇ ಬಂಗಾರದ ದರ ಇಳಿಕೆಯಾಗಲು ಪ್ರಮುಖ ಕಾರಣವಾಗಿದೆ. ಆದರೆ ಇನ್ನಷ್ಟು ದರ ಇಳಿಕೆ ನಿರೀಕ್ಷೆ ಇಲ್ಲ ಎಂದು ಅಂದಾಜಿಸಲಾಗಿದ್ದು, ಚಿನ್ನ ಕೊಳ್ಳಲು ಇದೇ ಸಕಾಲ ಎಂಬುದು ತಜ್ಞರ ಅಂಬೋಣವಾಗಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್‌ ಗಮನಿಸಿದರೆ, ಚಿನ್ನ ಖರೀದಿಗೆ ಇದೇ ಪ್ರಶಸ್ತ ಸಮಯ. ಕಾರಣ ಇನ್ನು ಎರಡೇ ದಿನಗಳಲ್ಲಿ ದರ ಏರಿಕೆಯಾಗುವ ಎಲ್ಲಾ ಲಕ್ಷಣ ಇದೆ. ಕಳೆದ ಏಪ್ರಿಲ್‌ಗೆ ಹೋಲಿಸಿದರೆ ಬಂಗಾರದ ದರದಲ್ಲಿ ಶೇ.14ರಷ್ಟು ಕಡಿಮೆಯಾಗಿತ್ತು. ಎಲ್ಲಾ ಕರೆನ್ಸಿಗಳ ಎದುರು ಡಾಲರ್‌  ಮೌಲ್ಯ ಹೆಚ್ಚಾಗಿರುವುದೇ ಜಾಗತಿಕವಾಗಿ ಚಿನ್ನದ ದರ ಇಳಿಯಲು ಕಾರಣ.

loader