ನವದೆಹಲಿ[ಡಿ.02]  ಆರ್ಥಿಕ ಅಪರಾಧಿಗಳನ್ನು ಗಡಿಪಾರು ಮಾಡಲು ಜಿ-20 ರಾಷ್ಟ್ರಗಳು ಪ್ರಬಲ ಸಹಕಾರ ನೀಡಲು ಪ್ರಧಾನಿ ನರೇಂದ್ರ ಮೋದಿ ಕೋರಿದ್ದಾರೆ.  ಭಾರತದ ಬ್ಯಾಂಕ್‌ಗಳಿಗೆ ವಂಚಿಸಿದ ಅನೇಕರು ಯುರೋಪಿನ ರಾಷ್ಟ್ರಗಳಲ್ಲಿ ತಲೆ ಮರೆಸಿಕೊಂಡಿದ್ದಾರೆ. ಬ್ರಿಟನ್‌, ಜರ್ಮನಿ, ಇಟಲಿ ಸಹ ಜಿ-20 ಸದಸ್ಯರು. ಒಂದು ವೇಳೆ ಉಳಿದ ರಾಷ್ಟ್ರಗಳಿಂದ ಸಮ್ಮತಿ ದೊರೆತರೆ ಆರ್ಥಿಕ ಅಪರಾಧಿಗಳು ಎಲ್ಲಿಗೆ ಓಡಿಹೋಗಲು ಸಾಧ್ಯವಿಲ್ಲ.

ವಿಜಯ್‌ ಮಲ್ಯ, ನೀರವ್‌ ಮೋದಿ, ಮೆಹುಲ್‌ ಚೋಕ್ಸಿ ಜತಿನ್‌ ಮೆಹ್ತಾ, ಚೇತನ್‌ ಜಯಂತಿಲಾಲ್‌ ಸಂದೇಸರ, ನಿತಿನ್‌ ಜಯಂತಿಲಾಲ್‌ ಸಂದೇಸರ ಮತ್ತು ದೀಪ್ತಿಬೆನ್‌ ಚೇತನ್‌ಕುಮಾರ್‌ ಸಂದೇಸರ ಸೇರಿದಂತೆ ಅನೇಲಕರು ಸಾವಿರಾರು ಕೋಟಿ ರೂ. ವಂಚಿಸಿದ ಪಟ್ಟಿಯಲ್ಲಿ ಇದ್ದಾರೆ.

ಸರಕಾರ, ಜಾರಿ ನಿರ್ದೇಶನಾಲಯ , ಆದಾಯ ತೆರಿಗೆ ಇಲಾಖೆ, ವಿವಿಧ ಬ್ಯಾಂಕ್‌ಗಳಿಗೂ ಈ ಮಹಾನ್ ಕುಳಗಳು ಬೇಕಾಗಿದ್ದಾರೆ. ಎನ್‌ಡಿಎ ಸರಕಾರವೇ ಇಂಥವರ ರಕ್ಷಣೆಗೆ ನಿಂತಿದೆ ಎಂಬ ಆರೋಪವನ್ನು ವಿಪಕ್ಷಗಳು ಮಾಡಿದ್ದವು. ಆದರೆ ಅದೆಲ್ಲದಕ್ಕೆ ಮೋದಿ ಉತ್ತರ ನೀಡುವಂತೆ ತಮ್ಮ ಕಾರ್ಯಕ್ರಮ ಮಂಡಿಸಿದ್ದಾರೆ.