ಮತ್ತೆ ಏರಿಕೆಯತ್ತ ಮುಖ ಮಾಡಿದ ತೈಲದರ! ಒಂದೇ ದಿನ 22 ಪೈಸೆಯಷ್ಟು ಏರಿಕೆಯಾದ ಪೆಟ್ರೋಲ್ ದರ! ಮುಂಬೈನಲ್ಲಿ 90 ರ ಗಡಿ ದಾಟಿದ ಪೆಟ್ರೋಲ್ ದರ! ಸಿಲಿಕಾನ್ ಸಿಟಿ ಬೆಂಗಳೂರಿನ ಹಣೆಬರಹ ಏನು? 

ನವದೆಹಲಿ(ಸೆ.29): ಗಗನದತ್ತ ಮುಖ ಮಾಡಿರುವ ತೈಲೋತ್ಪನ್ನಗಳ ದರ ಮತ್ತೆ ಏರಿಕೆಯಾಗಿದ್ದು, ಶನಿವಾರ ಒಂದೇ ದಿನ ಪೆಟ್ರೋಲ್ ಪ್ರತೀ ಲೀಟರ್ ಗೆ 22 ಪೈಸೆಯಷ್ಟು ಏರಿಕೆಯಾಗಿದೆ.
ಅದರಂತೆ ಪ್ರತೀ ಲೀಟರ್ ಡೀಸೆಲ್ ದರದಲ್ಲಿ 21 ಪೈಸೆಯಷ್ಟು ಏರಿಕೆಯಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 83.40 ರೂ. ಗೆ ಏರಿಕೆಯಾಗಿದ್ದು, ಡೀಸೆಲ್ 74.63 ರೂ.ಗೆ ಏರಿಕೆಯಾಗಿದೆ. ಇನ್ನು ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ ದರ 90.75 ರೂ. ಗೆ ಏರಿಕೆಯಾಗಿದ್ದು, ಪ್ರತೀ ಲೀಟರ್ ಡೀಸೆಲ್ ದರ 79.23 ರೂ. ಗೆ ಏರಿಕೆಯಾಗಿದೆ.

Scroll to load tweet…

ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 84.19 ರೂ.ಗೆ ಏರಿಕೆಯಾಗಿದ್ದು, ಡೀಸೆಲ್ ದರ 75.09 ರೂ.ಗೆ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಗಣನೀಯ ಏರಿಕೆಯಾಗುತ್ತಿರುವುದು ಇಂಧನ ದರ ಏರಿಕೆಗೆ ಕಾರಣ ಎನ್ನಲಾಗಿದೆ.