ಎರಡನೇ ದಿನವೂ ತೈಲದರ ಇಳಿಸಿದ ಕೇಂದ್ರ ಸರ್ಕಾರ! ಹಬ್ಬದ ನಿಮಿತ್ತ ಜನಸಾಮಾನ್ಯರಿಗೆ ಕೊಂಚ ರಿಲೀಫ್ ನೀಡಿದ ಸರ್ಕಾರ! ದೇಶದ ಮಹಾನಗರಗಳಲ್ಲಿ ಇಳಿದ ಪೆಟ್ರೋಲ್, ಡೀಸೆಲ್ ಬೆಲೆ
ನವದೆಹಲಿ(ಅ.19): ತೈಲದರದ ನಿರಂತರ ಏರಿಕೆ ಜನಸಾಮಾನ್ಯರಿಗೆ ತೊಂದರೆ ಮಾಡಿದ್ದು ಸುಳ್ಳಲ್ಲ. ಆದರೆ ತೈಲದರದಲ್ಲಿ ನಿಯಂತ್ರಣ ಸಾಧಿಸುವಲ್ಲಿ ಕೇಂದ್ರ ಸರ್ಕಾರ ಕೂಡ ಪ್ರಾಮಾಣಿಕ ಪ್ರಯತ್ನ ನಡೆಸಿಸಿರುವುದು ಎಲ್ಲರಿಗೂ ಗೊತ್ತಿರುವಂತದ್ದೇ.
ಆದರೆ ಹಬ್ಬದ ನಿಮಿತ್ತ ತೈಲದರ ಕಡಿಮೆ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರ, ಕಳೆದ ಎರಡು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆ ಮಾಡಿದೆ. ಅದರಂತೆ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರ 24 ಪೈಸೆ , ಡೀಸೆಲ್ ಬೆಲೆಯಲ್ಲಿ 10 ಪೈಸೆ ಇಳಿದಿದೆ.
ಇದರಿಂದ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 82.38 ರೂ. ಮತ್ತು ಡೀಸೆಲ್ ದರ 75.48 ರೂ. ಆಗಿದೆ. ಅಲ್ಲದೇ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ ದರ 87.84 ರೂ. ಮತ್ತು ಡೀಸೆಲ್ ದರ 79.13 ರೂ. ಇಳಿಕೆಯಾಗಿದೆ.
