ಪೋರ್ಬ್ಸ್‌ ಬಿಲಿಯನೇರ್ ಲಿಸ್ಟ್‌: ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ ಇವರು!

ಪ್ರತಿಷ್ಠಿತ ಪೋರ್ಬ್ಸ್ ನಿಯತಕಾಲಿಕೆ ಎಂದಿನಂತೆ  ಈ ವರ್ಷವೂ ವಿಶ್ವದ ಅತ್ಯಂತ ಹೆಚ್ಚು ಶ್ರೀಮಂತರ ಪಟ್ಟಿಯನ್ನು ರಿಲೀಸ್ ಮಾಡಿದೆ. ಪಟ್ಟಿಯ ಪ್ರಕಾರ, ಈ ಬರೀ 2,781 ಕೋಟ್ಯಾಧಿಪತಿಗಳೊಂದಿಗೆ ಈ ಬಾರಿ 141 ಹೆಚ್ಚು ಜನ ಈ  ಪೋರ್ಬ್ಸ್ ಕೋಟ್ಯಾಧಿಪತಿಗಳ ಪಟ್ಟಿ ಸೇರಿದ್ದಾರೆ. 

Forbes Billionaire List Francoise Bettencourt Meyers who is the richest woman in the world akb

ಪ್ರತಿಷ್ಠಿತ ಪೋರ್ಬ್ಸ್ ನಿಯತಕಾಲಿಕೆ ಎಂದಿನಂತೆ  ಈ ವರ್ಷವೂ ವಿಶ್ವದ ಅತ್ಯಂತ ಹೆಚ್ಚು ಶ್ರೀಮಂತರ ಪಟ್ಟಿಯನ್ನು ರಿಲೀಸ್ ಮಾಡಿದೆ. ಪಟ್ಟಿಯ ಪ್ರಕಾರ, ಈ ಬರೀ 2,781 ಕೋಟ್ಯಾಧಿಪತಿಗಳೊಂದಿಗೆ ಈ ಬಾರಿ 141 ಹೆಚ್ಚು ಜನ ಈ  ಪೋರ್ಬ್ಸ್ ಕೋಟ್ಯಾಧಿಪತಿಗಳ ಪಟ್ಟಿ ಸೇರಿದ್ದಾರೆ. ಇವರೆಲ್ಲರ ಒಟ್ಟು ಮೌಲ್ಯವು 14.2 ಟ್ರಿಲಿಯನ್ ಡಾಲರ್ ಆಗಿದೆ.  2023ಕ್ಕೆ ಹೋಲಿಸಿದರೆ ಈ ಕೋಟ್ಯಾಧಿಪತಿಗಳ ನಿವ್ವಳ ಮೌಲ್ಯ 2 ಟ್ರಿಲಿಯನ್ ಡಾಲರ್ ಹೆಚ್ಚಳವಾಗಿದೆ. ಇದರ ಜೊತೆಗೆ  26 ಹೊಸ ಬಿಲಿಯನೇರ್‌ಗಳು ಕೂಡ ಈ ಪಟ್ಟಿ ಸೇರಿದ್ದು, ಇವರ ಒಟ್ಟು ನಿವ್ವಳ ಮೌಲ್ಯವೂ 1.1 ಟ್ರಿಲಿಯನ್ ಡಾಲರ್ ಆಗಿದೆ.

ಪೋರ್ಬ್ಸ್‌ ಪಟ್ಟಿಯ ಟಾಪ್‌ 20ರಲ್ಲಿ ಯಾರಿದ್ದಾರೆ?

ಪೋರ್ಬ್ಸ್ ಪಟ್ಟಿಯ ಟಾಪ್ 20ರಲ್ಲಿ ಸ್ಥಾನ ಪಡೆದಿರುವ ಕೋಟ್ಯಾಧಿಪತಿಗಳೆಲ್ಲರ ಒಟ್ಟು ಆದಾಯಕ್ಕೆ 700 ಬಿಲಿಯನ್ ಡಾಲರ್‌ ಸೇರ್ಪಡೆಯಾಗಿದೆ. ಅಮೆರಿಕಾವೊಂದರಲ್ಲಿ ಅತೀ ಹೆಚ್ಚು ಅಂದರೆ 813 ಕೋಟ್ಯಾಧಿಪತಿಗಳು ಇದ್ದು, ಅತೀ ಹೆಚ್ಚು ಕೋಟ್ಯಾಧಿಪತಿಗಳನ್ನು ಹೊಂದಿರುವ ದೇಶ ಎನಿಸಿದೆ. ಹಾಗೆಯೇ ಚೀನಾ 473 ಕೋಟ್ಯಾಧಿಪತಿಗಳನ್ನು ಹೊಂದುವ ಮೂಲಕ 2ನೇ ಸ್ಥಾನದಲ್ಲಿದೆ. ಭಾರತ 200 ಕೋಟ್ಯಾಧಿಪತಿಗಳನ್ನು ಹೊಂದಿದೆ. 

ನ್ಯಾಷನಲ್​ ಕ್ರಷ್​ ರಶ್ಮಿಕಾ ಮಂದಣ್ಣಗೆ ಮತ್ತೊಂದು ಗರಿ! ​ಪ್ರತಿಷ್ಠಿತ ಫೋರ್ಬ್ಸ್​ ಪಟ್ಟಿಯಲ್ಲಿ ದಕ್ಕಿದೆ ಸ್ಥಾನ

ಪೋರ್ಬ್ಸ್ ಪಟ್ಟಿಯ ಪ್ರಕಾರ ಅತ್ಯಂತ ಶ್ರೀಮಂತ ಯಾರು?

ಫ್ರೆಂಚ್ ಉದ್ಯಮಿ ಬೆರ್ನಾಡ್‌ ಅರ್ನಾಲ್ಟ್ ಹಾಗೂ ಅವರ ಕುಟುಂಬ ಅತ್ಯಂತ ಶ್ರೀಮಂತ ಎನಿಸಿದ್ದು, 233 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದೆ. ಬೆರ್ನಾಡ್‌ ಅರ್ನಾಲ್ಟ್ ಎಲ್‌ವಿಎಂಹೆಚ್‌ನ ಮುಖ್ಯಸ್ಥರಾಗಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಎಲಾನ್ ಮಸ್ಕ್ ಅವರಿದ್ದು,  ಎಲಾನ್ ಮಸ್ಕ್ ನೆಟ್‌ವರ್ತ್ 195 ಬಿಲಿಯನ್ ಡಾಲರ್, ಹಾಗೆಯೇ ಮೂರನೇ ಸ್ಥಾನದಲ್ಲಿ ಅಮೇಜಾನ್ ಮುಖ್ಯಸ್ಥ ಜೆಫ್ ಬೇಜೋಸ್ ಅವರಿದ್ದು, ಅವರ ನಿವ್ವಳ ಮೌಲ್ಯವೂ ಕೂಡ 195 ಬಿಲಿಯನ್ ಡಾಲರ್ ಆಗಿದೆ. ಅವರ ನಂತರದಲ್ಲಿ ಫೇಸ್‌ಬುಕ್ ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಇದ್ದು, ಇವರ ನಿವ್ವಳ ಮೌಲ್ಯ 177 ಬಿಲಿಯನ್ ಡಾಲರ್ ಆಗಿದೆ. 

ಎಲಾನ್ ಮಸ್ಕ್ ಕೈಜಾರಿದ ವಿಶ್ವದ ನಂ.1 ಶ್ರೀಮಂತನ ಪಟ್ಟ;ಫ್ರೆಂಚ್ ಉದ್ಯಮಿ ಬರ್ನಾರ್ಡ್‌ ಅರ್ನಾಲ್ಟ್‌ಗೆ ಒಲಿದ ಅಗ್ರಸ್ಥಾನ

ಫಾಕ್ಸ್ ನ್ಯೂಸ್ ಸಂಸ್ಥಾಪಕ ರುಪರ್ಟ್ ಮುರ್ಡೊಕ್ ಹಾಗೂ ಅವರ ಕುಟುಂಬದ ಆಸ್ತಿ ಮೌಲ್ಯ 19.5 ಬಿಲಿಯನ್ ಡಾಲರ್, ಹಾಗೆಯೇ ಡಲ್ಲಾಸ್ ಕೌಬಾಯ್ ಜನರಲ್ ಮ್ಯಾನೇಜರ್ ಹಾಗೂ ಮುಖ್ಯಸ್ಥ ಜೆರ್ರಿ ಜಾನ್ ಆಸ್ತಿ ಮೌಲ್ಯ 13.9  ಬಿಲಿಯನ್ ಡಾಲರ್, ಹಾಗೆಯೇ ಅಮೆರಿಕನ್ ರಾಪರ್ ಜೇ-ಜೆಡ್‌ ನಿವ್ವಳ ಮೌಲ್ಯ 2.5 ಬಿಲಿಯನ್ ಡಾಲರ್‌, ಹಾಗೆಯೇ ಅಮೆರಿಕಾ ಮೀಡಿಯಾ ಪರ್ಸನಾಲಿಟಿ ನಟಿ ಕಿಮ್ ಕರ್ದಾಶಿಯನ್ ನಿವ್ವಳ ಮೌಲ್ಯ 1.7 ಆಗಿದೆ. ಹಾಗೆಯೇ ನಟ ಟೈಲರ್ ಸ್ವಿಫ್ಟ್‌ ನಿವ್ವಳ ಮೌಲ್ಯ 1.1 ಬಿಲಿಯನ್ ಡಾಲರ್. 

ಪಟ್ಟಿಯಲ್ಲಿರುವ ಶ್ರೀಮಂತ ಮಹಿಳೆ ಯಾರು?

ಪೋರ್ಬ್ಸ್‌ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಇರುವ ಅತ್ಯಂತ ಶ್ರೀಮಂತ ಮಹಿಳೆ ಎಂಬ ಹೆಗ್ಗಳಿಕೆಗೆ ಲೋರಿಯಲ್ ಸಂಸ್ಥಾಪಕರ ಮೊಮ್ಮಗಳಾದ ಫ್ರಾಂಕೋಯಿಸ್ ಬೆಟೆನ್‌ಕೋರ್ಟ್ ಮೇಯರ್ಸ್ ಪಾತ್ರರಾಗಿದ್ದಾರೆ. ಇವರು 99.5 ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಅವರ ನಂತರದ ಸ್ಥಾನದಲ್ಲಿ ವಾಲ್‌ಮಾರ್ಟ್ ಸಂಸ್ಥಾಪಕ ಸ್ಯಾಮ್ ವಾಲ್ಟನ್‌ ಪುತ್ರಿ, ಆಲಿಸ್ ವಾಲ್ಟನ್ ಇದ್ದು, ಇವರ ನಿವ್ವಳ ಮೌಲ್ಯ, 72.3 ಶತಕೋಟಿ ಡಾಲರ್,  ಹಾಗೆಯೇ  ಜೂಲಿಯಾ ಕೋಚ್ ಮತ್ತು ಅವರ ಮೂರು ಮಕ್ಕಳು 64.3 ಬಿಲಿಯನ್ ನಿವ್ವಳ ಮೌಲ್ಯ ಹೊಂದಿದ್ದಾರೆ. ಇದಾದ ನಂತರ 38.5 ಡಾಲರ್‌ ಮೌಲ್ಯದೊಂದಿದೆಗೆ ಜಾಕ್ವೆಲಿನ್ ಮಾರ್ಸ್ ಇದ್ದಾರೆ ಅವರ ನಂತರದ ಸ್ಥಾನದಲ್ಲಿ ಅಮೇಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮಾಜಿ ಪತ್ನಿ ಮೆಕೆಂಟ್ ಸ್ಕಾಟ್ ಇದ್ದು, ಇವರ ಆಸ್ತಿ ಮೌಲ್ಯ 35.6 ಬಿಲಿಯನ್ ಡಾಲರ್.

Latest Videos
Follow Us:
Download App:
  • android
  • ios