* ಆದಾಯ ತೆರಿಗೆ ಇಲಾಖೆಯ ಹೊಸ ವೆಬ್‌ಸೈಟ್‌ ಗೊಂದಲ* 2ನೇ ದಿನವೂ ತೆರೆಯಲಿಲ್ಲ ಆದಾಯ ತೆರಿಗೆ ವೆಬ್‌* ವೆಬ್‌ಸೈಟ್‌ ಆಧುನೀಕರಿಸಿದ್ದ ಇಸ್ಫೋಸಿಸ್‌ ಮತ್ತು ಅದರ ಮುಖ್ಯಸ್ಥ ನಂದನ್‌ ನಿಲೇಕಣಿ ವಿರುದ್ಧ ನಿರ್ಮಲಾ ಗರಂ

ನವದೆಹಲಿ(ಜೂ.09): ಸೋಮವಾರವಷ್ಟೇ ಹೊಸದಾಗಿ ಬಿಡುಗಡೆಯಾದ ಆದಾಯ ತೆರಿಗೆ ಇಲಾಖೆಯ ಹೊಸ ವೆಬ್‌ಸೈಟ್‌ ಗೊಂದಲ ಮಂಗಳವಾರವೂ ಮುಂದುವರೆದಿದೆ. ಪರಿಣಾಮ ಮಂಗಳವಾರವೂ ಗ್ರಾಹಕರಿಗೆ ವೆಬ್‌ಸೈಟ್‌ನ ದರ್ಶನವಾಗಲಿಲ್ಲ.

ಪರಿಣಾಮ ಸ್ವತಃ ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್‌ ಅವರೇ ಟ್ವೀಟರ್‌ ಮೂಲಕ, ವೆಬ್‌ಸೈಟ್‌ ಆಧುನೀಕರಿಸಿದ್ದ ಇಸ್ಫೋಸಿಸ್‌ ಮತ್ತು ಅದರ ಮುಖ್ಯಸ್ಥ ನಂದನ್‌ ನಿಲೇಕಣಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Scroll to load tweet…

ಹಲವು ಬಳಕೆದಾರರು ಪೋರ್ಟಲ್‌ ಬಗ್ಗೆ ಟ್ವೀಟರ್‌ನಲ್ಲಿ ಸಾಲು ಸಾಲು ದೂರು ದಾಖಲಿಸಿದ ಬಳಿಕ ನಿರ್ಮಲಾ ಸೀತಾರಾಮನ್‌, ಇನ್ಪೋಸಿಸ್‌ ಸಂಸ್ಥೆ ಮತ್ತು ಅಧ್ಯಕ್ಷ ನಂದನ್‌ ನಿಕಲೇಣಿ ಅವರನ್ನು ಟ್ಯಾಗ್‌ ಮಾಡಿ ಟ್ವೀಟ್‌ ಮಾಡಿದ್ದಾರೆ.

Scroll to load tweet…

‘ನನ್ನ ಟ್ವೀಟರ್‌ ಲೈಮ್‌ಲೈನ್‌ನಲ್ಲಿ ವೆಬ್‌ಪೋರ್ಟಲ್‌ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಸೇವೆಯ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಇನ್ಪೋಸಿಸ್‌ ಮತ್ತು ನಂದನ್‌ ನಿಕಲೇಣಿ ತೆರಿಗೆದಾರರನ್ನು ನಿರಾಸೆ ಮಾಡುವುದಿಲ್ಲ ಎಂದು ಭಾವಿಸುತ್ತೇನೆ. ತೆರಿಗೆದಾರರಿಗೆ ಗುಣಮಟ್ಟದ ಸೇವೆ ನೀಡುವುದು ನಮ್ಮ ಆದ್ಯತೆಯಾಗಿರಬೇಕು’ ಎಂದಿದ್ದಾರೆ.