Asianet Suvarna News Asianet Suvarna News

ಗೂಗಲ್ ಮಾಡಿದ ಅವಮಾನ, ಫ್ಲಿಪ್ ಕಾರ್ಟ್ ಉಗಮಕ್ಕೆ ವರಮಾನ: ಬಿನ್ನಿ ಕತೆ ಕೇಳ ಬನ್ನಿ!

ಎರಡು ಬಾರಿ ಬಿನ್ನಿ ಬನ್ಸಲ್ ಅರ್ಜಿ ತಿರಸ್ಕರಿಸಿದ್ದ ಗೂಗಲ್! ಬಿನ್ನಿ ಬನ್ಸಲ್ ಫ್ಲಿಪ್ ಕಾರ್ಟ್ ಸಂಸ್ಥೆಯ ಸಹ ಸಂಸ್ಥಾಪಕ! ಫ್ಲಿಪ್ ಕಾರ್ಟ್ ಉಗಮಕ್ಕೆ ಗೂಗಲ್ ಮಾಡಿದ ಅವಮಾನವೇ ಕಾರಣ! ಸಚಿನ್ ಬನ್ಸಲ್ ಜೊತೆ ಸೇರಿ ದೈತ್ಯ ಇ-ಕಾಮರ್ಸ್ ಸಂಸ್ಥೆ ಕಟ್ಟಿದ ಬಿನ್ನಿ

 

Flipkart happened as Google rejected me: Binny Bansal
Author
Bengaluru, First Published Aug 10, 2018, 1:35 PM IST

ಬೆಂಗಳೂರು(ಆ.10): ಸೋಲು, ಅವಮಾನಕ್ಕೆ ಎದೆಗುಂದಿದರೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಆದರೆ ಅದೇ ಸೋಲು ಮತ್ತು ಅವಮಾನಗಳನ್ನು ಮೆಟ್ಟಿಲಾಗಿ ಬಳಸಿಕೊಂಡರೆ ಯಶಸ್ಸು ಖಂಡಿತ ನಮ್ಮನ್ನು ಹುಡುಕಿಕೊಂಡು ಬರುವುದರಲ್ಲಿ ಅನುಮಾನವಿಲ್ಲ. ಇದಕ್ಕೆ ಭಾರತದ ಇ-ಕಾಮರ್ಸ್ ದೈತ್ಯ ಫ್ಲಿಪ್ ಕಾರ್ಟ್ ಸಹ ಸಂಸ್ಥಾಪಕ ಬಿನ್ನಿ ಬನ್ಸಲ್ ಅವರೇ ಉದಾಹರಣೆ.

ಅರೆ! ಬಿನ್ನಿ ಬನ್ಸಲ್ ಅವರೂ ಸೋಲಿನ ರುಚಿ ಕಂಡಿದ್ದಾರಾ?, ಅವರೂ ಅವಮಾನದ ಕಹಿ ಉಂಡಿದ್ದಾರಾ? ಅಂತಾ ಕೇಳಿದರೆ ಉತ್ತರ ಖಂಡಿತ ಹೌದು ಎಂತಲೇ ನೀಡಬೇಕಾಗುತ್ತದೆ. ಫ್ಲಿಪ್ ಕಾರ್ಟ್ ನಂತಹ ಸಾವಿರಾರು ಕೋಟಿ. ರೂ ಕಂಪನಿಯ ಒಡೆಯರಾಗಿದ್ದ ಬಿನ್ನಿ ಬನ್ಸಲ್ ತಮ್ಮ ಜೀವನದ ಆರಂಭಿಕ ದಿನಗಳಲ್ಲಿ ಅವಮಾನ ಉಂಡವರೇ.

ಇಂದು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಬಿನ್ನಿ ಬನ್ಸಲ್, ಫ್ಲಿಪ್ ಕಾರ್ಟ್ ಎಂಬ ಇ-ಕಾಮರ್ಸ್ ದೈತ್ಯನನ್ನು ಸೃಷ್ಟಿಸಿದ್ದ ಬಿನ್ನಿ ಬನ್ಸಲ್ ಅವರನ್ನು ಗೂಗಲ್ ಎರಡು ಬಾರಿ ರಿಜೆಕ್ಟ್ ಮಾಡಿತ್ತು ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಬನ್ಸಲ್ ಎರಡು ಬಾರಿ ಗೂಗಲ್ ಗೆ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಎರಡೂ ಬಾರಿ ಗೂಗಲ್ ಬನ್ಸಲ್ ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿತ್ತು.

ಐಐಟಿ ದೆಹಲಿಯಿಂದ ಪೊದವಿ ಪಡೆದು ಹೊರಬಂದ ಬನ್ಸಲ್, ೨೦೦೫ರಲ್ಲಿ ಸರ್ನಾಫ್ ಕಾರ್ಪೋರೇಶನ್ ಎಂಬ ಕಂಪನಿಯಲ್ಲಿ ಒಂದು ವರ್ಷಗಳ ಕಾಲ ಕೆಲಸ ಮಾಡಿದ್ದರು. ಈ ವೇಳೆ ಬನ್ಸಲ್ ಎರಡು ಬಾರಿ ಗೂಗಲ್ ಗೆ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಎರಡೂ ಬಾರಿ ಗೂಗಲ್ ಬನ್ಸಲ್ ಅವರ ಅರ್ಜಿಯನ್ನು ತಿರಸ್ಕರಿಸಿತ್ತು.

ಇದಾದ ಬಳಿಕ ಬಿನ್ನಿ ಸಹೋದರ ಸಚಿನ್ ಬನ್ಸಲ್ ಬಿನ್ನಿ ಅವರನ್ನು ೨೦೦೬ ರಲ್ಲಿ ಅಮೆಜಾನ್ ಗೆ ಸೇರುವಂತೆ ಪ್ರೇರೆಪಿಸಿದರು. ಅದರಂತೆ ಬಿನ್ನಿ ಅಮೆಜಾನ್ ನಲ್ಲಿ ಸಿನಿಯರ್ ಸಾಫ್ಟವೇರ್ ಇಂಜಿನಿಯರ್ ಆಗಿ ಕೆಲಸ ಮಾಡತೊಡಗಿದರು. ಈ ಅವಧಿಯಲ್ಲೇ ಬಿನ್ನಿ ಮತ್ತು ಸಚಿನ್ ಇಬ್ಬರೂ ತಮ್ಮದೇ ಆದ ಇ-ಕಾಮರ್ಸ್ ಸಂಸ್ಥೆಯನ್ನು ಸ್ಥಾಪಿಸಲು ಯೋಚಿಸಿ, ಅದರಂತೆ ಫ್ಲಿಪ್ ಕಾರ್ಟ್ ಎಂಬ ದೈತ್ಯ ಸಂಸ್ಥೆಯನ್ನು ನಿರ್ಮಿಸಿದರು.

Follow Us:
Download App:
  • android
  • ios