Kids Fashion: ಹಬ್ಬದ ವೇಳೆ ಮಕ್ಕಳ ಬಟ್ಟೆ ಖರೀದಿ ಹೆಚ್ಚಳ, ಕಿಡ್ಸ್ ಫ್ಯಾಶನ್‌ಗೆ ಫ್ಲಿಪ್‌ಕಾರ್ಟ್ ಪ್ರವೇಶ!
- ಮಕ್ಕಳ ಫ್ಯಾಷನ್ ವಲಯದಲ್ಲಿ ವರ್ಷದಿಂದ ವರ್ಷಕ್ಕೆ 60% ಹೆಚ್ಚಳಕ್ಕೆ ಫ್ಲಿಪ್‌ಕಾರ್ಟ್ ಸಾಕ್ಷಿ
- 2021ರ ಹಬ್ಬದ ಋತುವಿನಲ್ಲಿ ಮಕ್ಕಳ ಫ್ಯಾಷನ್ ಖರೀದಿಯಲ್ಲಿ ಭಾರಿ ಹೆಚ್ಚಳ
- ಬ್ರ್ಯಾಂಡ್‌ನ ಬಟ್ಟೆಗಳ ಬೆಲೆ 349 ರೂನಿಂದ ಆರಂಭ
ಬೆಂಗಳೂರು(ನ.25): ಭಾರತದ ದೇಶೀಯ ಇ-ಕಾಮರ್ಸ್(E-commerce) ಮಾರುಕಟ್ಟೆ ಫ್ಲಿಪ್‌ಕಾರ್ಟ್, 0-14 ವಯೋಮಿತಿಯ ಮಕ್ಕಳ ಬ್ರ್ಯಾಂಡೆಡ್ ಫ್ಯಾಷನ್ ವಲಯಕ್ಕೆ ಎಂಟ್ರಿಕೊಟ್ಟಿದೆ. ಇನ್ನು ಅತೀ ಕಡಿಮೆ ದರದಲ್ಲಿ ಮಕ್ಕಳ ಬ್ರ್ಯಾಂಡೆಂಡ್ ಬಟ್ಟೆಗಳನ್ನು ಫ್ಲಿಪ್‌ಕಾರ್ಟ್(Flipkart) ದೇಶಾದ್ಯಂತ ಇರುವ ಗ್ರಾಹಕರಿಗೆ ಒದಗಿಸಲಿದೆ ಇದಕ್ಕಾಗಿ ಮಕ್ಕಳ ಫ್ಯಾಷನ್ ಬ್ರ್ಯಾಂಡ್(Kids Fashion Brand) ಹಾಪ್‌ಸ್ಕಾಚ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ . ಈ ಮೂಲಕ ಫ್ಲಿಪ್‌ಕಾರ್ಟ್ ದೇಶಾದ್ಯಂತ ಹಾಪ್‌ಸ್ಕಾಚ್ ಬ್ರ್ಯಾಂಡ್‌ನ ಮಕ್ಕಳ ಫ್ಯಾಷನ್‌ನ ವಿಸ್ತೃತ ಶ್ರೇಣಿಯನ್ನು ಗ್ರಾಹಕರಿಗೆ ಲಭ್ಯವಾಗಿಸಲಿದೆ. ತಮ್ಮ ಖರೀದಿಯ ಅವಶ್ಯಕತೆಗಳಿಗಾಗಿ ಅತ್ಯುತ್ತಮ ಆಯ್ಕೆ ಮತ್ತು ಗುಣಮಟ್ಟದ ಉತ್ಪನ್ನಗಳ ಕೊಡುಗೆ ನೀಡುವ ಇ-ಕಾಮರ್ಸ್ ಮೇಲೆ ವಿಶ್ವಾಸ ಇರಿಸಿರುವ ತಾಯಂದಿರಿಗೆ ಇದು ಸಿಹಿ ಸುದ್ದಿಯಾಗಿದೆ.
ಕಳೆದ ವರ್ಷ, ಬ್ರ್ಯಾಂಡೆಡ್ ಮಕ್ಕಳ ಫ್ಯಾಷನ್ ವಲಯದಲ್ಲಿ ವರ್ಷದಿಂದ ವರ್ಷಕ್ಕೆ ಶೇ.60ರಷ್ಟು ಪ್ರಗತಿಗೆ ಫ್ಲಿಪ್‌ಕಾರ್ಟ್ ಸಾಕ್ಷಿಯಾಗಿದೆ. ಈ ಪೈಕಿ ಬಹುತೇಕ ಹೊಸ ಗ್ರಾಹಕರು ಎರಡನೇ ಹಂತದ ನಗರಗಳಲ್ಲಿ ನೆಲೆಸಿದವರಾಗಿದ್ದಾರೆ. ಇಂದು ಫ್ಲಿಪ್‌ಕಾರ್ಟ್‌ನಲ್ಲಿ ಬ್ರ್ಯಾಂಡೆಡ್ ಕಿಡ್ಸ್ ಫ್ಯಾಶನ್‌ಗಾಗಿ ಶಾಪಿಂಗ್ ಮಾಡುವ ಹೆಚ್ಚಿನ ಗ್ರಾಹಕರು 25-40 ವಯೋಮಾನದವರಾಗಿದ್ದಾರೆ ಮತ್ತು ಅವರು ಮಕ್ಕಳು ತೊಡುವ ಬಟ್ಟೆಯ ಗುಣಮಟ್ಟದ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. ಈ ಪಾಲುದಾರಿಕೆಯ ಮೂಲಕ, ಫ್ಲಿಪ್‌ಕಾರ್ಟ್ ತನ್ನ ಬ್ರಾಂಡ್ ಪೋರ್ಟ್‌ಫೋಲಿಯೊ ಹೆಚ್ಚಿಸಿದೆ ಮತ್ತು ದೇಶದಾದ್ಯಂತ 400 ಮಿಲಿಯನ್‌ಗಿಂತಲೂ ಹೆಚ್ಚು ನೋಂದಾಯಿತ ಗ್ರಾಹಕರಿಗೆ(Customers) ಉತ್ತಮ ಗುಣಮಟ್ಟದ ಪ್ರೀಮಿಯಂ ಬ್ರಾಂಡ್ ಉತ್ಪನ್ನಗಳನ್ನು ಲಭ್ಯವಾಗಿಸಲಿದೆ.
Flipkart Health+ ಮೂಲಕ Healthcare ಮಾರುಕಟ್ಟೆಗೂ ಎಂಟ್ರಿ ಕೊಟ್ಟ ಫ್ಲಿಪ್‌ಕಾರ್ಟ್!
ವರ್ಷಗಳಿಂದ ಜನರು ಮಕ್ಕಳ ಫ್ಯಾಷನ್‌ಗಾಗಿ ಉತ್ತಮ ಗುಣಮಟ್ಟ, ಬೆಲೆ ಹಾಗೂ ಶ್ರೇಣಿಗಳನ್ನು ಅರಸುತ್ತಿದ್ದಾರೆ. ಗುಣಮಟ್ಟ ಮತ್ತು ಶೈಲಿಯಲ್ಲಿ ರಾಜಿ ಮಾಡಿಕೊಳ್ಳದೆ ಕೈಗೆಟುಕುವ ಫ್ಯಾಶನ್ ಅರಸಿ ಆನ್‌ಲೈನ್ ಮೊರೆ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಹಾಪ್‌ಸ್ಕಾಚ್‌ನ(Hopscotc) ಬಿಡುಗಡೆಯು ಲಕ್ಷಾಂತರ ಗ್ರಾಹಕರಿಗೆ ಇತ್ತೀಚಿನ ಮಕ್ಕಳ ಫ್ಯಾಷನ್‌ನ ವ್ಯಾಪಕ ಆಯ್ಕೆಯನ್ನು ನೀಡುತ್ತದೆ. ಹಾಪ್‌ಸ್ಕಾಚ್ ಮೂಲಕ ಶಿಶುಗಳು, ಅಂಬೆಗಾಲಿಡುವ ಮಕ್ಕಳು, ಶಾಲಾ ಮಕ್ಕಳಿಗಾಗಿ ಅವರ ಶೈಲಿ ಮತ್ತು ಕಾರ್ಯಚಟುವಟಿಕೆಗಳಿಗೆ ಫ್ಯಾಶನ್ ಮತ್ತು ಆನ್-ಟ್ರೆಂಡ್ ಹೆಡ್-ಟು-ಟೋ ಸ್ಟೈಲ್ ಸೃಷ್ಟಿಸಲು ಇದು ಪರಿಣತಿ ಹೊಂದಿದೆ. ಈ ಬ್ರ್ಯಾಂಡ್‌ನ ಬಟ್ಟೆಗಳ ಬೆಲೆ 349 ರೂ.ಗಳಿಂದ ಆರಂಭವಾಗುತ್ತದೆ.
ಮಕ್ಕಳ ಫ್ಯಾಷನ್‌ನ ಶಾಪಿಂಗ್ ವಿಷಯಕ್ಕೆ ಬಂದಾಗ, ಪೋಷಕರು ಗುಣಮಟ್ಟದಲ್ಲಿ ರಾಜಿಯಾಗ ಬಯಸುವುದಿಲ್ಲ. ಮತ್ತು ಅವರು ಕೆಲ ಬ್ರ್ಯಾಂಡ್‌ಗಳ ಮೇಲೆ ವಿಶ್ವಾಸವಿರಿಸುತ್ತಾರೆ ಎಂಬುದನ್ನು ನಾವು ಗಮನಿಸಿದ್ದೇವೆ. ಇದು ಕೇವಲ ಮೆಟ್ರೋಪಾಲಿಟನ್ ನಗರಗಳಲ್ಲಷ್ಟೇ ಅಲ್ಲದೆ, ಎರಡನೇ ಹಂತದ ನಗರಗಳಲ್ಲಿಯೂ ಕಂಡುಬಂದಿದೆ. ಫ್ಲಿಪ್‌ಕಾರ್ಟ್ ಮಕ್ಕಳ ಫ್ಯಾಷನ್ ವಲಯದಲ್ಲಿ ಕಳೆದೆರಡು ವರ್ಷಗಳಲ್ಲಿ 3 ಪಟ್ಟು ಪ್ರಗತಿ ಕಂಡಿದ್ದು,ಇದರಲ್ಲಿ ಬಹುತೇಕ ಪ್ರಮಾಣ ಹೊಸ ಗ್ರಾಹಕರದ್ದಾಗಿದೆ. ಹಾಪ್‌ಸ್ಕಾಚ್ ಜೊತೆಗಿನ ಪಾಲುದಾರಿಕೆ ಘೋಷಿಸುವುದರೊಂದಿಗೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಫ್ಯಾಷನ್ ಉತ್ಪನ್ನಗಳನ್ನು ನೀಡುವುದು ನಮ್ಮ ಗುರಿ ಎಂದು ಫ್ಲಿಪ್‌ಕಾರ್ಟ್ ಫ್ಯಾಷನ್‌ನ ಉಪಾಧ್ಯಕ್ಷ ನಿಷಿತ್ ಗಾರ್ಗ್ ಹೇಳಿದರು.
ಪ್ರಧಾನಿ ಮೋದಿ ಆತ್ಮನಿರ್ಭರ್ ಭಾರತ್ ಪರಿಕಲ್ಪನೆಗೆ ಕೈಜೋಡಿಸಿದ ಫ್ಲಿಪ್‌ಕಾರ್ಟ್!
ಇತ್ತೀಚಿನ ಟ್ರೆಂಡ್‌ಗಳ ಕುರಿತು ಹೆಚ್ಚಿರುವ ಪ್ರಚಾರದಿಂದ, ಭಾರತದಲ್ಲಿ ತಾಯಂದಿರು ತಮ್ಮ ಮಕ್ಕಳಿಗೆ ನೀಡುವ ಹಣಕ್ಕೆ ಉತ್ತಮ ಮೌಲ್ಯ ನೀಡುವ ಬಟ್ಟೆಗಳ ಖರೀದಿ ಬಯಸುತ್ತಿದ್ದಾರೆ. ಅದರಲ್ಲೂ ಋತುವಿಗೆ ತಕ್ಕ ಬಟ್ಟೆಗಳಿಗೆ ಭಾರಿ ಬೇಡಿಕೆಯಿದೆ, ವಿಶೇಷವಾಗಿ 2 ಮತ್ತು 3ನೇ ಹಂತದ ನಗರಗಳಲ್ಲಿ. ಆದರೆ, ಇಲ್ಲಿಯವರೆಗೆ ಅವರಿಗೆ ಲಭ್ಯತೆ ಕಡಿಮೆಯಿತ್ತು. ಹಾಪ್‌ಸ್ಕಾಚ್ ಈ ಅಂತರವನ್ನು ಕಡಿಮೆ ಮಾಡಲಿದ್ದು, ಫ್ಲಿಪ್‌ಕಾರ್ಟ್‌ನೊಂದಿಗಿನ ನಮ್ಮ ಪಾಲುದಾರಿಕೆ ದೇಶಾದ್ಯಂತದ ಗ್ರಾಹಕರನ್ನು ತಲುಪಲು ನೆರವಾಗಲಿದೆ ಎಂಬ ವಿಶ್ವಾಸವಿದೆ ಎಂದು ಹಾಪ್‌ಸ್ಕಾಚ್‌ನ ಸಂಸ್ಥಾಪಕ ಮತ್ತು ಸಿಇಒ ರಾಹುಲ್ ಆನಂದ್ ಹೇಳಿದರು.