ಜಿಂದಾಲ್‌ನಿಂದ ಬೆಂಗಳೂರು, ಹೈದರಾಬಾದ್‌ಗೆ ವಿಮಾನ ಸೇವೆ ಆರಂಭ!
ಜಿಲ್ಲೆಯ ಸಂಡೂರು ತೋರಣಗಲ್ಲಿನಲ್ಲಿರುವ ಜೆಎಸ್‌ಡಬ್ಲ್ಯು ಸಮೂಹದ ‘ಜಿಂದಾಲ್ ವಿಜಯನಗರ ಏರ್‌ಪೋರ್ಚ್’ನಿಂದ ಬೆಂಗಳೂರು ಹಾಗೂ ಹೈದರಾಬಾದ್‌ಗೆ ವಿಮಾನಯಾನ ಸೇವೆ ಭಾನುವಾರ ಶುರುವಾಯಿತು. ವಿಮಾನಯಾನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ
ಬಳ್ಳಾರಿ (ಅ.31) : ಜಿಲ್ಲೆಯ ಸಂಡೂರು ತೋರಣಗಲ್ಲಿನಲ್ಲಿರುವ ಜೆಎಸ್‌ಡಬ್ಲ್ಯು ಸಮೂಹದ ‘ಜಿಂದಾಲ್ ವಿಜಯನಗರ ಏರ್‌ಪೋರ್ಚ್’ನಿಂದ ಬೆಂಗಳೂರು ಹಾಗೂ ಹೈದರಾಬಾದ್‌ಗೆ ವಿಮಾನಯಾನ ಸೇವೆ ಭಾನುವಾರ ಶುರುವಾಯಿತು. ವಿಮಾನಯಾನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಹಾಗೂ ಸಂಡೂರು ಶಾಸಕ ಈ. ತುಕಾರಾಂ ಅವರು, ಅಲಯನ್ಸ್ ಏರ್ ಸಂಸ್ಥೆಯ ವಿಮಾನಗಳು ಜಿಂದಾಲ್‌ನಿಂದ ವಿಮಾನಯಾನ ಸೇವೆ ಒದಗಿಸುತ್ತಿದೆ. ಅದರಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಗುಜರಾತ್‌ನಲ್ಲಿ ಮಿಲಿಟರಿ ವಿಮಾನ ಘಟಕಕ್ಕೆ PM Narendra Modi ಅಡಿಗಲ್ಲು
ಪ್ರಧಾನಮಂತ್ರಿಯವರ ಉಡಾನ್ ಯೋಜನೆಯು ಭಾರತದ ಜನರಿಗೆ ಅನುಕೂಲಕರ ಪ್ರಯಾಣದ ಆಯ್ಕೆಯಾಗಿದೆ ಎಂದು ಸಾಬೀತುಪಡಿಸಿದೆ. ಈ ಮಹತ್ವಾಕಾಂಕ್ಷೆಯ ಉಡಾನ್ ಯೋಜನೆಯ ಹಿಂದಿನ ಉದ್ದೇಶಗಳನ್ನು ಅರಿತುಕೊಂಡ ಆನಂತರ ಜೆ.ಎಸ್.ಡಬ್ಲ್ಯೂ. ಸಮೂಹದ ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣವು ನಾಗರಿಕ ವಿಮಾನಯಾನ ಸಚಿವಾಲಯದ ಉಡಾನ್ ಉಪಕ್ರಮದ ಪ್ರಾರಂಭದ ಸಮಯದಲ್ಲಿ ವಿಮಾನ ಕಾರ್ಯಾಚರಣೆಗಳಿಗೆ ಅವಕಾಶ ಕಲ್ಪಿಸಿದ ದೇಶದ ಮೊದಲ ಖಾಸಗಿ ವಿಮಾನ ನಿಲ್ದಾಣವಾಗಿದೆ ಮತ್ತು ಕಳೆದ ಮೂರು ವರ್ಷಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಈ ವಿಮಾನ ನಿಲ್ದಾಣವೂ ನಿಭಾಯಿಸಿದೆ ಎಂದು ಹೇಳಿದರು.
ಸಂಡೂರು ಶಾಸಕ ಈ. ತುಕಾರಾಂ ಮಾತನಾಡಿ, ಜೆಎಸ್‌ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಹಾಗೂ ಸುತ್ತಲಿನ ಪ್ರದೇಶದಲ್ಲಿ ಹಲವಾರು ಉಕ್ಕು ಮತ್ತು ಗಣಿಗಾರಿಕೆ ಕಂಪನಿಗಳಿರುವುದರಿಂದ ಬಳ್ಳಾರಿ ಜಿಲ್ಲೆಯು ಪ್ರಮುಖ ವ್ಯಾಪಾರೋದ್ಯಮ ಮತ್ತು ಪ್ರವಾಸಿ ತಾಣವಾಗಿದೆ. ಅದಲ್ಲದೆ ಈ ಪ್ರದೇಶವು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ವಿಜಯನಗರ ಸಾಮ್ರಾಜ್ಯದ ಕೇಂದ್ರಬಿಂದುವಾದ ಹಂಪಿಯನ್ನು ಸಹ ಹೊಂದಿದೆ. ಬಳ್ಳಾರಿ ಜಿಲ್ಲೆಯ ಸುತ್ತಮುತ್ತಲಿನಲ್ಲಿ ದರೋಜಿ ಕರಡಿಧಾಮ ಸೇರಿದಂತೆ ಅನೇಕ ಪ್ರವಾಸಿ ತಾಣಗಳಿವೆ. ಹೈದರಾಬಾದ್‌ನಿಂದ ಹಂಪಿ, ಸಂಡೂರು, ಬಳ್ಳಾರಿ ಮತ್ತು ಇತರ ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಈ ಹೊಸ ವಾಯು ಮಾರ್ಗದಿಂದ ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಮತ್ತು ಉದ್ಯಮಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಜೆಎಸ್‌ಡಬ್ಲ್ಯೂ ತನ್ನ ಖಾಸಗಿ ವಿಮಾನ ನಿಲ್ದಾಣವನ್ನು ಉಡಾನ್ ಯೋಜನೆಯ ಸಹಪಾಲುದಾರನಾಗಿಸಿಕೊಂಡಿರುವುದು ಶ್ಲಾಘನೀಯ. ಹೈದರಾಬಾದ್ ಮತ್ತು ಬೆಂಗಳೂರಿಗೆ ಪ್ರಯಾಣಿಕರ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ವಿಮಾನ ಸೇವೆ ಶುರುಗೊಂಡಿದ್ದರಿಂದ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡಿದಂತಾಗುತ್ತದೆ ಎಂದು ಶಾಸಕ ತುಕಾರಾಂ ಹೇಳಿದರು.
ಜೆಎಸ್‌ಡಬ್ಲ್ಯೂ ಸ್ಟೀಲ್‌ನ ಅಧ್ಯಕ್ಷ ಪಿ.ಕೆ. ಮುರುಗನ್, ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಕಾರ್ಯಾಚರಣೆಗಳಿಗೆ ಜೆಎಸ್‌ಡಬ್ಲ್ಯೂ ತನ್ನ ನಿಯಮಿತ ಬೆಂಬಲವನ್ನು ಸರ್ಕಾರಕ್ಕೆ ನೀಡಲಿದೆ. ಹೈದರಾಬಾದ್ ಹಾಗೂ ಬೆಂಗಳೂರು ನಗರಗಳು ಈ ಪ್ರದೇಶದ ಜನರಿಗೆ ಪ್ರಮುಖ ಕೇಂದ್ರಗಳಾಗಿವೆ. ಈ ವಿಮಾನಯಾನವು ಕಲ್ಯಾಣ-ಕರ್ನಾಟಕ ಮತ್ತು ಕಿತ್ತೂರು-ಕರ್ನಾಟಕ ಪ್ರದೇಶದ ಜನರ ಜೀವನವನ್ನು ಸುಗಮಗೊಳಿಸುವುದಲ್ಲದೆ, ರಾಜ್ಯದ ರಾಜಧಾನಿಗಳಿಗೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ ಎಂದರಲ್ಲದೆ, ಅಲಯನ್ಸ್ ಏರ್, ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಜಿಂದಾಲ್‌ನ ವಿದ್ಯಾನಗರದಿಂದ ಹೈದರಾಬಾದ್ ಮತ್ತು ಬೆಂಗಳೂರಿಗೆ ಸಂಪರ್ಕಿಸುವ ಏಕೈಕ ವಿಮಾನಯಾನ ಸಂಸ್ಥೆಯಾಗಿದೆ ಮತ್ತು ಭಾರತ ಸರ್ಕಾರದ ಪ್ರಮುಖ ಯೋಜನೆಯಾದ ಉಡಾನ್‌ನಲ್ಲಿ ಉತ್ಸುಕವಾಗಿ ಭಾಗವಹಿಸಿದೆ ಎಂದು ತಿಳಿಸಿದರು.
ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಉಷಾ ಪದಿ, ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು, ಅಲಯನ್ಸ್ ಏರ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಿಲ್ದಾಣ ರನ್‌ವೇ, ನವೀಕರಣಕ್ಕೆ .48 ಕೋಟಿ ಹೂಡಿಕೆ
ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣವು ಅತ್ಯಾಧುನಿಕವಾಗಿದೆ. ಲಭ್ಯವಿರುವ ಸೌಲಭ್ಯವನ್ನು ಇನ್ನಷ್ಟುಬಲಪಡಿಸಲು ಜೆಎಸ್‌ಡಬ್ಲ್ಯೂ ಸಮೂಹವೂ ಕಳೆದ ಮೂರು ವಷಗಳಲ್ಲಿ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಮತ್ತು ನವೀಕರಣಕ್ಕಾಗಿ .48 ಕೋಟಿ ಹೂಡಿಕೆ ಮಾಡಿದೆ. ಇದರ ಜತೆಗೆ ಟರ್ಮಿನಲ್ ಸೌಲಭ್ಯಗಳು ಮತ್ತು ಯಾತ್ರಿಗಳ ಸುರಕ್ಷತೆಯನ್ನು ಸುಧಾರಿಸಲು .12 ಕೋಟಿ ಹೂಡಿಕೆ ಮಾಡಲಾಗುತ್ತಿದೆ ಹಾಗೂ ಮುಂದಿನ 6-8 ತಿಂಗಳಲ್ಲಿ ಇದು ಪೂರ್ಣಗೊಳ್ಳಲಿದೆ ಎಂದು ಜೆಎಸ್‌ಡಬ್ಲ್ಯೂ ಸ್ಟೀಲ್‌ನ ಅಧ್ಯಕ್ಷ ಪಿ.ಕೆ. ಮುರುಗನ್ ತಿಳಿಸಿದರು.
ಒಂದೂವರೆ ವರ್ಷದ ಬಳಿಕ ಆಗಸಯಾನ:
ಈ ಹಿಂದೆ ಟ್ರೂಜೆಟ್ ಸಂಸ್ಥೆ 72 ಆಸನದ ಜಿಂದಾಲ್‌ನಿಂದ ಬೆಂಗಳೂರು ಹಾಗೂ ಹೈದರಾಬಾದ್‌ಗೆ ವಿಮಾನಯಾನ ಸೇವೆ ನೀಡುತ್ತಿತ್ತು. ಆದರೆ, ಸಂಸ್ಥೆಯ ಒಪ್ಪಂದದ ಕೆಲವು ತಾಂತ್ರಿಕ ಕಾರಣಗಳಿಂದ ಕಳೆದ ಒಂದೂವರೆ ವರ್ಷಗಳಿಂದ ವಿಮಾನಯಾನ ಸ್ಥಗಿತಗೊಂಡಿತ್ತು. ಇದರಿಂದ ಬೆಂಗಳೂರು ಹಾಗೂ ಹೈದರಾಬಾದ್‌ಗೆ ತೆರಳುವ ಉದ್ಯಮಿಗಳು, ವ್ಯಾಪಾರಿಗಳು ಹಾಗೂ ಪ್ರವಾಸಿಗರಿಗೆ ತೀವ್ರ ತೊಂದರೆಯಾಗಿತ್ತು. ಇದೀಗ ಮತ್ತೆ ವಿಮಾನಯಾನ ಶುರುಗೊಂಡಿರುವುದು ಜಿಲ್ಲೆಯ ಜನರಲ್ಲಿ ಸಂತಸ ತಂದಿದೆ.