ಫುಡ್ ಸ್ಟಾಲ್ ಶುರು ಮಾಡಿ ಪ್ರಸಿದ್ಧಿಯಾದ ಮಹಿಳೆಯರಿವರು!

ಭಾರತದಲ್ಲಿ ಆಹಾರ ಪ್ರಿಯರ ಸಂಖ್ಯೆ ಬಹಳಷ್ಟಿದೆ. ನಿಮ್ಮ ಅಡುಗೆ ರುಚಿಯಾಗಿದ್ರೆ ತಾನಾಗಿಯೇ ಗ್ರಾಹಕರು ನಿಮ್ಮ ಬಳಿ ಬರ್ತಾರೆ. ಮಹಿಳೆರಿಗೆ ಆಹಾರದ ಬ್ಯುಸಿನೆಸ್ ಬೆಸ್ಟ್. ಫುಡ್ ಸ್ಟಾಲ್ ಶುರು ಮಾಡುವ ಮೂಲಕ ನೀವು ಆದಾಯ ಗಳಿಕೆ ಶುರು ಮಾಡಬಹುದು.
 

Famous Food Stalls Run By Women

ನೀವು ಮಾಡುವ ಕೆಲಸವನ್ನು ಪ್ರೀತಿಸುವ ಜೊತೆಗೆ ಗುರಿ ಸಾಧಿಸಲು ಸಾಕಷ್ಟು ಪರಿಶ್ರಮ ಅಗತ್ಯವಾಗಿರುತ್ತದೆ. ಆರಂಭದಲ್ಲಿಯೇ ಯಶಸ್ಸು ಸಿಗಬೇಕೆಂದ್ರೆ ಅದು ಅಸಾಧ್ಯವಾದ ಮಾತು. ಬಿದ್ದರೂ ಎದ್ದು ನಿಂತು ಗುರಿ ಸಾಧಿಸುವ ಪಣತೊಟ್ಟರೆ ಯಾವುದೇ ವ್ಯಕ್ತಿ ಕೂಡ ಸಾಧಿಸಿ ತೋರಿಸಬಲ್ಲ. ಯಾವುದೇ ಸಾಧನೆಗೆ ವ್ಯಕ್ತಿ, ಜಾತ, ಆತನ ಬಣ್ಣ ಅಥವಾ ಲಿಂಗ ಮುಖ್ಯವಾಗುವುದಿಲ್ಲ.  

ಯಾವುದೇ ಕೆಲಸ (Work) ಪ್ರಾರಂಭಿಸಿದ್ರೂ ಜನರು ಮಾತನಾಡ್ತಾರೆ. ಈ ಕೆಲಸ ಕೆಳ ಮಟ್ಟದ್ದು, ಆ ಕೆಲಸ ಮೇಲ್ಮಟ್ಟದ್ದು ಎಂದು ವಿಂಗಡನೆ ಮಾಡ್ತಾರೆ. ಸಾಧಿಸಬೇಕು ಎಂಬ ಗುರಿ ಹೊಂದಿರುವ ವ್ಯಕ್ತಿ ಜನರ ಮಾತಿಗೆ ಕಿವಿಗೊಡಬಾರದು. ಬೇರೆಯವರ ಭಾವನೆಗಳಿಗೆ ಬೆಲೆ ನೀಡ್ತಾ ನಿಂತರೆ ನಮ್ಮ ಸಾಧನೆ ಶೂನ್ಯವಾಗುತ್ತದೆ. ಯಾರಿಗೂ ಹೆದರದೆ ಯಶಸ್ವಿ ಉದ್ಯಮಿ ಎನ್ನಿಸಿಕೊಂಡ, ಸಾಧಿಸಿ ತೋರಿಸಿದ ಅನೇಕ ಮಹಿಳೆಯರು ಭಾರತ (India) ದಲ್ಲಿದ್ದಾರೆ.

ಭಾರತದ ಮಹಿಳೆಯರಿಗೆ ಕೆಲ ಉದ್ಯೋಗಗಳು ಸೂಕ್ತವೆಂದು ವಿಂಗಡನೆ ಮಾಡಲಾಗಿದೆ. ಅದ್ರಲ್ಲಿ ಅಂಗಡಿ ವ್ಯವಹಾರ ಕೂಡ ಒಂದು. ಇತ್ತೀಚಿನ ದಿನಗಳಲ್ಲಿ ಬಹುತೇಕ ಅಂಗಡಿಯಲ್ಲಿ ನೀವು ಮಹಿಳೆಯರನ್ನು ನೋಡಬಹುದು. ಕಿರಾಣಿ ಅಂಗಡಿಯಿಂದ ಹಿಡಿದು ಚಪ್ಪಲಿ ಅಂಗಡಿಯವರೆಗೆ ಎಲ್ಲ ಕಡೆ ಮಹಿಳೆಯರು ವ್ಯಾಪಾರ (Business) ನಡೆಸ್ತಾರೆ. ಆದ್ರೆ ಕೆಲ ವರ್ಷದ ಹಿಂದೆ ಹೀಗಿರಲಿಲ್ಲ. ಮಹಿಳೆ ಮನೆಯಿಂದ ಹೊರಗೆ ಬೀಳ್ತಿದ್ದಾಳೆ ಅಂದ್ರೆ ಮನೆಯಿಂದಲೇ ವಿರೋಧಗಳು ಕೇಳಿ ಬರ್ತಿದ್ದವು. ಈ ಎಲ್ಲ ವಿರೋಧವನ್ನು ಮೆಟ್ಟಿ ನಿಂತು ಕೆಲ ಮಹಿಳೆಯರು ಫುಡ್ ಸ್ಟಾಲ್ (Food Stall) ಶುರು ಮಾಡಿ ಹೆಸರು ಮಾಡಿದ್ದಾರೆ.  ಅವರು ಭಾರತದ ಉಳಿದ ಮಹಿಳೆಯರಿಗೆ ಸ್ಫೂರ್ತಿ. 

ವಯಸ್ಸಾಯ್ತು, ಇನ್ನೇನೂ ಮಾಡಲಾಗೋಲ್ಲ ಅಂತ ಯೋಚಿಸ್ಬೇಡಿ, ಇಲ್ಲಿವೆ ಐಡಿಯಾಸ್!

ಭಾರತದ ಯಾವುದೇ ಪ್ರದೇಶಕ್ಕೆ ಹೋದ್ರೂ ನೀವು ಫುಡ್ ಸ್ಟಾಲ್ ನೋಡ್ಬಹುದು. ಅದನ್ನು ಮಹಿಳೆಯರು ನಡೆಸೋದನ್ನು ಕೂಡ ನೀವು ನೋಡಬಹುದು. ಸಾಮಾನ್ಯವಾಗಿ ಹುಡುಗಿಯರಿಗೆ ಪಾನಿಪುರಿ ಅಂದ್ರೆ ಪಂಚಪ್ರಾಣ. ನೀವೂ ವಾರಕ್ಕೊಮ್ಮೆಯಾದ್ರೂ ಪಾನಿಪುರಿ (Panipuri) ತಿನ್ನುತ್ತಿದ್ದರೆ ಬರೀ ಪಾನಿಪುರಿ ತಿಂದು ಹೊಟ್ಟೆ ತುಂಬಿಸಿಕೊಳ್ಳಬೇಡಿ. ಅದನ್ನು ಒಂದು ಉದ್ಯೋಗವಾಗಿ ಆಯ್ಕೆ ಮಾಡಿಕೊಳ್ಳುವ ಬಗ್ಗೆ ಆಲೋಚನೆ ಮಾಡಿ..
ಮೊಹಾಲಿಯ ಪೂನಂ, ಪಾನಿಪುರಿ ಅಂಗಡಿ ಶುರು ಮಾಡಿ ಯಶಸ್ವಿಯಾಗಿದ್ದಾಳೆ. ರುಚಿ ರುಚಿ ಪಾನಿಪುರಿ ಮಾಡುವ ಹುಡುಗಿಯರಿಗೆ ನೀವೂ ವ್ಯಾಪಾರ ಶುರು ಮಾಡ್ಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾಳೆ. ಪೂನಂ ಮೊದಲು ಡೆಂಟಲ್ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಆದ್ರೆ ಮುಂದೆ ಓದುವ ಆಸಕ್ತಿ ಹೊಂದಿದ್ದ ಪೂನಂ, ಕೆಲಸ ಬಿಟ್ಟು, ಪಾನಿಪುರಿ ಸ್ಟಾಲ್ ಜೊತೆ ಓದು ಮುಂದುವರೆಸಿದ್ದಾಳೆ. ಈ ಸ್ಟಾಲ್ ನಿಂದ ಲಾಭ ಮಾಡ್ತಿದ್ದಾಳೆ.

Women Career: ಹಳ್ಳಿಯಲ್ಲಿರೋ ಮಹಿಳೆಯರಿಗೂ ಇದೆ ಹಣ ಸಂಪಾದಿಸುವ ಅವಕಾಶ

ದಕ್ಷಿಣ ಭಾರತದಲ್ಲೂ ಇತ್ತೀಚಿನ ದಿನಗಳಲ್ಲಿ ಮೊಮೊಸ್ ಪ್ರಸಿದ್ಧಿ ಪಡೆಯುತ್ತಿದೆ. ನಿಮಗೂ ಮೊಮೊಸ್ ಮಾಡೋಕೆ ಬರುತ್ತೆ ಅಂದ್ರೆ, ವ್ಯಾಪಾರ ಶುರು ಮಾಡುವ ಆಲೋಚನೆಯಲ್ಲಿದ್ದರೆ ನಿಮ್ಮ ಪ್ರದೇಶದಲ್ಲಿ ನೀವು ಮೊಮೊಸ್ ಸ್ಟಾಲ್ ಶುರು ಮಾಡಬಹುದು. ನಿಮಗೆ ಡೋಲ್ಮಾ ಆಂಟಿ ಸ್ಪೂರ್ತಿಯಾಗ್ತಾರೆ. ಅನೇಕ ವರ್ಷಗಳಿಂದ ಡೋಲ್ಮಾ ಆಂಟಿ, ಲಾಜ್ಪತ್ ನಗರದಲ್ಲಿ ಮೊಮೊಸ್ ಸ್ಟಾಲ್ ನಡೆಸಿಕೊಂಡು ಬರ್ತಿದ್ದಾರೆ. ಈಗ ಅದು ಎಷ್ಟು ಪ್ರಸಿದ್ಧಿಯಾಗಿದೆ ಅಂದ್ರೆ ಅನೇಕ ಕಡೆ ನಾವು ಡೋಲ್ಮಾ ಹೆಸರಿನ ಮೊಮೊಸ್ ಶಾಪ್ ನೋಡ್ಬಹುದು. ರುಚಿಯಾಗಿ ಅಡುಗೆ ಮಾಡಲು ಬರುತ್ತೆ ಎನ್ನುವ ಮಹಿಳೆಯರು ಆರಾಮವಾಗಿ ಈ ಫುಡ್ ಸ್ಟಾಲ್ ನಡೆಸಬಹುದು. ಇಡೀ ದಿನ ನೀವು ಕೆಲಸ ಮಾಡಬೇಕಾಗಿಲ್ಲ. ಚಾಟ್ಸ್ ಸ್ಟಾಲ್ ಆದ್ರೆ ಸಂಜೆ ಸ್ಟಾಲ್ ತೆರೆದ್ರೆ ಸಾಕಾಗುತ್ತದೆ. ನೀವು ಯಾವ ಅಡುಗೆಯನ್ನು ಹೆಚ್ಚು ಟೇಸ್ಟಿಯಾಗಿ ಮಾಡ್ತಿದ್ದೀರಿ ಅದನ್ನೇ ಆಯ್ಕೆ ಮಾಡಿಕೊಂಡು ಚಿಕ್ಕದಾಗಿ ವ್ಯಾಪಾರ ಶುರು ಮಾಡಿ. ಬೇರೆಯವರಿಗೆ ಮಾದರಿಯಾಗಿ. 
 

Latest Videos
Follow Us:
Download App:
  • android
  • ios