Asianet Suvarna News Asianet Suvarna News

ಹೂಡಿಕೆಗೆ ಸೂಕ್ತ ಕಿಸಾನ್ ವಿಕಾಸ್ ಪತ್ರ!

ಉಳಿತಾಯ ಯೋಜನೆಗೆ ಕಿಸಾನ್ ವಿಕಾಸ್ ಪತ್ರ 

ಹೂಡಿಕೆಗೆ ಹೇಳಿ ಮಾಡಿಸಿದ ಯೋಜನೆ

ಎಲ್ಲಾ ಅಂಚೆ ಕಚೇರಿಗಳಲ್ಲಿ ಸಿಗುತ್ತೆ ಪತ್ರ

ಎಲ್ಲರೂ ಹೂಡಿಕೆ ಮಾಡಲು ಪ್ರಾಶಸ್ತ್ಯ

Explore Kisan Vikas Patra, for long-term risk free financial plan
Author
Bengaluru, First Published Jul 31, 2018, 5:25 PM IST

ಬೆಂಗಳೂರು(ಜು.31): ಭಾರತೀಯ ಅಂಚೆ ಇಲಾಖೆ ಜನರಿಗೆ ವಿವಿಧ ಉಳಿತಾಯ ಯೋಜನೆಗಳನ್ನು ನೀಡುತ್ತಿದ್ದು ಕಿಸಾನ್ ವಿಕಾಸ್ ಪತ್ರ ಅವುಗಳಲ್ಲಿ ಪ್ರಮುಖವಾದುದು.

ಕಿಸಾನ್ ವಿಕಾಸ್ ಪತ್ರ ಯೋಜನೆಯಡಿ ಶೇಕಡಾ 7.3ರಷ್ಟು ವಾರ್ಷಿಕ ಬಡ್ಡಿ ನೀಡಲಾಗುತ್ತದೆ. 9 ವರ್ಷ 10 ತಿಂಗಳು ಕಳೆದ ಮೇಲೆ ಹೂಡಿಕೆ ದ್ವಿಗುಣವಾಗುತ್ತದೆ. ದೀರ್ಘಕಾಲದಲ್ಲಿ ಸುರಕ್ಷತೆಯ ಹೂಡಿಕೆ ದೃಷ್ಟಿಯಿಂದ ಕಿಸಾನ್ ವಿಕಾಸ್ ಪತ್ರ ಉತ್ತಮ ಹೂಡಿಕೆ ಆಯ್ಕೆಯಾಗಿದೆ.

ಭಾರತದಾದ್ಯಂತ ಇರುವ ಎಲ್ಲಾ ಅಂಚೆ ಕಚೇರಿಗಳಲ್ಲಿ ಕಿಸಾನ್ ವಿಕಾಸ್ ಪತ್ರ ಸೌಲಭ್ಯವಿದೆ. ಕನಿಷ್ಠ ಸಾವಿರ ರೂಪಾಯಿ ಠೇವಣಿಯಿಡಬೇಕು. ಗರಿಷ್ಠ ಎಷ್ಟು ಹಣ ಬೇಕಾದರೂ ಇಡಬಹುದು. ಆದರೆ ಇದು ಕೇವಲ ರೈತ ಸಮುದಾಯದವರಿಗಾಗಿ ಮಾತ್ರ ಎಂಬ ತಪ್ಪು ತಿಳುವಳಿಕೆ ಜನರಲ್ಲಿದೆ. ಅಸಲಿಗೆ ಇದರಲ್ಲಿ ಸಮಾಜದ ಎಲ್ಲಾ ವರ್ಗಗಳ ಜನರೂ ಹೂಡಿಕೆ ಮಾಡಬಹುದು.  

18 ವರ್ಷ ಮೇಲ್ಪಟ್ಟ ಯಾವುದೇ ಭಾರತೀಯ ಪ್ರಜೆ ಕಿಸಾನ್ ವಿಕಾಸ್ ಪ್ರಮಾಣ ಪತ್ರ ಪಡೆಯಬಹುದು. ಅಲ್ಲದೇ 18 ವರ್ಷಕ್ಕಿಂತ ಕೆಳಗಿನವರ ಪರವಾಗಿಯೂ ಪ್ರಮಾಣ ಪತ್ರ ಮಾಡಿಸಿಕೊಳ್ಳಬಹುದು ಅಥವಾ ಇಬ್ಬರು ವಯಸ್ಕರು ಜಂಟಿಯಾಗಿ ಮಾಡಿಸಬಹುದು. ಹೂಡಿಕೆ ಮಾಡಿದ ಮೊತ್ತ ಮೆಚ್ಯೂರಿಟಿಗೆ ಬರಲು 118 ತಿಂಗಳು ಬೇಕಾಗಿದ್ದು ಅಗತ್ಯಬಿದ್ದರೆ ಎರಡೂವರೆ ವರ್ಷಗಳಲ್ಲಿ ನಗದು ಪಡೆಯಬಹುದು.

ಅಂಚೆ ಕಚೇರಿಯ ಪ್ರಮುಖ ಹೂಡಿಕೆಗಳಲ್ಲಿ ಕಿಸಾನ್ ವಿಕಾಸ್ ಪತ್ರ ಕೂಡ ಒಂದು. ಅಂಚೆ ಕಚೇರಿಯ ಬೇರೆ ಉಳಿತಾಯ ಯೋಜನೆಗಳಿಗಿಂತ ಇದರಲ್ಲಿ ಬಡ್ಡಿಮೊತ್ತ ಕಡಿಮೆಯಾದರೂ ಕೂಡ ದೀರ್ಘಾವಧಿಯಲ್ಲಿ ಹಣ ಹೂಡಿಕೆ ಮಾಡಲು ಯೋಚಿಸುತ್ತಿರುವವರಿಗೆ ಇದು ಸುರಕ್ಷಿತವಾದ ಆಯ್ಕೆಯಾಗಿದೆ.

ಕಿಸಾನ್ ವಿಕಾಸ್ ಪತ್ರದಡಿಯಲ್ಲಿ ಹೂಡಿಕೆ ಮಾಡುವುದು, ವ್ಯವಹಾರ ನಡೆಸುವುದು ಮತ್ತು ಅಗತ್ಯಬಿದ್ದರೆ ಬೇರೆಡೆಗೆ ವರ್ಗಾಯಿಸುವುದು ಸುಲಭವಾಗಿದೆ. ಆದರೆ ಇದರಿಂದ ಯಾವುದೇ ತೆರಿಗೆ ವಿನಾಯ್ತಿ ಸಿಗುವುದಿಲ್ಲ ಎಂಬುದು ವಿಶೇಷ.

Follow Us:
Download App:
  • android
  • ios