Tesla in India : ಕಾರುಗಳ ಮಾರಾಟಕ್ಕೆ ಅನುಮತಿ ಸಿಗದ ಹೊರತು ಭಾರತದಲ್ಲಿ ಟೆಸ್ಲಾ ಉತ್ಪಾದನೆ ಮಾಡುವುದಿಲ್ಲ!

ಭಾರತದಲ್ಲಿ ಆಮದು ಸುಂಕ ಇರುವ ಕಾರಣ, ಟೆಸ್ಲಾ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗೇನಾದರೂ ಭಾರತದಲ್ಲಿ ಟೆಸ್ಲಾ ಕಾರಗಳ ಮಾರಾಟಕ್ಕೆ ಅನುಮತಿ ಸಿಕ್ಕಲ್ಲಿ ಮಾತ್ರವೇ ಭಾರತದಲ್ಲಿ ಕಾರಗಳನ್ನು ಉತ್ಪಾದನೆ ಮಾಡಬಹುದು ಎಂದು ಟೆಸ್ಲಾ ಸಂಸ್ಥಾಪಕ ಹಾಗೂ ಮುಖ್ಯ ವ್ಯವಸ್ಥಾಪಕ ಅಧಿಕಾರಿ ಎಲಾನ್ ಮಸ್ಕ್ ಹೇಳಿದ್ದಾರೆ.
 

Elon Musk says Tesla wont manufacture in India unless allowed to sell service cars san


ನವದೆಹಲಿ (ಮೇ. 29): ಭಾರತದಲ್ಲಿ ತನ್ನ ಕಾರುಗಳನ್ನು ಮಾರಾಟ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಧಿಸಿರುವ ಆಮದು ಸುಂಕ ಪ್ರಮಾಣದಲ್ಲಿ (reduction in import duties ) ಕಡಿಮೆ ಮಾಡುವಂತೆ ಕೇಳುತ್ತಿರುವ ಅಮೆರಿಕದ ಎಲೆಕ್ಟ್ರಿಕ್ ಕಾರು ಕಂಪನಿ ಟೆಸ್ಲಾ (American electric carmaker Tesla) ಬಗ್ಗೆ ದೊಡ್ಡ ಮಾಹಿತಿ ಸಿಕ್ಕಿದೆ.

ಭಾರತದಲ್ಲಿ ಕಾರುಗಳನ್ನು ಮಾರಾಟ ಹಾಗೂ ಸರ್ವೀಸ್ ಮಾಡಲು ಮೊದಲು ಅನುಮತಿ ಸಿಗದ ಹೊರತು ಭಾರತದಲ್ಲಿ ಕಾರುಗಳ ಉತ್ಪಾದನೆ ಸಾಧ್ಯವಿಲ್ಲ ಎಂದು ಕಂಪನಿಯ ಸಂಸ್ಥಾಪಕ ಹಾಗೂ ಮುಖ್ಯವ್ಯವಸ್ಥಾಪಕ ಅಧಿಕಾರಿ ಎಲಾನ್ ಮಸ್ಕ್  (company founder and chief executive Elon Musk ) ಹೇಳಿದ್ದಾರೆ.

ಭಾರತದಲ್ಲಿ ಟೆಸ್ಲಾ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಕುರಿತು ಟ್ವಿಟರ್ ನಲ್ಲಿ ವ್ಯಕ್ತಿಯೊಬ್ಬ ಎಲಾನ್ ಮಸ್ಕ್ ಅವರನ್ನು ಪ್ರಶ್ನಿಸಿದ್ದ, ಇದಕ್ಕೆ ಪ್ರತಿಕ್ರಿಯೆ ನೀಡಿದ ಟ್ವೀಟ್‌ನಲ್ಲಿ, "ಟೆಸ್ಲಾ ಕಾರುಗಳನ್ನು ಮಾರಾಟ ಮಾಡಲು ಮತ್ತು ಸರ್ವೀಸ್ ಮಾಡಲು ನಮಗೆ ಮೊದಲು ಅನುಮತಿ ಸಿಗದ ಹೊರತು ಯಾವುದೇ ಸ್ಥಳದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪನೆ ಮಾಡುವುದಿಲ್ಲ" ಎಂದು ಅವರು ಹೇಳಿದರು.

ಕಳೆದ ತಿಂಗಳು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಟೆಸ್ಲಾ ತನ್ನ ಎಲೆಕ್ಟ್ರಿಕ್ ವಾಹನಗಳನ್ನು ಭಾರತದಲ್ಲಿ ತಯಾರಿಸಲು ಸಿದ್ಧವಾಗಿದ್ದರೆ 'ಯಾವುದೇ ಸಮಸ್ಯೆ ಇಲ್ಲ' ಆದರೆ ಕಂಪನಿಯು ಚೀನಾದಿಂದ ಕಾರುಗಳನ್ನು ಆಮದು ಮಾಡಿಕೊಳ್ಳಬಾರದು ಎಂದು ಹೇಳಿದ್ದರು.

ಕಳೆದ ವರ್ಷ ಆಗಸ್ಟ್ ನಲ್ಲಿ ಈ ಕುರಿತಾಗಿ ಮಾತನಾಡಿದ್ದ ಎಲಾನ್ ಮಸ್ಕ್, ಭಾರತಕ್ಕೆ ಟೆಸ್ಲಾ ಕಾರಗಳನ್ನು ಮೊದಲು ಆಮದು ಮಾಡಿಕೊಂಡು ಮಾರಾಟ ಮಾಡುತ್ತೇವೆ. ಇದರಲ್ಲಿ ಟೆಸ್ಲಾ ಯಶಸ್ವಿಯಾದಲ್ಲಿ ಮಾತ್ರವೇ, ಭಾರತದಲ್ಲಿ ತನ್ನ ಉತ್ಪಾದನಾ ಘಟಕವನ್ನು ಸ್ಥಾಪನೆ ಮಾಡಲಿದೆ ಎಂದು ಹೇಳಿದ್ದರು.

ಟೆಸ್ಲಾ ತನ್ನ ವಾಹನಗಳನ್ನು ಭಾರತದಲ್ಲಿ ಪರಿಚಯ ಮಾಡಲು ಬಯಸಿದೆ ಎಂದು ಅವರು ಹೇಳಿದ್ದರು. ಆದರೆ, ಭಾರತದಲ್ಲಿ ಆಮದು ಮಾಡಿಕೊಂಡ ಕಾರುಗಳಿಗೆ ಇಡೀ ವಿಶ್ವದಲ್ಲಿಯೇ ಅತ್ಯಂತ ಗರಿಷ್ಠ ಪ್ರಮಾಣದ ಸುಂಕವಿದೆ. CIF (ವೆಚ್ಚ, ವಿಮೆ ಮತ್ತು ಸರಕು ಸಾಗಣೆ) ಮೌಲ್ಯದೊಂದಿಗೆ 40,000 ಅಮೆರಿಕನ್ ಡಾಲರ್ ಗಿಂತ ಹೆಚ್ಚು ಮೌಲ್ಯದ ಆಮದು ಮಾಡಿಕೊಂಡ ಕಾರುಗಳಿಗೆ ಭಾರತದಲ್ಲಿ ಶೇ. 100ರಷ್ಟು ಆಮದು ಸುಂಕವನ್ನು ವಿಧಿಸಲಾಗಿತ್ತು. ಈ ಮೊತ್ತಕ್ಕಿಂತ ಕಡಿಮೆ ಬೆಲೆಯ ಕಾರುಗಳಿಗೆ ಶೇ. 60ರಷ್ಟು ಸುಂಕ ವಿಧಿಸುತ್ತದೆ ಎಂದು ಮಸ್ಕ್ ಹೇಳಿದ್ದರು.
 

Latest Videos
Follow Us:
Download App:
  • android
  • ios