ವಿಜಯ್ ಮಲ್ಯ, ನೀರವ್ ಮೋದಿ, ಚೋಕ್ಸಿಯಿಂದ ಇಡಿ ವಶಪಡಿಸಿಕೊಂಡ ಆಸ್ತಿ ಮೌಲ್ಯವೆಷ್ಟು?
ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾದ ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿಯ ಹಲವು ಆಸ್ತಿಗಳನ್ನು ಇಡಿ ಜಪ್ತಿ ಮಾಡಿದೆ. ಈ ಆಸ್ತಿಗಳ ಮೌಲ್ಯವೆಷ್ಟು?
ನವದೆಹಲಿ(ಡಿ.18) ಭಾರತದ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಮೋಹುಲ್ ಚೋಕ್ಸಿ ವಿರುದ್ಧ ಕಾನೂನು ಹೋರಾಟ ತೀವ್ರಗೊಳ್ಳುತ್ತಿದೆ. ವಿದೇಶದಿಂದ ಭಾರತಕ್ಕೆ ಗಡಿಪಾರು ಮಾಡುವ ಕುರಿತು ಭಾರತ ಸತತ ಹೋರಾಟ ನಡೆಸುತ್ತಿದೆ. ಇದರ ನಡುವೆ ಈ ಮೂವರು ಆಸ್ತಿಪಾಸ್ತಿಗಳನ್ನು ಜಾರಿ ನಿರ್ದೇಶಾನಲಯ(ED) ಜಪ್ತಿ ಮಾಡಿದೆ. ಈ ಕುರಿತು ಕೇಂದ್ರ ಹಣಕಾಸು ಸಿಚವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಉತ್ತರ ನೀಡಿದ್ದಾರೆ. ಅಷ್ಟಕ್ಕೂ ಈ ಮೂವರಿಂದ ವಶಪಡಿಸಿಕೊಂಡ ಆಸ್ತಿ ಮೌಲ್ಯವೆಷ್ಟು ಗೊತ್ತಾ? ಇದು ಬರೋಬ್ಬರಿ 22,280 ಕೋಟಿ ರೂಪಾಯಿ.
ಲೋಕಸಭೆಯಲ್ಲಿ ಬ್ಯಾಂಕ್‌ಗೆ ವಂಚಿಸಿ ಪರಾರಿಯಾಗಿರುವ ಶ್ರೀಮಂತ ಉದ್ಯಮಿಗಳ ವಿರುದ್ದ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದರೆ ಜನಸಮಾನ್ಯರ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂದು ಆರೋಪ ಮಾಡಿತ್ತು. ಮೋದಿ ಸರ್ಕಾರ ಶ್ರೀಮಂತರ ಪರವಾಗಿದೆ ಅನ್ನೋ ಆರೋಪವನ್ನು ಮಾಡಿತ್ತು. ಇದಕ್ಕೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, ಯಾರನ್ನೂ ಬಿಡುವ ಪ್ರಶ್ನೆ ಇಲ್ಲ. ತಪ್ಪು ಮಾಡಿದರೆ ಕಾನೂನು ಪ್ರಕಾರ ಶಿಕ್ಷೆಯಾಗಲಿದೆ ಎಂದಿದ್ದಾರೆ. ಇದೇ ವೇಳೆ ಮೂವರು ಉದ್ಯಮಿಗಳ ವಂಚನೆ ಪ್ರಕರಣ ಉಲ್ಲೇಖಿಸಿ ನಿರ್ಮಾಲಾ ಸೀತಾರಾಮನ್ ವಶಪಡಿಸಿಕೊಂಡ ಆಸ್ತಿ ಮೌಲ್ಯದ ಮಾಹಿತಿ ನೀಡಿದ್ದಾರೆ.
ಬ್ಯಾಂಕ್‌ಗೆ ಮಾಡಿರ್ಬೋದು ಆದ್ರೆ RCB ಅಭಿಮಾನಿಗೆ ಮೋಸಮಾಡಿಲ್ಲ, ಹರಾಜು ಬಳಿಕ ಮಲ್ಯ ನೆನೆದ ಫ್ಯಾನ್ಸ್!
ಉದ್ಯಮಿ ವಿಜಯ್ ಮಲ್ಯರಿಂದ ಜಾರಿ ನಿರ್ದೇಶನಾಲಯ ಬರೋಬ್ಬರಿ 14,131 ಕೋಟಿ ರೂಪಾಯಿಯನ್ನು ಇಡಿ ವಶಪಡಿಸಿಕೊಂಡಿದೆ. ಇದು ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳಿಂದ ಜಪ್ತಿ ಮಾಡಲಾಗಿದೆ. ಇನ್ನು ನೀರವ್ ಮೋದಿಯ ಪಬ್ಲಿಕ್ ಸೆಕ್ಟರ್ ಬ್ಯಾಂಕ್‌ಳಿಂದ ಬರೋಬ್ಬರಿ 1,052.58 ಕೋಟಿ ರೂಪಾಯಿ ಜಪ್ತಿ ಮಾಡಲಾಗಿದೆ. ನ್ಯಾಷನಲ್ ಸ್ಪಾಟ್ ಎಕ್ಸ್‌ಚೇಂಜ್( NSEL)ಹಗರಣದಿಂದ 17.47 ಕೋಟಿ ರೂಪಾಯಿ ಜಪ್ತಿ ಮಾಡಿ ಬ್ಯಾಂಕ್‌ಗೆ ನೀಡಲಾಗಿದೆ. ಎಸ್ಆರ್‌ಎಸ್ ಗ್ರೂಪ್‌ನಿಂದ 20.15 ಕೋಟಿ ರೂಪಾಯಿ, ರೋಸ್ ವ್ಯಾಲಿ ಗ್ರೂಪ್‌ನಿಂದ 19.40 ಕೋಟಿ ರೂಪಾಯಿ, ಸೂರ್ಯ ಫಾರ್ಮಾದಿಂದ 185.13 ಕೋಟಿ ರೂಪಾಯಿ, ಹೀರಾ ಗ್ರೂಪ್‌ನಿಂದ 226 ಕೋಟಿ ರೂಪಾಯಿ, ನಾಯ್ಡು ಅಮೃತೇಶ್ ರೆಡ್ಡಿ ಹಾಗೂ ಇತರರಿಂದ 12.73 ಕೋಟಿ ರೂಪಾಯಿ ವಶಪಡಿಸಿಕೊಳ್ಳಳಾಗಿದೆ ಎಂದರು.
ಮತ್ತೊರ್ವ ಉದ್ಯಮಿ ಮೆಹುಲ್ ಚೋಕ್ಸಿಯ ಪಿಎಸ್‌ಬಿ ಹಾಗೂ ಇತರ ಖಾಸಗಿ ಬ್ಯಾಂಕ್‌ಗಳಿಂದ 1,052 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಇನ್ನು 2,565.90 ಕೋಟಿ ರೂಪಾಯಿ ಆಸ್ತಿ ವಶಪಡಿಸಿಕೊಳ್ಳಲಾಗಿದೆ. ಈ ಆಸ್ತಿಗಳನ್ನು ಹರಾಜು ಹಾಕಲಾಗುತ್ತದೆ. ನಫೀಸಾ ಓವರ್ಸೀಸ್ ಹಾಗೂ ಇತರರಿಂದ 23.38 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ.ಇನ್ನು ಮೆಹುಲ್ ಚೋಕ್ಸಿಯ BPSL ಸೇರಿದಂತೆ ಇತರ ಗ್ರೂಪ್‌ಗಳಿಂದ 4,025 ಕೋಟಿ ರೂಪಾಯಿ ಜಪ್ತಿ ಮಾಡಲಾಗಿದೆ.
ಇದೀಗ ಈ ಮೂವರು ಉದ್ಯಮಿಗಳ ಬಹುತೇಕ ಆಸ್ತಿಗಳು ಮುಟ್ಟುಗೋಲಾಗಿದೆ. ಇದರ ಜೊತೆಗೆ ವಿದೇಶಗಳಲ್ಲಿ ನೆಲೆಸಿರುವ ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ತರೆತಂದು ವಿಚಾರಣೆ ನಡೆಸಲು ಕಾನೂನು ಹೋರಾಟವನ್ನು ಚುರುಕುಗೊಳಿಸಿದೆ. ಈ ಕುರಿತು ಇತ್ತೀಚೆಗೆ ಮಹತ್ವದ ಮಾತುಕತೆಯೂ ನಡೆದಿದೆ. ಈ ಕುರಿತು ನಿರಂತರ ಕಾನೂನು ಹೋರಾಟ ನಡೆಯುತ್ತಿದೆ. ಕೇಂದ್ರ ಸರ್ಕಾರ ಇದೀಗ ಲೋಕಸಭೆಯಲ್ಲಿ ಸ್ಪಷ್ಟನೆ ನೀಡುವ ಮೂಲಕ ಯಾರೇ ವಂಚಿಸಿದರೂ, ಕಾನೂನು ವಿರುದ್ದವಾಗಿ ನಡೆದುಕೊಂಡರೆ ಶಿಕ್ಷೆ ತಪ್ಪಿದ್ದಲ್ಲ. ಯಾರಿಗೂ ಯಾವುದೇ ರೀತಿಯ ವಿನಾಯಿತಿ ಇಲ್ಲ ಎಂದು ನಿರ್ಮಾಲಾ ಸೀತಾರಾಮನ್ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ವಿಪಕ್ಷಗಳು ಈ ಮೂವರು ವಂಚಕರಿಗೆ ಬಿಜೆಪಿ ನೆರವು ನೀಡಿದೆ ಎಂದು ಆರೋಪಿಸಿತ್ತು.