Asianet Suvarna News Asianet Suvarna News

ನಿಮ್ಮ ಹಣ ನಿಮ್ಮ ಕೈಯಲ್ಲಿ: ಮೋದಿ ಮ್ಯಾಜಿಕ್ ಬ್ಯಾಂಕ್‌ನಲ್ಲಿ!

ಗಮನಾರ್ಹ ಬದಲಾವಣೆ ತರಬಲ್ಲ ಮೋದಿ ಸರ್ಕಾರದ ಹೊಸ ಯೋಜನೆ| ಸರ್ಕಾರದ ಯೋಜನೆಗಳ ಫಲ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ| ಕ್ರಾಂತಿಗೆ ನಾಂದಿ ಹಾಡಿದ Direct Benefit Transfer ಯೋಜನೆ| ತಂತ್ರಜ್ಞಾನ ಆಧಾರಿತ ನೇರ ನಗದು ವರ್ಗಾವಣೆ ವ್ಯವಸ್ಥೆ|

Direct Benefit Transfer A Unique Financial Model By Modi Govt
Author
Bengaluru, First Published Mar 3, 2019, 3:02 PM IST

ನವದೆಹಲಿ(ಮಾ.03): ಹೇಳಿ ಕೇಳಿ ಇದು ಚುನಾವಣೆ ಸಮಯ. ಸರ್ಕಾರ ಒಂದು ಯೋಜನೆ ಜಾರಿಗೆ ತಂದರೆ ಪ್ರತಿಪಕ್ಷ ಇದು ಚುನಾವಣೆ ಗಿಮಿಕ್ ಅನ್ನುತ್ತದೆ. ಆದರೆ ಈ ಗೊಂದಲದಲ್ಲಿ ಬೀಳಲು ಇಷ್ಟಪಡದ ಜನಸಾಮಾನ್ಯ ಮಾತ್ರ ನಿರ್ದಿಷ್ಟ ಯೋಜನೆಯ ಫಲ ಏನು ಎಂದು ಯೋಚಿಸುತ್ತಾನೆ.

ಅದರಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ  ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಸರ್ಕಾರದ ಯೋಜನೆಗಳ ಫಲವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡುವ ಯೋಜನೆ ಜಾರಿಯಾಗಿದೆ.

ಇದು ತಂತ್ರಜ್ಞಾನ ಆಧಾರಿತ ನೇರ ನಗದು ವರ್ಗಾವಣೆ ವ್ಯವಸ್ಥೆಯಾಗಿದ್ದು, ಯಾವುದೇ ಮಧ್ಯವರ್ತಿಗಳ ಗೋಳಿಲ್ಲ, ಕಚೇರಿ ಅಧಿಕಾರಿಗಳನ್ನು ಅಂಗಲಾಚುವಂತಿಲ್ಲ, ದಿನನಿತ್ಯ ಕೆಲಸ ಕಾರ್ಯಗಳನ್ನು ಬಿಟ್ಟು ಸರಕಾರಿ ಕಚೇರಿ ಅಲೆಯಬೇಕಾಗಿಲ್ಲ.

ಇದನ್ನು Direct Benefit Transfer(DBT) ಎಂದು ಹೆಸರಿಸಲಾಗಿದ್ದು, ಈ ಯೋಜನೆ ಬಗ್ಗೆ ಪ್ರತಿಪಕ್ಷಗಳು ಪಸ್ವರ ಎತ್ತಿವೆ. ಸರ್ಕಾರದ ಅಂಕಿ ಅಂಶಗಳಿಗೂ ಸಿಎಜಿ ವರದಿಗೂ ತಾಳೆಯೇ ಆಗುತ್ತಿಲ್ಲವಾದ್ದರಿಂದ ಡಿಬಿಟಿ ಯೋಜನೆ ಬಗ್ಗೆ ಮೋದಿ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿವೆ.

Follow Us:
Download App:
  • android
  • ios