ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಠೇವಣಿ ಇಳಿಕೆ: ಗೊಯಲ್!

First Published 24, Jul 2018, 3:34 PM IST
Deposits in Swiss banks fell by 80% after NDA came to power, says Piyush Goyal
Highlights

ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಠೇವಣಿ ಇಳಿಕೆ

ಕೇಂದ್ರ ವಿತ್ತ ಸಚಿವ ಪಿಯೂಷ್ ಗೊಯಲ್ ಮಾಹಿತಿ

ರಾಜ್ಯಸಭೆಯಲ್ಲಿ ಮಾತನಾಡಿದ ಹಣಕಾಸು ಸಚಿವ

ಭಾರತೀಯರ ಠೇವಣಿ ಮೊತ್ತದಲ್ಲಿ ಶೇ. 80 ರಷ್ಟು ಇಳಿಕೆ

ನವದೆಹಲಿ(ಜು.24): ಕಪ್ಪು ಹಣ ಕುರಿತಂತೆ ರಾಜ್ಯಸಭೆಯಲ್ಲಿ ಮಾತನಾಡಿದ ಸಚಿವ ಪಿಯೂಷ್ ಗೊಯಲ್, 2014ರಿಂದ 2017ರ ಅವಧಿಯಲ್ಲಿ ಭಾರತೀಯರು ಸ್ವಿಸ್ ರಾಷ್ಟ್ರೀಯ ಬ್ಯಾಂಕಿನಲ್ಲಿ ಇಟ್ಟಿರುವ  ಠೇವಣಿ ಮೊತ್ತದಲ್ಲಿ  ಶೇ. 80 ರಷ್ಟು ಇಳಿಕೆಯಾಗಿದೆ ಎಂದು ತಿಳಿಸಿದರು.

ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಳೆದ ಸಾಲಿನಲ್ಲಿ  ಭಾರತೀಯರು ಸ್ವೀಸ್ ರಾಷ್ಟ್ರೀಯ ಬ್ಯಾಂಕಿನಲ್ಲಿ ಇಟ್ಟಿರುವ ಠೇವಣಿ ಮೊತ್ತ ಹಾಗೂ ಸಾಲದ ಪ್ರಮಾಣದಲ್ಲಿ ಶೇ. 34. 5 ರಷ್ಟು ಕಡಿಮೆಯಾಗಿದೆ ಗೊಯಲ್ ಮಾಹಿತಿ ನೀಡಿದರು.

ಸ್ವಿಸ್ ರಾಷ್ಟ್ರೀಯ ಬ್ಯಾಂಕ್ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಮಾಹಿತಿ ಲಭ್ಯವಿದ್ದು, ಮೋಧಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕೈಗೊಂಡ ಕಠಿಣ ನಿರ್ಧಾರಗಳೇ ಈ ಬೆಳವಣಿಗೆಗೆ ಕಾರಣ ಎಂದು ಪಿಯೂಷ್ ರಾಜ್ಯಸಭೆಗೆ ತಿಳಿಸಿದರು.

ಸ್ವಿಟ್ಜರ್ ಲ್ಯಾಂಡ್‌ನಲ್ಲಿ ಭಾರತೀಯ ನಿವಾಸಿಗಳ ಆಸ್ತಿಗಳ ಬಗ್ಗೆ ಇನ್ನೂ ಘೋಷಣೆಯಾಗಿಲ್ಲ. 2016ರ ಸಾಲಿಗೆ ಹೋಲಿಸಿದರೆ ಬ್ಯಾಂಕೇತರ ಸಾಲ ಮತ್ತು ಠೇವಣಿಯಲ್ಲಿ  ಶೇ.34. 5 ರಷ್ಟು ಇಳಿದಿದೆ ಎಂದು ಬಿಐಎಸ್ ಮಾಹಿತಿಯಲ್ಲಿ ಹೇಳಲಾಗಿದೆ ಎಂದು ಗೊಯಲ್  ಸದನಕ್ಕೆ ಮಾಹಿತಿ ನೀಡಿದರು.

loader