Set Back For Future Group: ಮಧ್ಯಸ್ಥಿಕೆ ಸಮಿತಿ ನೀಡಿದ್ದ ತೀರ್ಪು ವಜಾ ಮಾಡಲು ದೆಹಲಿ ಹೈ ಕೋರ್ಟ್ ನಕಾರ!

ಅಮೇಜಾನ್-ಫ್ಯೂಚರ್ ಗ್ರೂಪ್ ಡೀಲ್ ವಿವಾದ
ಈಗಾಗಲೇ ಸಿಸಿಐ ಈ ಒಪ್ಪಂದವನ್ನೇ ರದ್ದು ಮಾಡಿದೆ ಎಂದ ಫ್ಯೂಚರ್ ಗ್ರೂಪ್
ದೆಹಲಿ ಹೈ ಕೋರ್ಟ್ ನಿಂದ ಆದೇಶ
 

Delhi High Court dismissed Future Retail plea to declare arbitration proceedings with Amazon Inc as illegal san

ನವದೆಹಲಿ (ಜ. 4): ತನ್ನ ವಿರುದ್ಧ ಕಾನೂನು ಹೋರಾಟಕ್ಕೆ ನಿಂತಿರುವ ಪಾಲುದಾರ ಅಮೇಜಾನ್ ಡಾಟ್ ಕಾಮ್ ಇಂಕ್ (Amazon.com Inc ) ಜೊತೆಗಿನ ಮಧ್ಯಸ್ಥಿಕೆ ಪ್ರಕ್ರಿಯೆಯ (arbitration proceedings) ತೀರ್ಪನ್ನು ಕಾನೂನುಬಾಹಿರವೆಂದು (illegal) ಘೋಷಣೆ ಮಾಡುವಂತೆ ಫ್ಯೂಚರ್ ಗ್ರೂಪ್ (Future Retail) ಕಂಪನಿ ದೆಹಲಿ ಹೈಕೋರ್ಟ್ ಗೆ (Delhi High Court) ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ. ಇದರಿಂದಾಗಿ ಫ್ಯೂಚರ್ ಗ್ರೂಪ್ ಗೆ ಈ ಪ್ರಕರಣದಲ್ಲಿ ದೊಡ್ಡ ಹಿನ್ನಡೆ ಉಂಟಾಗಿದ್ದು, ಮುಂದಿನ ಕಾನೂನು ಸಮರ ಕುತೂಹಲ ಹುಟ್ಟಿಸಿದೆ.

ಫ್ಯೂಚರ್ ಗ್ರೂಪ್ ನ ಮೇಲೆ ತನ್ನ ಹಕ್ಕುಗಳಿದೆ ಎಂದು ಪ್ರತಿಪಾದಿಸಲು ಅಮೇಜಾನ್ (Amezon) ಬಳಕೆ ಮಾಡಿರುವ 2019ರ ಮಧ್ಯಸ್ಥಿಕೆ ಸಮಿತಿಯ ಒಪ್ಪಂದವನ್ನು ಭಾರತದ ಕಾಂಪಿಟೇಷನ್ ಕಮೀಟಿ (ಆಂಟಿಟ್ರಸ್ಟ್ ಏಜೆನ್ಸಿ) ಅಮಾನತು ಮಾಡಿದೆ. ಹಾಗಾಗಿ ಎರಡೂ ಕಂಪನಿಗಳು ಮಧ್ಯಸ್ಥಿಕೆ ಆದೇಶದ ಅಡಿಯಲ್ಲಿ ಮುಂದುವರಿಯಲು ಯಾವುದೇ ಕಾನೂನಿನ ಅಧಾರವಿಲ್ಲ ಎಂದು ಫ್ಯೂಚರ್ ಗ್ರೂಪ್ ತನ್ನ ಅರ್ಜಿಯಲ್ಲಿ ತಿಳಿಸಿತ್ತು. ದೆಹಲಿ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿ ಅಮಿತ್ ಬನ್ಸಾಲ್ (Amith Bhansal) ಯಾವುದೇ ಹೆಚ್ಚಿನ ವಿವರಗಳನ್ನು ನೀಡದೇ, ಫ್ಯೂಚರ್ ಗ್ರೂಪ್ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ವಜಾ ಮಾಡಿದ್ದಾಗಿ ಆದೇಶ ನೀಡಿದರು.

ಅಮೆಜಾನ್ ಮತ್ತು ಫ್ಯೂಚರ್ ಹಲವಾರು ತಿಂಗಳುಗಳಿಂದ ಕಾನೂನು ಹೋರಾಟದಲ್ಲಿ ನಿರತವಾಗಿವೆ. ಕೆಲವು ಒಪ್ಪಂದಗಳ ಉಲ್ಲಂಘನೆಯನ್ನು ಆರೋಪಿಸಿರುವ ಅಮೇಜಾನ್ ಗ್ರೂಪ್, 2019ರಲ್ಲಿ ಫ್ಯೂಚರ್ ಗ್ರೂಪ್ ಮೇಲೆ 200 ಮಿಲಿಯನ್ ಯುಎಸ್ ಡಾಲರ್ ಹಣವನ್ನು ಹೂಡಿಕೆ ಮಾಡಿದ್ದೇವೆ. ಆದರೆ, ಫ್ಯೂಚರ್ ಗ್ರೂಪ್ ನಮ್ಮ ಕಂಪನಿಗೆ ಯಾವುದೇ ಮಾಹಿತಿ ನೀಡದೇ ಫ್ಯೂಚರ್ ಗ್ರೂಪ್ ನ ಕೆಲ ಆಸ್ತಿಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಗೆ (Reliance Industries) ಮಾರಾಟ ಮಾಡಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಅಮೇರಿಕದ ಕಂಪನಿ ಅಮೇಜಾನ್ ಹಾಗೂ ಫ್ಯೂಚರ್ ಗ್ರೂಪ್ ನಡುವೆ ಕಾನೂನು ಹೋರಾಟ ನಡೆಯುತ್ತಿದೆ.

Penalty To Amazon:ಅಮೆಜಾನ್, ಫ್ಯೂಚರ್ ಗ್ರೂಪ್ ಒಪ್ಪಂದ ರದ್ದುಗೊಳಿಸಿ 202 ಕೋಟಿ ರೂ. ದಂಡ ವಿಧಿಸಿದ ಸಿಸಿಐ
ಇನ್ನು ಸಿಂಗಾಪುರದ ಮಧ್ಯಸ್ಥಿಕೆ ನ್ಯಾಯಮಂಡಳಿಯು ಎರಡು ಕಂಪನಿಗಳ ನಡುವಿನ 2019 ರ ಒಪ್ಪಂದಕ್ಕೆ ಸಂಬಂಧಿಸಿದ ಫ್ಯೂಚರ್ ಗ್ರೂಪ್ ವಿರುದ್ಧ ಅಮೆಜಾನ್‌ನ ಪ್ರಕರಣವನ್ನು ವಿಚಾರಣೆ ನಡೆಸುತ್ತಿದೆ. ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್‌ಗೆ ಫ್ಯೂಚರ್ ರೀಟೇಲ್‌ನ ಆಸ್ತಿಯನ್ನು ಮಾರಾಟ ಮಾಡುವುದನ್ನು ತಡೆಹಿಡಿಯುವ ಮಧ್ಯಂತರ ಆದೇಶವನ್ನು ನ್ಯಾಯಮಂಡಳಿ ಜಾರಿಗೊಳಿಸಿದೆ. ಇದರ ಬೆನ್ನಲ್ಲಿಯೇ ಫ್ಯೂಚರ್ ರಿಟೇಲ್ ಕಂಪನಿಯೂ ನ್ಯಾಯಮಂಡಳಿಗೆ ತನ್ನ ವಾದವನ್ನು ಸಲ್ಲಿಸಿದ್ದು, ಅಮೇಜಾನ್ ನಡುವಿನ ಒಪ್ಪಂದವನ್ನು ಭಾರತದ ಸ್ಮರ್ಧಾತ್ಮಕ ಆಯೋಗ (ಸಿಸಿಐ) ಕಾನೂನುಬಾಹಿರ ಎಂದು ರದ್ದು ಮಾಡಿದೆ. ಈ ಒಪ್ಪಂದಕ್ಕೆ ಇದ್ದ ಕ್ಲಿಯರೆನ್ಸ್ ಅನ್ನೂ ರದ್ದು ಮಾಡಿದೆ. ಅಮೆಜಾನ್ ಸಂಸ್ಥೆಯು ಫ್ಯೂಚರ್ ಗ್ರೂಪ್ ನಲ್ಲಿ  49 ಶೇಕಡಾ ಪಾಲನ್ನು ಸ್ವಾಧೀನಪಡಿಸಿಕೊಳ್ಳುವ ಕೆಲವು ನಿರ್ಣಾಯಕ ವಿವರಗಳ ಬಗ್ಗೆ ತಿಳಿಸಲು ವಿಫಲವಾಗಿದೆ, ಸ್ಪರ್ಧಾತ್ಮಕ ಕಾಯಿದೆ, 2002 (ಆಕ್ಟ್) ನ ಸೆಕ್ಷನ್ 6(2) ಅಡಿಯಲ್ಲಿ ಅಗತ್ಯವಿದೆ.  ಹಾಗಾಗಿ, ಅಮೆಜಾನ್‌ಗೆ ₹202 ಕೋಟಿ ದಂಡವನ್ನೂ ವಿಧಿಸಿತ್ತು ಎಂದು ಫ್ಯೂಚರ್ ಕಂಪನಿ ತಿಳಿಸಿತ್ತು.

24,713 ಕೋಟಿ ರೂ ರಿಲಯನ್ಸ್ ಒಪ್ಪಂದ ವಿರುದ್ಧ ಕಾನೂನು ಹೋರಾಟ; ಅಮೆಜಾನ್ ಪರ ಸುಪ್ರೀಂ ತೀರ್ಪು !
ಇದರ ನಡುವೆ ರಿಲಯನ್ಸ್ ಹಾಗೂ ಅಮೆಜಾನ್ ನಡುವಿನ ಕಾನೂನು ಸಮರಕ್ಕೆ ಸುಪ್ರೀಂ ಕೋರ್ಟ್ ಕೂಡ ತೀರ್ಪು ನೀಡಿದೆ. ಫ್ಯುಚರ್ ಗ್ರೂಪ್ ಹಾಗೂ ರಿಲಯನ್ಸ್ ನಡುವಿನ 24,713 ಕೋಟಿ ರೂಪಾಯಿ ಒಪ್ಪಂದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಅಮೆಜಾನ್ ಪರ ತೀರ್ಪು ನೀಡಿದ್ದ ಕೋರ್ಟ್ ಒಪ್ಪಂದ ಮುಂದುವರಿಸುವಂತಿಲ್ಲ ಎಂದು ಹೇಳಿತ್ತು.

Latest Videos
Follow Us:
Download App:
  • android
  • ios