ನಾವೇನೋ ಸಾಕಷ್ಟು ದುಡೀತೀವಿ. ಹಣ ಉಳಿಸುವುದಕ್ಕೆಪ್ರಯತ್ನಿಸ್ತೀವಿ. ಆದರೆ ನಮ್ಮ ಕೈಮೀರಿ ಕೆಲವೊಮ್ಮೆ, ಸರಕಾರದ ಪಾಲಿಸಿಗಳು, ಟ್ಯಾಕ್ಸ್‌ ಇಲಾಖೆಯ ಫರ್ಮಾನುಗಳು, ನೀವು ಗ್ರಾಹಕರಾಗಿರುವ ಬ್ಯಾಂಕುಗಳು ಮಾಡುವ ರೂಲ್‌ಗಳು ನಮ್ಮನ್ನು ಇಕ್ಕಟ್ಟಿಗೆ ಸಿಕ್ಕಿಸಿ ಹಾಕುತ್ತವೆ. ಇವುಗಳು ವಿಧಿಸುವ ಡೆಡ್‌ಲೈನ್‌ಗಳಿಗೆ ನೀವು ಅಡ್ಜಸ್ಟ್‌ ಆಗದೇ ಹೋದ್ರೆ ನೀವು ಉಳಿಸಿದ ಹಣವೂ ಯಾರಾರ‍ಯರದೋ ಪಾಲಾಗುತ್ತದೆ. ಅದೆಲ್ಲ ಬೇಡ ಅಂತಿದ್ದರೆ ಈ ಕೆಲಸಗಳನ್ನು ಡಿ.31ರ ಡೆಡ್‌ಲೈನ್‌ನ ಮೊದಲೇ ಮಾಡಿ ಮುಗಿಸಿ.

ಆಧಾರ್‌ನೊಂದಿಗೆ ಪಾನ್‌ ಲಿಕ್‌ ಮಾಡಿ

ನಿಮ್ಮ ಪಾನ್‌ ಕಾರ್ಡನ್ನು ಆಧಾರ್‌ನೊಂದಿಗೆಇಂದೇ ಲಿಂಕ್‌ ಮಾಡಿಕೊಳ್ಳಿ. ಇದಕ್ಕೆ 2019ರ ಡಿಸೆಂಬರ್‌ 31 ಕೊನೆಯ ದಿನಾಂಕ. 2019ರ ಏಪ್ರಿಲ್‌ 1ರ ಬಳಿಕ ಎಲ್ಲರ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್‌ ಫೈಲ್‌ ಮಾಡೋಕೆ, ಪಾನ್‌ನೊಂದಿಗೆ ಆಧಾರ್‌ ಲಿಂಕ್‌ ಮಾಡುವುದನ್ನು ಕಡ್ಡಾಯ ಮಾಡಲಾಗಿತ್ತು. ಇದಿಲ್ಲದೆ ಟ್ಯಾಕ್ಸ್‌ ರಿಟರ್ನ್‌ ಫೈಲ್‌ ಮಾಡೋಕೆ ಸಾಧ್ಯವಿರಲಿಲ್ಲ. ಲಿಂಕ್‌ ಮಾಡುವುದಕ್ಕೆ ಸೆಪ್ಟೆಂಬರ್‌ 30ರ ಡೆಡ್‌ಲೈನ್‌ ನೀಡಲಾಗಿತ್ತು. ಅದನ್ನು ಡಿ.31ಕ್ಕೆ ವಿಸ್ತರಿಸಲಾಗಿತ್ತು. ಇನ್ನೂ ಮುಂದಕ್ಕೆ ಈ ಚಾನ್ಸ್‌ ಸಿಗಲಾರದು. ಈಗ ಲಿಂಕ್‌ ಮಾಡದಿದ್ದರೆ ನಿಮ್ಮ ಪಾನ್‌ಕಾರ್ಡ್‌ ಇನ್‌ವ್ಯಾಲಿಡ್‌ ಆಗುತ್ತದೆ. ಅಥವಾ ದಂಡ ಕಟ್ಟಬೇಕಾದೀತು.

ಟ್ಯಾಕ್ಸ್‌ ರಿಟರ್ನ್‌ ಫೈಲ್‌ ಮಾಡಿ

ನಿಮ್ಮ ಟ್ಯಾಕ್ಸ್‌ ರಿಟರ್ನ್‌ ಫೈಲ್‌ ಮಾಡೋದಕ್ಕೆ ಕೊನೆಯ ದಿನಾಂಕ ಈಗಾಗಲೇ ಆಗಿಹೋಗಿದೆ. ಆದರೆ ಡಿ.31ರವರೆಗೆ, ದಂಡ ಕಟ್ಟಿ ಟ್ಯಾಕ್ಸ್‌ ರಿಟರ್ನ್‌ ಮಾಡೋದಕ್ಕೆ ಚಾನ್ಸ್‌ ಇದೆ. ಆದ್ರೂ ನೀವು ಸುಮಾರು 5,000 ರೂಪಾಯಿಗಳಷ್ಟು ದಂಡ ಕಟ್ಟಬಢೇಕಾಗುತ್ತೆ. ಐಟಿ ಕಾಯಿದೆಯ ಸೆಕ್ಷನ್‌ 234 ಎಫ್‌ ವಿಧಿ ಪ್ರಕಾರ ಇದನ್ನು 2017-18ರಿಂದ ಜಾರಿ ಮಾಡಲಾಗಿದೆ. ಡಿ.31ರ ನಂತರ ನೀವು ರಿಟರ್ನ್‌ ಫೈಲ್‌ ಮಾಡೋದಾದರೆ, 10,000 ರೂಪಾಯಿಯಷ್ಟು ದಂಡ ಕಟ್ಟಬೇಕಾದೀತು, ಹುಷಾರ್‌!

ಎಸ್‌ಬಿಐ ಎಟಿಎಂ ಕಾರ್ಡ್‌ ಬದಲಾಯಿಸಿ

ನೀವು ಎಸ್‌ಬಿಐ ಗ್ರಾಹಕರಾಗಿದ್ದಲ್ಲಿ ಇದನ್ನು ಡಿ.31ರ ಒಳಗೆ ಮಾಡ್ಲೇಬೇಕು. ನೀವಿನ್ನೂ ಅದೇ ಹಳೇ ಮ್ಯಾಗ್ನೆಟಿಕ್‌ ಸ್ಟ್ರೈಪ್‌ ಎಟಿಎಂ ಕಮ್‌ ಡೆಬಿಟ್‌ ಕಾರ್ಡ್‌ ಯೂಸ್‌ ಮಾಡ್ತಾ ಇದ್ರೆ, ಡಿ.31ರ ಬಳಿಕ ಅವು ಯೂಸ್‌ಲೆಸ್‌ ಆಗಿಬಿಡ್ತವೆ. ಅವುಗಳನ್ನು ನೀವು ಬಳಸೋಕೇ ಸಾಧ್ಯವಿಲ್ಲ. ಅವುಗಳ ಬದಲಾಗಿ ಬ್ಯಾಂಕ್‌ ಹೊಸ ಇಎಂವಿ ಚಿಪ್‌ ಹೊಂದಿದ ಕಾರ್ಡ್‌ಗಳನ್ನು ಕೊಡ್ತಾ ಇದೆ. ಇವುಗಳನ್ನು ಪಡೆದುಕೊಳ್ಳಲು ಮತ್ತು ಹಳೇ ಮ್ಯಾಗ್ನೆಟಿಕ್‌ ಕಾರ್ಡ್‌ಗಳಿಗೆ ತಿಲಾಂಜಲಿ ಕೊಡೋಕೆ ಇದು ಸೂಕ್ತ ಸಮಯ. ಎಸ್‌ಬಿಐ ಈ ಬಗ್ಗೆ ಒಂದು ಟ್ವೀಟ್‌ ಮಾಡಿದ್ದು, ಹಳೆ ಕಾರ್ಡ್‌ಗಳಿಗೆ ಎಷ್ಟೇ ವರ್ಷ ವ್ಯಾಲಿಡಿಟಿ ಹೊಂದಿದ್ದರೂ. ಡಿ.31ರ ಬಳಿಕ ಅವು ಇನ್‌ವ್ಯಾಲಿಡ್‌ ಆಗಲಿವೆ ಎಂದು ಎಚ್ಚರಿಕೆ ನೀಡಿದೆ.

ಅಡ್ವಾನ್ಸ್‌ ಟ್ಯಾಕ್ಸ್‌ ಕಟ್ಟಿ

ಈಶಾನ್ಯ ರಾಜ್ಯಗಳ ಮಂದಿಗೆ 2019-20ರ ಹಣಕಾಸು ವರ್ಷದ ಅಡ್ವಾನ್ಸ್‌ ಟ್ಯಾಕ್ಸ್‌ ಕಟ್ಟೋಕೆ ಗಡುವನ್ನು ಡಿಸೆಂಬರ್‌ 15ರಿಂದ ಡಿಸೆಂಬರ್‌ 31ಕ್ಕೆ ಕೇಂದ್ರ ಸರಕಾರದ ತೆರಿಗೆ ಇಲಾಖೆ ವಿಸ್ತರಿಸಿದೆ. ಈಶಾನ್ಯ ರಾಜ್ಯಗಳಲ್ಲಿ ಪೌರತ್ವ ಕಾಯಿದೆ ವಿರೋಧಿಸಿ ನಡೀತಾ ಇರುವ ಗಲಭೆಗಳ ಹಿನ್ನೆಲೆಯಲ್ಲಿ ಈ ತೆರಿಗೆ ಕಟ್ಟುವ ಅವಕಾಶ ವಿಸ್ತರಣೆ. ಇದು ಈಶಾನ್ಯ ರಾಜ್ಯಗಳ ಪ್ರಜೆ ನೀವಾಗಿದ್ದಲ್ಲಿ, ಅಥವಾ ನಿಮ್ಮ ಬ್ಯುಸಿನೆಸ್‌ ಅನ್ನು ಅಲ್ಲಿ ಹೊಂದಿದ್ದಲ್ಲಿ ಅನ್ವಯವಾಗುತ್ತದೆ.