*ಸಾರ್ವಜನಿಕ ಭವಿಷ್ಯ ನಿಧಿ,ರಾಷ್ಟ್ರೀಯ ಪಿಂಚಣಿ ಯೋಜನೆಗಳಲ್ಲಿ ಕನಿಷ್ಠ ಠೇವಣಿಯಿಡಲು ಮರೆಯಬೇಡಿ*ಉಳಿತಾಯ ಹೂಡಿಕೆ ಯೋಜನೆಗಳಲ್ಲಿ ಕನಿಷ್ಠ ಠೇವಣಿ ಪಾವತಿಸದಿದ್ರೆ ದಂಡ*ಠೇವಣಿ ಪಾವತಿಸದಿದ್ರೆ ಉಳಿತಾಯ ಹೂಡಿಕೆ ಯೋಜನೆ ಖಾತೆ ನಿಷ್ಕ್ರಿಯ
Business Desk:ಕೆಲವು ಯೋಜನೆಗಳು (Schemes) ಹಾಗೂ ವಿಮೆಗಳಲ್ಲಿ (Insurances) ಹೂಡಿಕೆ (Invest) ಮಾಡೋದ್ರಿಂದ ತೆರಿಗೆ (Tax) ಕಡಿತದ ಪ್ರಯೋಜನ ಪಡೆಯಬಹುದು. 2021-22 ನೇ ಆರ್ಥಿಕ ಸಾಲಿನಲ್ಲಿ ತೆರಿಗೆ ಉಳಿಸೋ ಯೋಜನೆಗಳು ಹಾಗೂ ವಿಮೆಯಲ್ಲಿ ಹೂಡಿಕೆ (Invest) ಮಾಡಲು ಮಾರ್ಚ್ 31 ಅಂತಿಮ ದಿನಾಂಕವಾಗಿದೆ. ಅಲ್ಲದೆ, ಅನೇಕ ಸಣ್ಣ ಹಾಗೂ ತೆರಿಗೆ ಉಳಿತಾಯಕ್ಕೆ ನೆರವು ನೀಡೋ ಯೋಜನೆಗಳ ಖಾತೆಗೆ ವಾರ್ಷಿಕ ಕನಿಷ್ಠ ಠೇವಣಿ (Deposit) ಪಾವತಿಸಲು ಕೂಡ ಮಾರ್ಚ್ 31 ಕೊನೆಯ ದಿನಾಂಕವಾಗಿದೆ.
ಯಾವ ಯೋಜನೆಗೆ ಎಷ್ಟು ಕನಿಷ್ಠ ಠೇವಣಿ?
ಸಾರ್ವಜನಿಕ ಭವಿಷ್ಯ ನಿಧಿ (PPF),ರಾಷ್ಟ್ರೀಯ ಪಿಂಚಣಿ ಯೋಜನೆ (NPS),ಸುಕನ್ಯಾ ಸಮೃದ್ಧಿ ಯೋಜನೆಗಳಲ್ಲಿ (SSY) 2021-22ನೇ ಸಾಲಿಗೆ ಕನಿಷ್ಠ ಠೇವಣಿ ಇಡಬೇಕಾಗುತ್ತದೆ. ಇಲ್ಲದಿದ್ರೆ 2022ರ ಮಾರ್ಚ್ 31ರ ಬಳಿಕ ಆ ಖಾತೆಗಳು ನಿಷ್ಕ್ರಿಯವಾಗುತ್ತವೆ. ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ (PPF)ಕನಿಷ್ಠ 500ರೂ. ಠೇವಣಿ ಇಡಬೇಕಾಗುತ್ತದೆ. ವಾರ್ಷಿಕ ಕನಿಷ್ಠ ಠೇವಣಿಯನ್ನು ಗಡುವಿಗೆ ಮುನ್ನ ಪಾವತಿಸದಿದ್ರೆ ವಾರ್ಷಿಕ 50ರೂ. ದಂಡ ಪಾವತಿಸಬೇಕಾಗುತ್ತದೆ. ಅಲ್ಲದೆ, ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಖಾತೆ ನಿಷ್ಕ್ರಿಯಗೊಂಡ್ರೆ ಸಾಲ ಸೌಲಭ್ಯ ಸಿಗೋದಿಲ್ಲ. ಅಲ್ಲದೆ, ಭಾಗಶಃ ಹಿಂತೆಗೆತ ಕೂಡ ಸಾಧ್ಯವಾಗೋದಿಲ್ಲ.
Online Gaming: ರಾಜ್ಯದಲ್ಲಿ ಆನ್‌ಲೈನ್ ಆಟಗಳ ಭವಿಷ್ಯ ಹೇಗಿದೆ?
ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಟೈರ್-1ಎನ್ ಪಿಎಸ್ ಖಾತೆಗೆ ವಾರ್ಷಿಕ ಕನಿಷ್ಠ ಠೇವಣಿ 1000ರೂ. ಒಂದು ವೇಳೆ ವಾರ್ಷಿಕ ಕನಿಷ್ಠ ಠೇವಣಿ ಪಾವತಿಸದೆ ಖಾತೆ ನಿಷ್ಕ್ರಿಯಗೊಂಡ್ರೆ ಅದನ್ನು ಸಕ್ರಿಯಗೊಳಿಸಲು ವಾರ್ಷಿಕ 100ರೂ. ಪಾವತಿಸಬೇಕು. ಇನ್ನು ಸುಕನ್ಯಾ ಸಮೃದ್ಧಿ (Sukanya Samruddi) ಯೋಜನೆಯಲ್ಲಿ ವಾರ್ಷಿಕ ಕನಿಷ್ಠ 250ರೂ. ಹೂಡಿಕೆ ಮಾಡಬೇಕು. ಇಲ್ಲವಾದ್ರೆ ಖಾತೆ ನಿಷ್ಕ್ರಿಯಗೊಳ್ಳುತ್ತದೆ.
ವಿಮೆ ಖರೀದಿಸಲು ಮರೆಯಬೇಡಿ
ನೀವು, ನಿಮ್ಮ ಸಂಗಾತಿ ಹಾಗೂ ಮಕ್ಕಳಿಗೆ ಕವರೇಜ್ ಹೊಂದಿರೋ ಆರೋಗ್ಯ ವಿಮಾ ಪಾಲಿಸಿಗಳ 25 ಸಾವಿರ ರೂ. ತನಕ ಪ್ರೀಮಿಯಂ (Premium) ಪಾವತಿ ಮೇಲೆ ಆದಾಯ ತೆರಿಗೆ ಕಾಯ್ದೆ 80D ಅಡಿಯಲ್ಲಿ ಕ್ಲೇಮ್ ಮಾಡಬಹುದು. ಇನ್ನು ನೀವು ನಿಮ್ಮ ಹೆತ್ತವರಿಗೂ ಆರೋಗ್ಯ ವಿಮೆ ಮಾಡಿಸಿದ್ರೆ ವಾರ್ಷಿಕ ಹೆಚ್ಚುವರಿ 25,000ರೂ. ತನಕ ಕ್ಲೇಮ್ (Claim) ಮಾಡಬಹುದು. ಒಂದು ವೇಳೆ ವಿಮೆ ಹೊಂದಿರೋ ವ್ಯಕ್ತಿ ಹಿರಿಯ ನಾಗರಿಕರಾಗಿದ್ರೆ ಸ್ವಂತಕ್ಕೆ 50,000ರೂ., ಕುಟುಂಬ ಹಾಗೂ ಹೆತ್ತವರಿಗೆ 1ಲಕ್ಷ ರೂ. ತನಕ ಕ್ಲೇಮ್ ಮಾಡಬಹುದು. ಬಹುತೇಕ ಉದ್ಯೋಗಿಗಳು ಉದ್ಯೋಗಸ್ಥ ಸಂಸ್ಥೆ ನೀಡೋ ಆರೋಗ್ಯ ವಿಮೆ ಅವಲಂಬಿಸಿರುತ್ತಾರೆ. ಇಂಥ ಕವರೇಜ್ ಉದ್ಯೋಗ ಬದಲಾಯಿಸಿದಾಗ ಕೊನೆಗೊಳ್ಳುತ್ತದೆ.
Bitcoin ಬಗ್ಗೆ ಎಲಾನ್ ಮಸ್ಕ್ ಮಾಡಿದ ಟ್ವೀಟ್ ಮತ್ತೊಮ್ಮೆ ವೈರಲ್!
ತೆರಿಗೆ ಪದ್ಧತಿ ಆಯ್ಕೆ
2020-21ನೇ ಆರ್ಥಿಕ ಸಾಲಿನಿಂದ ಹಳೆಯ (Old) ಹಾಗೂ ಪ್ರಸ್ತುತವಿರೋ (New) ತೆರಿಗೆ ಪದ್ಧತಿಯಲ್ಲಿ ಒಂದನ್ನು ಆಯ್ಕೆ ಮಾಡೋ ಅವಕಾಶವಿದೆ. ಒಂದು ವೇಳೆ ಒಬ್ಬ ವ್ಯಕ್ತಿ 2021-22ನೇ ಆರ್ಥಿಕ ಸಾಲಿಗೆ ಹಳೆಯ ಅಥವಾ ಪ್ರಸ್ತುತವಿರೋ ತೆರಿಗೆ ಪದ್ಧತಿಯಲ್ಲಿ ಆಯ್ಕೆ ಮಾಡಿದ್ರೆ ಆತ ಆದಾಯ ತೆರಿಗೆ ಕಾಯ್ದೆ 80C ಅಡಿಯಲ್ಲಿ ಗರಿಷ್ಠ 1.5ಲಕ್ಷ ರೂ. ಮನೆ ಬಾಡಿಗೆ ಭತ್ಯೆ ಮೇಲೆ ತೆರಿಗೆ ವಿನಾಯ್ತಿ ಪಡೆಯಲು ಅರ್ಹತೆ ಗಳಿಸುತ್ತಾನೆ. ಹಾಗೆಯೇ ಸೆಕ್ಷನ್ 80D ಅಡಿಯಲ್ಲಿ ವೈದ್ಯಕೀಯ ಭತ್ಯೆ ಪಾವತಿ ಮೇಲೆ ವಿನಾಯ್ತಿ ಪಡೆಯಬಹುದು. ಇನ್ನು ಸೆಕ್ಷನ್ 80E ಅಡಿಯಲ್ಲಿ ಶೈಕ್ಷಣಿಕ ಸಾಲದ ಮೇಲೆ ಪಾವತಿಸಿದ ಬಡ್ಡಿಗೆ ತೆರಿಗೆ ವಿನಾಯ್ತಿ ಪಡೆಯಬಹುದಾಗಿದೆ.
ಒಂದು ವೇಳೆ ನೀವು ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಂಡ್ರೆ ಹಳೆಯ ಪದ್ಧತಿಯಲ್ಲಿ ವಿವರಿಸಿದಂತೆ ಯಾವುದೇ ಸಾಮಾನ್ಯ ತೆರಿಗೆ ವಿನಾಯ್ತಿ ಹಾಗೂ ಕಡಿತವಿಲ್ಲದೆ ಕಡಿಮೆ ಅಥವಾ ರಿಯಾಯ್ತಿ ತೆರಿಗೆ ದರಗಳನ್ನು ಪಡೆಯಬಹುದು. ಹೊಸ ತೆರಿಗೆ ಪದ್ಧತಿಯಲ್ಲಿ 80CCD (2) ಅಡಿಯಲ್ಲಿ ಮಾತ್ರ ತೆರಿಗೆ ಕಡಿತ ಹೊಂದಲು ಅವಕಾಶವಿದೆ.
