Asianet Suvarna News Asianet Suvarna News

ದಿನಗೂಲಿ ನೌಕರನ ಕಿಸ್ಮತ್ ಬದಲಿಸಿದ ಅಪರೂಪದ ಡೈಮಂಡ್!

ದಿನಗೂಲಿ ನೌಕರನ ಹಣೆಬರಹ ಬದಲಿಸಿದ ಅಪರೂಪದ ವಜ್ರ! ಹಲವು ವರ್ಷಗಳ ಸತತ ಪರಿಶ್ರಮದ ಬಳಿಕ ದೊರೆತ ವಜ್ರ! ಮಧ್ಯಪ್ರದೇಶದ ಪನ್ನಾದ ದಿನಗೂಲಿ ನೌಕರ ಮೋತಿಲಾಲ್ ಪ್ರಜಾಪತಿ! ದಿನಗೂಲಿ ನೌಕರನನ್ನು ಕೋಟ್ಯಾಧಿಪತಿಯಾಗಿಸಿದ ಅಪರೂಪದ ವಜ್ರ! ಈ ಅಪರೂಪದ ವಜ್ರದ ಬೆಲೆ ಬರೋಬ್ಬರಿ 1.5 ಕೋಟಿ ರೂ.!  ಮಧ್ಯಪ್ರದೇಶದ ಇತಿಹಾಸದಲ್ಲೇ ದೊರೆತ ಎರಡನೇ ಅತೀ ದೊಡ್ಡ ವಜ್ರ
 

Daily Wager Digs up Rare Diamond in Madhya Pradesh
Author
Bengaluru, First Published Oct 10, 2018, 10:07 PM IST

ಪನ್ನಾ(ಅ.10): ಇದೊಂದು ಡೈಮಂಡ್ ಪಡೆಯಲು ಈ ದಿನಗೂಲಿ ನೌಕರ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಹಲವು ವರ್ಷಗಳ ಸತತ ಪ್ರಯತ್ನದ ಬಳಿಕ ಈತನ ಕೈಗೆ ಈ ವಜ್ರ ಸಿಕ್ಕಾಗ ಆಕಾಶಕ್ಕೆ ಮೂರೇ ಗೇಣು ಎಂಬಷ್ಟು ಖುಷಿಯಾಗಿತ್ತು ಈತನಿಗೆ.

ಮಧ್ಯಪ್ರದೇಶದ ಪನ್ನಾ ಹೇಳಿ ಕೇಳಿ ವಜ್ರದ ಗಣಿಯ ಪ್ರದೇಶ. ಇಲ್ಲಿ ಅಪರೂಪದಲ್ಲೇ ಅಪರೂಪದ ವಜ್ರಗಳ ಭಂಢಾರವೇ ಇದೆ. ಅದರಂತೆ ಮೋತಿಲಾಲ್ ಪ್ರಜಾಪತಿ ಎಂಬ ದಿನಗೂಲಿ ನೌಕರ ಈ ಗಣಿಯಲ್ಲಿ ಕಾರ್ಮಿಕನಾಗಿ ದಶಕಗಳಿಂದ ದುಡಿಯುತ್ತಿದ್ದಾರೆ.

ಮೋತಿಲಾಲ್ ಪ್ರಜಾಪತಿ ಕುಟುಂಬವೇ ಇಲ್ಲಿ ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದು, ಇವರ ತಂದೆ ಮತ್ತು ತಾತ ಕೂಡ ಇದೇ ಗಣಿ ಪ್ರದೇಶದಲ್ಲಿ ತಮ್ಮ ಬೆವರು ಹರಿಸಿದ್ದಾರೆ. ಆದರೆ ಪ್ರಜಾಪತಿ ಅವರ ತಾತ ಈ ಪ್ರದೇಶದಲ್ಲಿ ಚಿಕ್ಕದೊಂದು ಭೂಮಿಯನ್ನು ಕೊಂಡು ಕೊಂಡಿದ್ದು, ಇಲ್ಲಿ ವಜ್ರ ಸಿಗುವ ಆಸೆ ಹೊಂದಿದ್ದರು.

ಆದರೆ ಹಲವು ವರ್ಷಗಳ ಸತತ ಪ್ರಯತ್ನದ ಬಳಿಕ ಮೋತಿಲಾಲ್ ಅವರಿಗೆ ಅಪರೂಪದ ಡೈಮಂಡ್ ದೊರೆತಿದ್ದು, ಇದರ ಬೆಲೆ ಬರೋಬ್ಬರಿ 1.5  ಕೋಟಿ ರೂ ಎನ್ನಲಾಗಿದೆ. ಒಟ್ಟು 42. 59 ಕ್ಯಾರೆಟ್ ತೂಗುವ ಈ ವಜ್ರ ಮಧ್ಯಪ್ರದೇಶದ ಇತಿಹಾಸದಲ್ಲೇ ದೊರೆತ ಎರಡನೇ ಅತೀ ದೊಡ್ಡ ವಜ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

Daily Wager Digs up Rare Diamond in Madhya Pradesh

ಈ ಹಿಂದೆ 1961 ರಲ್ಲಿ 44.55 ಕ್ಯಾರೆಟ್ ತೂಗುವ ವಜ್ರ ದೊರೆತಿದ್ದು, ಇದೇ ಇದುವರೆಗಿನ ಅತ್ಯಂತ ಬೆಲೆ ಬಾಳುವ ವಜ್ರ ಎಂದು ಹೇಳಲಾಗಿದೆ. ಇನ್ನು ಈ ವಜ್ರವನ್ನು ಮೋತಿಲಾಲ್ ಸರ್ಕಾರದ ಸುಪರ್ದಿಗೆ ಒಪ್ಪಿಸಿದ್ದು, ಸರ್ಕಾರ ವಜ್ರದ ಬೆಲೆಯನ್ನು ಮೋತಿಲಾಲ್ ಅವರಿಗೆ ಕೊಡಲಿದೆ.

ತನ್ನ ಜೀವಮಾನವೆಲ್ಲಾ ದಿನಗೂಲಿ ನೌಕರನಾಗಿ ದುಡಿದಿರುವ ಮೋತಿಲಾಲ್, ಇದೀಗ ತಾನು ಸಂಶೋಧಿಸಿದ ವಜ್ರದಿಂದ ಬರುವ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೀಸಲಿಡುವುದಾಗಿ ಹೇಳಿದ್ದಾರೆ.  

Follow Us:
Download App:
  • android
  • ios