Asianet Suvarna News Asianet Suvarna News

ಖಾದ್ಯ ತೈಲದ ಮೇಲೆ ಆಮದು ಸುಂಕ ರಿಯಾಯಿತಿ, ಮತ್ತೆ 6 ತಿಂಗಳು ವಿಸ್ತರಿಸಿದ ಕೇಂದ್ರ ಸರ್ಕಾರ!

ಅದರೊಂದಿಗೆ ಸಂಸ್ಕರಿಸಿದ ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಯ ಮೇಲಿನ ಮೂಲ ಕಸ್ಟಮ್ಸ್ ಸುಂಕವು 17.5% ಆಗಿದ್ದು, 10% ಸಮಾಜ ಕಲ್ಯಾಣ ಸೆಸ್ ಅನ್ನು ಪರಿಗಣಿಸಿ, ಪರಿಣಾಮಕಾರಿ ಸುಂಕವು 19.25% ಗೆ ಆಗಿರಲಿದೆ.
 

concessional import duties on edible oil central government extends by six months till March 2023 san
Author
First Published Sep 3, 2022, 3:40 PM IST

ನವದಹೆಲಿ (ಸೆ. 3): ಭವಿಷ್ಯದಲ್ಲಿ ಎದುರಾಗಬಹುದಾದ ಬೆಲೆಗಳ ಏರಿಕೆಯನ್ನು ತಡೆಯಲು, ಸರ್ಕಾರವು ಖಾದ್ಯ ತೈಲ ಆಮದುಗಳ ಮೇಲಿನ ರಿಯಾಯಿತಿ ಸುಂಕಗಳನ್ನು ಆರು ತಿಂಗಳವರೆಗೆ ಅಂದರೆ, 2023ರ ಮಾರ್ಚ್‌ 31ರವರೆಗೆ ವಿಸ್ತರಣೆ ಮಾಡಿದೆ.ಪ್ರಸ್ತುತ, ಕಚ್ಚಾ ತಾಳೆ, ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಗಳ ಆಮದುಗಳು ಕೇವಲ 5% ಅಗ್ರಿ ಇನ್ಫ್ರಾ ಸೆಸ್ ಮತ್ತು ಅದರ ಮೇಲೆ 10% ಶಿಕ್ಷಣ ಸೆಸ್ ಅನ್ನು ಒಳಗೊಳ್ಳುತ್ತವೆ. ಅಂದರೆ ಒಟ್ಟು ತೆರಿಗೆ ಪ್ರಮಾಣವು 5.5% ಆಗಿದೆ. ಫೆಬ್ರವರಿ 2022 ರಲ್ಲಿ ಹೊರಡಿಸಲಾದ ಅಧಿಸೂಚನೆಯ ಪ್ರಕಾರ ಮೂಲ ಕಸ್ಟಮ್ಸ್ ಸುಂಕ ಮನ್ನಾ ಸೆಪ್ಟೆಂಬರ್ 30 ರವರೆಗೆ ಅನ್ವಯಿಸುತ್ತದೆ. ಪರೋಕ್ಷ ತೆರಿಗೆಗಳು ಮತ್ತು ಸುಂಕಗಳ ಕೇಂದ್ರೀಯ ಮಂಡಳಿಯು ಬುಧವಾರ ಹೊರಡಿಸಿದ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿದ ಖಾದ್ಯ ತೈಲಗಳ ಮೇಲಿನ ರಿಯಾಯಿತಿ ಆಮದು ಸುಂಕವನ್ನು 2023ರ ಮಾರ್ಚ್ 31ರವರೆಗೆ ವಿಸ್ತರಿಸುವುದಾಗಿ ಹೇಳಿದೆ. ಪ್ರಸ್ತುತ, ಶುದ್ಧೀಕರಿಸಿದ ತಾಳೆ ಎಣ್ಣೆಯ ಮೂಲ ಕಸ್ಟಮ್ಸ್ ಸುಂಕವು 12.5% ಆಗಿದ್ದರೆ, ಸಮಾಜ ಕಲ್ಯಾಣ ಸೆಸ್ 10% ಆಗಿದೆ. ಆದ್ದರಿಂದ ಪರಿಣಾಮಕಾರಿ ಸುಂಕವು 13.75% ಆಗಿದೆ. ಅದೇ ರೀತಿ, ಸಂಸ್ಕರಿಸಿದ ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಯ ಮೇಲಿನ ಮೂಲ ಕಸ್ಟಮ್ಸ್ ಸುಂಕವು 17.5% ಆಗಿದ್ದು, 10% ಸಮಾಜ ಕಲ್ಯಾಣ ಸೆಸ್ ಅನ್ನು ಪರಿಗಣಿಸಿ, ಪರಿಣಾಮಕಾರಿ ಸುಂಕವು 19.25% ಆಗಲಿದೆ.

ಈ ಕ್ರಮಕ್ಕೆ ಹೆಚ್ಚುವರಿಯಾಗಿ, ಈ ಹಣಕಾಸು ವರ್ಷ ಮತ್ತು ಮುಂದಿನ ಅವಧಿಯಲ್ಲಿ ಕಚ್ಚಾ ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಗಳ ಸುಂಕ ರಹಿತ ಆಮದುಗಳಿಗೆ ಸರ್ಕಾರವು ಮೇ ತಿಂಗಳಲ್ಲಿ ಅವಕಾಶ ನೀಡಿತ್ತು. ತೆರಿಗೆ ಮನ್ನಾವು ಪ್ರತಿ ಮಾದರಿಯ ತೈಲಕ್ಕೆ ವಾರ್ಷಿಕ 2 ಮಿಲಿಯನ್ ಟನ್ (mt) ಮಿತಿಗೆ ಒಳಪಟ್ಟಿರುತ್ತದೆ, ಇದು ದೇಶೀಯ ಸಂಸ್ಕರಣಾಗಾರಗಳ ಅಗತ್ಯತೆಗಳನ್ನು ಪೂರೈಸಲು ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಸರಬರಾಜುಗಳನ್ನು ಸುಲಭಗೊಳಿಸಲು ಸಾಕಾಗುತ್ತದೆ.

ಭಾರತವು ತನ್ನ ವಾರ್ಷಿಕ ಖಾದ್ಯ ತೈಲ ಬಳಕೆಯ 55% ರಷ್ಟು ಆಮದು ಮಾಡಿಕೊಳ್ಳುತ್ತದೆ. ಖಾದ್ಯ ತೈಲದ ವಾರ್ಷಿಕ ಆಮದು ಸುಮಾರು 13 mt, ಹೆಚ್ಚಾಗಿ ತಾಳೆ ಎಣ್ಣೆ (8 mt), ಸೋಯಾಬೀನ್ (2.7 mt) ಮತ್ತು ಸೂರ್ಯಕಾಂತಿ (2 mt) ಎಣ್ಣೆಯನ್ನು ಆಮದು ಮಾಡಿಕೊಳುತ್ತದೆ.  ತಾಳೆ ಎಣ್ಣೆಯನ್ನು ಹೆಚ್ಚಾಗಿ ಮಲೇಷ್ಯಾ ಮತ್ತು ಇಂಡೋನೇಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದರೆ, ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಗಳನ್ನು ಹೆಚ್ಚಾಗಿ ಅರ್ಜೆಂಟೀನಾ ಮತ್ತು ಉಕ್ರೇನ್‌ನಿಂದ ಆಮದು ಮಾಡಿಕೊಳ್ಳಲಾಗುತ್ತದೆ.

ತೈಲದ (Edible oil) ಅತಿದೊಡ್ಡ ರಫ್ತುದಾರರಾದ ಇಂಡೋನೇಷ್ಯಾ ಏಪ್ರಿಲ್ 28 ರಂದು ತಾಳೆ ಎಣ್ಣೆ ರಫ್ತಿನ ಮೇಲೆ ನಿಷೇಧವನ್ನು ವಿಧಿಸಿದಾಗ ತಾಳೆ ಎಣ್ಣೆಯ (Palm Oil) ಬೆಲೆ ಜಾಗತಿಕವಾಗಿ ತೀವ್ರವಾಗಿ ಏರಿಕೆ ಕಂಡಿತ್ತು. ಅದನ್ನು ಮೂರು ವಾರಗಳ ನಂತರ ತೆಗೆದುಹಾಕಲಾಯಿತು. ಟ್ರೇಡ್‌ ಮಾಹಿತಿಯ ಪ್ರಕಾರ, ಭಾರತದ ಆಮದಿನಲ್ಲಿ 56% ಕ್ಕಿಂತ ಹೆಚ್ಚು ಪಾಲನ್ನು ಹೊಂದಿರುವ ತಾಳೆ ಎಣ್ಣೆಯ ಬೆಲೆಗಳು ಗುರುವಾರ ಒಂದು ಟನ್‌ಗೆ 11% ಕ್ಕಿಂತ ಹೆಚ್ಚು ಕುಸಿದಿದೆ. ಆದರೆ, ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಯ ಬೆಲೆಗಳು ಕ್ರಮವಾಗಿ 6% ಮತ್ತು 12.6% ರಷ್ಟು ಏರಿಕೆಯಾಗಿ ಕ್ರಮವಾಗಿ $1,445/ಟನ್ ಮತ್ತು $1,530/ಟನ್‌ಗೆ ತಲುಪಿವೆ. ಈ ಎರಡು ಭಾರತದ ಖಾದ್ಯ ತೈಲ ಆಮದು ಬಿಲ್‌ನಲ್ಲಿ 43% ರಷ್ಟು ಸಂಯೋಜಿತ ಪಾಲನ್ನು ಹೊಂದಿವೆ.

ಹಬ್ಬಗಳ ಋತು ಶುರು..! ಅಡುಗೆ ಎಣ್ಣೆ ಬೆಲೆಯಲ್ಲಿ 30 ರೂಪಾಯಿ ಇಳಿಕೆ ಮಾಡಿದ ಅದಾನಿ ವಿಲ್ಮರ್‌!

ವಿಶೇಷವಾಗಿ ಕಳೆದ ಮೂರು ತಿಂಗಳಲ್ಲಿ ಜಾಗತಿಕ ಖಾದ್ಯ ತೈಲ ಬೆಲೆಯಲ್ಲಿ ಇಳಿಕೆ ಮತ್ತು ಕಡಿಮೆ ಆಮದು ಸುಂಕಗಳು, ದೇಶೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲಗಳ ಚಿಲ್ಲರೆ ಬೆಲೆಗಳು ಗಣನೀಯವಾಗಿ ಕಡಿಮೆಯಾಗಿದೆ. ಗ್ರಾಹಕ ವ್ಯವಹಾರಗಳ ಇಲಾಖೆಯ ಅಂಕಿಅಂಶಗಳ ಪ್ರಕಾರ, ಜೂನ್ 1 ರಿಂದ ದೇಶೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲಗಳ ಮಾದರಿ ಚಿಲ್ಲರೆ ಬೆಲೆಗಳು - ಸಾಸಿವೆ, ಸೋಯಾ, ಸೂರ್ಯಕಾಂತಿ ಮತ್ತು ತಾಳೆ ಎಣ್ಣೆ - 10-20% ವ್ಯಾಪ್ತಿಯಲ್ಲಿ ಕುಸಿದಿದೆ.

Economic Crisis ಲಂಕಾ ಹಾದಿಯಲ್ಲಿ ಪಾಕಿಸ್ತಾನ, ಆರ್ಥಿಕ ಬಿಕ್ಕಟ್ಟಿನಿಂದ ತುಪ್ಪ, ಖಾದ್ಯ ತೈಲ ಬೆಲೆ ದಾಖಲೆಯ ಗರಿಷ್ಠ ಮಟ್ಟ!

ಸೊಲ್ವೆಂಟ್ ಎಕ್ಸ್‌ಟ್ರಾಕ್ಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ವಿ.ಮೆಹ್ತಾ ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದು, ಅಕ್ಟೋಬರ್‌ನಲ್ಲಿ ದೇಶೀಯ ಖಾರಿಫ್ ಎಣ್ಣೆಕಾಳುಗಳ ಬೆಳೆಗಳಾದ ಸೋಯಾಬೀನ್ ಆಗಮನವನ್ನು ಪ್ರಾರಂಭಿಸಿದಾಗ ಸರ್ಕಾರವು ಸುಂಕ ರಚನೆಯನ್ನು ಮರುಪರಿಶೀಲಿಸಬೇಕಾಗುತ್ತದೆ, ಆದ್ದರಿಂದ ಬೆಲೆಗಳು ಇಳಿತ ಕಾಣುವುದಿಲ್ಲ. ಖಾದ್ಯ ತೈಲ ಮತ್ತು ಕೊಬ್ಬಿನ ವರ್ಗವು ಜುಲೈ 2022 ರಲ್ಲಿ 7.5% ನಷ್ಟು ಹಣದುಬ್ಬರವನ್ನು ಕಂಡಿತು ಆದರೆ ಜೂನ್ 2022 ರಲ್ಲಿ ಅದು 9.36% ಆಗಿತ್ತು, ಕಳೆದ ಒಂದು ವರ್ಷದಲ್ಲಿ ಖಾದ್ಯ ತೈಲದ ದೇಶೀಯ ಬೆಲೆಗಳಲ್ಲಿನ ತೀಕ್ಷ್ಣವಾದ ಏರಿಕೆಯಿಂದಾಗಿ ಇದು ಹೆಚ್ಚಾಗಿ ಕಾರಣವಾಗಿದೆ.

Follow Us:
Download App:
  • android
  • ios