ನವದೆಹಲಿ(ಏ.12): ಕೊರೋನಾ ವೈರಸ್‌ ದೇಶದಲ್ಲಿ ಹರಡುತ್ತಿರುವ ನಡುವೆಯೇ ಆಯುರ್ವೇದ ಉತ್ಪನ್ನವಾದ ‘ಚ್ಯವನಪ್ರಾಶ’ಕ್ಕೆ ಭಾರೀ ಬೇಡಿಕೆ ಬಂದಿದೆ. ಬೇಡಿಕೆ ಶೇ.30ರಿಂದ 40ರಷ್ಟುಹೆಚ್ಚಾಗಿದೆ.

‘ಪತಂಜಲಿ ಆಯುರ್ವೇದ ಉತ್ಪಾದಿಸುವ ‘ಚ್ಯವನಪ್ರಾಶ’ದ ಮಾರಾಟ ಶೇ.400ರಷ್ಟುಹೆಚ್ಚಿದೆ’ ಎಂದು ಪತಂಜಲಿ ಸಂಸ್ಥೆ ಹೇಳಿಕೊಂಡಿದೆ. ಡಾಬರ್‌ ‘ಚ್ಯವನಪ್ರಾಶ’ದ ಬೇಡಿಕೆ ಕೂಡ ಏರಿದ್ದು, ಲಾಕ್‌ಡೌನ್‌ ಇದ್ದರೂ ಚ್ಯವನಪ್ರಾಶವನ್ನು ಹೆಚ್ಚು ಪೂರೈಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ. ಡಾಬರ್‌, ಇಮಾಮಿ, ಬೈದ್ಯನಾಥ, ಪತಂಜಲಿ ಕಂಪನಿಗಳ ಉತ್ಪನ್ನಗಳು ಚ್ಯವನಪ್ರಾಶ ಉತ್ಪಾದಿಸುತ್ತವೆ.

‘ಚ್ಯವನಪ್ರಾಶ’ದಲ್ಲಿ ಸಕ್ಕರೆ, ಜೇನುತುಪ್ಪ, ತುಪ್ಪ, ಎಳ್ಳೆಣ್ಣೆ, ಗಿಡಮೂಲಿಕೆಗಳನ್ನು ಹಾಕಿ ಸಿದ್ಧಪಡಿಸಲಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬ ಕಾರಣಕ್ಕೆ ಇದನ್ನು ಸೇವಿಸಲಾಗುತ್ತದೆ.