₹15 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿಗೆ ಚಿಂತನೆ?: ಮಧ್ಯಮ ವರ್ಗಕ್ಕೆ ಬಂಪರ್ ನೀಡುವ ಸಾಧ್ಯತೆ
ಮಧ್ಯಮ ವರ್ಗದವರ ಮೇಲಿನ ಹೊರೆಯನ್ನು ತಗ್ಗಿಸಿ ಅವರು ಕೊಳ್ಳುವಿಕೆ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ 15 ಲಕ್ಷ ರು.ವರೆಗೆ ಆದಾಯಕ್ಕೆ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲು ಕೇಂದ್ರ ಸರ್ಕಾರ ಚಿಂತಿಸಿದೆ ಎಂದು ವರದಿಗಳು ತಿಳಿಸಿವೆ.
ನವದೆಹಲಿ (ಡಿ.27): ಮಧ್ಯಮ ವರ್ಗದವರ ಮೇಲಿನ ಹೊರೆಯನ್ನು ತಗ್ಗಿಸಿ ಅವರು ಕೊಳ್ಳುವಿಕೆ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ 15 ಲಕ್ಷ ರು.ವರೆಗೆ ಆದಾಯಕ್ಕೆ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲು ಕೇಂದ್ರ ಸರ್ಕಾರ ಚಿಂತಿಸಿದೆ ಎಂದು ವರದಿಗಳು ತಿಳಿಸಿವೆ. ಈ ಕುರಿತ ಘೋಷಣೆಯನ್ನು ಮುಂದಿನ ವರ್ಷ ಫೆ.1ರಂದು ಮಂಡಿಸಲಾಗುವ ಬಜೆಟ್‌ನಲ್ಲಿ ಘೋಷಿಸಲಾಗುವುದು ಎಂದು ಸರ್ಕಾರಿ ಮೂಲಗಳು ಮಾಹಿತಿ ನೀಡಿವೆ. 2020ರಲ್ಲಿ ಹೊಸ ತೆರಿಗೆ ಪದ್ಧತಿ ಜಾರಿಗೂ ಮುನ್ನ ಇದ್ಧ ಆದಾಯ ತೆರಿಗೆ ಪಾವತಿ ವ್ಯವಸ್ಥೆಯಲ್ಲಿ ತೆರಿಗೆ ಪಾವತಿದಾರರಿಗೆ ಮನೆ ಬಾಡಿಗೆ, ವಿಮೆ ಪ್ರೀಮಿಯಂ ಮೊದಲಾದ ವೆಚ್ಚಗಳಲ್ಲಿ ವಿನಾಯ್ತಿ ಇರುತ್ತಿತ್ತು.
ಆದರೆ ತೆರಿಗೆ ದರ ಹೆಚ್ಚಿರುತ್ತಿತ್ತು. 2020ರಲ್ಲಿ ಜಾರಿಗೊಳಿಸಿ ಪದ್ಧತಿಯಲ್ಲಿ ತೆರಿಗೆ ದರ ಕಡಿಮೆ ಮಾಡಲಾಗಿತ್ತು. ಆದರೆ ಮನೆ ಬಾಡಿಗೆ, ವಿಮೆ ಪ್ರೀಮಿಯಂ ಮೇಲಿನ ವಿನಾಯ್ತಿ ರದ್ದುಪಡಿಸಲಾಗಿತ್ತು. ಒಂದು ವೇಳೆ ತೆರಿಗೆ ಪಾವತಿ ಮಿತಿ ಹೆಚ್ಚಳ ಮಾಡಿದಲ್ಲಿ 2020ರಲ್ಲಿ ಪರಿಚಯಿಸಲಾದ ನೂತನ ತೆರಿಗೆ ಪದ್ಧತಿ ಅನ್ವಯ ತೆರಿಗೆ ಪಾವತಿ ಮಾಡುತ್ತಿದ್ದ ಕೋಟ್ಯಂತರ ಮಧ್ಯಮ ವರ್ಗದ ಜನತೆಗೆ ಭಾರೀ ಅನುಕೂಲವಾಗಲಿದೆ. ಈ ಯೋಜನೆಯಡಿ ಪ್ರಸ್ತುತ 3ರಿಂದ15 ಲಕ್ಷ ರು.ವರೆಗಿನ ಆದಾಯಕ್ಕೆ ಶೇ.5ರಿಂದ ಶೆ.20ರವರೆಗೆ ತೆರಿಗೆ ವಿಧಿಸಲಾಗುತ್ತಿದೆ. ಅದಕ್ಕೂ ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ತೆರಿಗೆ ವಿಧಿಸಲಾಗುತ್ತಿದೆ.
ವಿಎಚ್‌ಪಿ ರಾಷ್ಟ್ರವ್ಯಾಪಿ ಚಳವಳಿ: ಹಿಂದೂ ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ಬಿಡಿಸಲು ರಾಷ್ಟ್ರವ್ಯಾಪಿ ಚಳವಳಿ ನಡೆಸುವುದಾಗಿ ವಿಶ್ವ ಹಿಂದೂ ಪರಿಷತ್ ಗುರುವಾರ ಘೋಷಿಸಿದೆ. ಜೊತೆಗೆ ಈ ಕುರಿತು ಜಾಗೃತಿ ಮೂಡಿಸಲು ಆಂಧ್ರಪ್ರದೇಶದ ವಿಜಯವಾಡದಲ್ಲಿ ಜ.5ರಂದು ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದೆ. ಈ ಕುರಿತು ವಿಎಚ್‌ಪಿಯ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ‘ದೇವಸ್ಥಾನಗಳನ್ನು ಹಿಂದೂಗಳೇ ನಿರ್ವಹಿಸುವ ನಿಟ್ಟಿನಲ್ಲಿ ಕಳೆದ 2-3 ವರ್ಷಗಳಿಂದ ಕೆಲಸ ಮಾಡುತ್ತಿದ್ದೆವು.
ಬಿಜೆಪಿಯವರಿಗೆ ವಿರೋಧಿಸುವುದು ಬಿಟ್ಟು ಬೇರೆ ಕೆಲಸ ಇಲ್ಲ: ಎಂ.ಲಕ್ಷ್ಮಣ್
ಈಗಾಗಲೇ ಹೈ ಕೋರ್ಟ್‌ಗಳ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು, ಸುಪ್ರೀಂ ಕೋರ್ಟ್‌ನ ವಕೀಲರು, ಧಾರ್ಮಿಕ ನಾಯಕರು ಹಾಗೂ ಪರಿಷತ್ ಸದಸ್ಯರ ಸಲಹೆಯಂತೆ ಕರಡನ್ನು ಸಿದ್ಧಪಡಿಸಲಾಗಿದೆ. ಇದರ ಪ್ರತಿಯನ್ನು ಕೆಲ ದಿನಗಳ ಹಿಂದೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ನೀಡಿದ್ದೇನೆ’ ಎಂದರು. ಜತೆಗೆ, ‘ದೇವಸ್ಥಾನಗಳನ್ನು ಸಮಾಜಕ್ಕೇ ಮರಳಿಸುವ ಇಂಗಿತವನ್ನು ಕರ್ನಾಟಕ(ಬಿಜೆಪಿ) ಸರ್ಕಾರ ವ್ಯಕ್ತಪಡಿಸಿತ್ತು, ಹೀಗಾದರೆ ಅಧಿಕಾರದಲ್ಲಿರುವ ಪಕ್ಷಕ್ಕೆ ಚುನಾವಣೆಯಲ್ಲಿ ಸೋಲಾಗಲಿದ್ದ ಕಾರಣ ಈ ವಿಷಯವನ್ನು ಅಲ್ಲಿಯೇ ಕೈಬಿಡಲಾಯಿತು’ ಎಂದರು.