Asianet Suvarna News Asianet Suvarna News

ಟಿಡಿಎಸ್ 26Q ಫಾರ್ಮ್ ಸಲ್ಲಿಕೆ ಗಡುವು ವಿಸ್ತರಣೆ; ನ.30ರ ತನಕ ಕಾಲಾವಕಾಶ

*ಟಿಡಿಎಸ್ 26Q ಫಾರ್ಮ್ ಸಲ್ಲಿಕೆಗೆ ಈ ಹಿಂದೆ ಅ.31 ಅಂತಿಮ ಗಡುವು
*ಉಳಿದ ಟಿಡಿಎಸ್ ಫಾರ್ಮ್ ಗಳ ಸಲ್ಲಿಕೆ ಗಡುವು ವಿಸ್ತರಣೆಯಾಗಿಲ್ಲ
*ಉದ್ಯಮ ಐಟಿಆರ್ ಸಲ್ಲಿಕೆ ಗಡುವು ಒಂದು ವಾರಗಳ ಕಾಲ ವಿಸ್ತರಣೆ
 

CBDT Extends Due Date For Filing Form 26Q Till Nov 30 Deadline For Other TDS Forms Unchanged
Author
First Published Nov 3, 2022, 4:28 PM IST

ನವದೆಹಲಿ (ನ.03): 2022ರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದ ವೇತನ ಹೊರತಾದ ಪಾವತಿಗಳ ಟಿಡಿಎಸ್ ಸ್ಟೇಟ್ ಮೆಂಟ್ ಸಲ್ಲಿಕೆ ಗಡುವನ್ನು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ನವೆಂಬರ್ 30ರ ತನಕ ವಿಸ್ತರಿಸಿದೆ. ಈ ಹಿಂದೆ ಅಕ್ಟೋಬರ್ 31 ಅಂತಿಮ ಗಡುವಾಗಿತ್ತು. ಆದರೆ, ಈ ತ್ರೈಮಾಸಿಕದ ಉಳಿದ ಟಿಡಿಎಸ್ ಫಾರ್ಮ್ ಗಳ ಸಲ್ಲಿಕೆ ಗಡುವು ಈ ಹಿಂದಿನಂತೆ ಅಕ್ಟೋಬರ್ 31 ಆಗಿದ್ದು, ಯಾವುದೇ ಬದಲಾವಣೆ ಮಾಡಿಲ್ಲ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. 'ಪರಿಷ್ಕೃತ ಹಾಗೂ ನವೀಕರಿಸಿದ 26ಕ್ಯು ಟಿಡಿಎಸ್ ಸ್ಟೇಟ್ ಮೆಂಟ್ ಫೈಲ್ ಮಾಡುವಾಗಿನ ತೊಂದರೆಗಳನ್ನು ಗಮನಿಸಿ  ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) 2022-23 ಹಣಕಾಸು ಸಾಲಿನ ಎರಡನೇ ತ್ರೈಮಾಸಿಕದ 26 ಕ್ಯು ಫಾರ್ಮ್ ಫೈಲ್ ಮಾಡುವ ಅಂತಿಮ ಗಡುವನ್ನು 2022ರ ಅಕ್ಟೋಬರ್ 31ರಿಂದ 2022 ನವೆಂಬರ್ 30ರ ತನಕ ವಿಸ್ತರಿಸಿದೆ' ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.  ಫಾರ್ಮ್ 26 ಕ್ಯು ಒಂದು ತ್ರೈಮಾಸಿಕದಲ್ಲಿ ಪಾವತಿಗಳ ಮೇಲೆ ಮಾಡಲಾದ ಒಟ್ಟು ಪಾವತಿ ಹಾಗೂ ತೆರಿಗೆ ಕಡಿತದ ಮಾಹಿತಿಗಳನ್ನು ಒಳಗೊಂಡಿರುತ್ತದೆ. ಹಾಗೆಯೇ ಇನ್ನೊಂದು ಟ್ವೀಟ್ ನಲ್ಲಿ 2022ರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದ ಇತರ ಟಿಡಿಎಸ್ ಫಾರ್ಮ್ ಗಳನ್ನು ಫೈಲ್ ಮಾಡಲು 2022ರ ಅಕ್ಟೋಬರ್ 31 ಕೊನೆಯ ದಿನಾಂಕವಾಗಿದೆ ಎಂಬ ಮಾಹಿತಿಯನ್ನು ಐಟಿ ಇಲಾಖೆ ನೀಡಿದೆ.

ಚಲನ್ (Challan) ಹೊಂದಾಣಿಕೆಯಾಗದಿರೋದು, ಚಲನ್ ದೃಢೀಕರಣ ಆಗದಿರೋದು ಹಾಗೂ ಚಲನ್ ಗಳ ಅಟೋ ಹೊಂದಾಣಿಕೆ (Auto adjustment) ಸೇರಿದಂತೆ ಫಾರ್ಮ್ 26 ಕ್ಯು ಸಲ್ಲಿಕೆಗೆ ತೆರಿಗೆದಾರರು ಸಾಕಷ್ಟು ತಾಂತ್ರಿಕ ತೊಂದರೆಗಳನ್ನು (Technical problems) ಎದುರಿಸಿದ್ದರು. ಇದೇ ಕಾರಣದಿಂದ ಫಾರ್ಮ್ 26ಕ್ಯು ನಲ್ಲಿ ಟಿಡಿಎಸ್ ರಿಟರ್ನ್ ಸಲ್ಲಿಕೆ ಅಸಾಧ್ಯವಾಗಿತ್ತು. 

ಒಂದೇ ಐಟಿಆರ್ ಅರ್ಜಿ ನಮೂನೆ ಭರ್ತಿ ಮಾಡಿದ್ರೆ ಸಾಕು; ಏಕರೂಪದ ಫಾರ್ಮ್ ಗೆ ಐಟಿ ಇಲಾಖೆ ಪ್ರಸ್ತಾವನೆ

ಉದ್ಯಮ ಐಟಿಆರ್ ಸಲ್ಲಿಕೆ ಗಡುವು ವಿಸ್ತರಣೆ
ಇನ್ನು 2022-23ನೇ ಮೌಲ್ಯಮಾಪನ ವರ್ಷದ ಉದ್ಯಮ ಐಟಿಆರ್ (Business ITR) ಸಲ್ಲಿಕೆ ಗಡುವನ್ನು ಕೂಡ ಸರ್ಕಾರ ಬುಧವಾರ ವಿಸ್ತರಣೆ ಮಾಡಿತ್ತು. ಈ ಹಿಂದೆ ಉದ್ಯಮ ಐಟಿಆರ್ ಸಲ್ಲಿಕೆಗೆ ಅಕ್ಟೋಬರ್ 31 ಅಂತಿಮ ಗಡುವಾಗಿತ್ತು. ಈಗ ಇದನ್ನು ಸರ್ಕಾರ ನವೆಂಬರ್ 7ರ ತನಕ ವಿಸ್ತರಿಸಿದೆ. ಸಿಬಿಡಿಟಿ (CBDT) ಅಧಿಸೂಚನೆಯಲ್ಲಿ (Circular) ಈ ಬಗ್ಗೆ ಮಾಹಿತಿ ನೀಡಲಾಗಿದೆ. ಅಡಿಟ್ ಗೊಳಪಡುವ ಖಾತೆಗಳನ್ನು ಹೊಂದಿರುವ ಉದ್ಯಮಿಗಳು ಹಾಗೂ ವ್ಯಕ್ತಿಗಳಿಗೆ ಅಡಿಟ್ ವರದಿ ಸಲ್ಲಿಕೆಗ ನೀಡಿದ್ದ ಗಡುವನ್ನು ಕಳೆದ ತಿಂಗಳು ಸಿಬಿಡಿಟಿ (CBDT) ವಿಸ್ತರಣೆ ಮಾಡಿತ್ತು. ಹೀಗಾಗಿ ಈಗ ಐಟಿಆರ್ (ITR) ಫೈಲ್ ಮಾಡುವ ಗಡುವನ್ನು ಕೂಡ ವಿಸ್ತರಣೆ ಮಾಡಲಾಗಿದೆ. ಇದ್ರಿಂದ ಉದ್ಯಮಿಗಳು ಹಾಗೂ ಚಾರ್ಟೆಡ್ ಅಕೌಂಟೆಂಟ್ ಗಳಿಗೆ  (CA) ಅಡಿಟ್ ವರದಿ (Audit report) ಸಿದ್ಧಪಡಿಸಲು ಒಂದು ವಾರಗಳ ಹೆಚ್ಚುವರಿ ಕಾಲಾವಕಾಶ ದೊರೆತಂತಾಗಿದೆ. ಕೆಲವು ಉದ್ಯಮಿಗಳು (Business man) ಅಥವಾ ವ್ಯಕ್ತಿಗಳ ಲೆಕ್ಕಚಾರ ಪುಸ್ತಕಗಳನ್ನು ಅಡಿಟ್ ಗೊಳಪಡಿಸೋದು ಅಗತ್ಯ. ಇಂಥವರು ಚಾರ್ಟೆಡ್ ಅಕೌಂಟೆಂಟ್ ಬಳಿ ತಮ್ಮ ಖಾತೆಗಳನ್ನು ಅಡಿಟ್ ಮಾಡಿಸಿ ನಿರ್ದಿಷ್ಟ ಫಾರ್ಮ್ ನಲ್ಲಿ ಸಲ್ಲಿಕೆ ಮಾಡಬೇಕು. 

ಕೇಂದ್ರ ಸರ್ಕಾರಿ ಪಿಂಚಣಿದಾರರ ಡಿಆರ್ ಶೇ.396ಕ್ಕೆ ಹೆಚ್ಚಳ; ಆದ್ರೆ ಇವರಿಗೆ ಮಾತ್ರ ಅನ್ವಯ

ವೇತನದಾರ ತೆರಿಗೆದಾರರಿಗೆ 2022-23ರ ಮೌಲ್ಯಮಾಪನ ವರ್ಷದ ಐಟಿಆರ್ ಸಲ್ಲಿಕೆಗೆ ಜುಲೈ 31 ಅಂತಿಮ ಗಡುವಾಗಿತ್ತು. ಆ ಬಳಿಕ ವಿಳಂಬ ಐಟಿಆರ್ ಸಲ್ಲಿಕೆ ಮಾಡಲು ಅವಕಾಶವಿದ್ರೂ ಕೂಡ ಆದಾಯ ತೆರಿಗೆ ಇಲಾಖೆ ದಂಡ ವಿಧಿಸುತ್ತದೆ. 
 

Follow Us:
Download App:
  • android
  • ios