Asianet Suvarna News Asianet Suvarna News

ಉದ್ಯೋಗಿಗಳಿಗೆ ಸ್ಯಾಲರಿ ನೀಡಲು ಸ್ವಂತ ಮನೆಯನ್ನೇ ಅಡವಿಟ್ಟ ಬೈಜುಸ್ ಸಂಸ್ಥಾಪಕ!

ಬೈಜುಸ್ ಎಜುಟೆಕ್ ಕಂಪನಿ ಇದೀಗ ಸಾಲದ ಸುಳಿಯಲ್ಲಿ ಸಿಲುಕಿದೆ. ಉದ್ಯೋಗಿಗಳಿಗೆ ವೇತನ ನೀಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ತೀವ್ರ ಹಿನ್ನಡೆ ಅನುಭವಿಸುತ್ತಿರುವ ಬೈಜುಸ್ ಸಂಸ್ಥಾಪಕ ರವೀಂದ್ರನ್ ಇದೀಗ ತಮ್ಮ ಸ್ವಂತ ಮನೆ ಹಾಗೂ ಕುಟುಂಬದವರ ಮನೆಯನ್ನು ಶೂರಿಟಿ ನೀಡಿ ಫಂಡ್ ರೈಸ್‌ಗೆ ಮುಂದಾಗಿದ್ದಾರೆ.

Cash crunch in Byjus Founder Raveendran pledge house to raise fund for 15k Employee salary dues ckm
Author
First Published Dec 4, 2023, 8:39 PM IST

ಬೆಂಗಳೂರು(ಡಿ.04) ಎಜುಟೆಕ್ ಕಂಪನಿ ಬೈಜುಸ್ ಸಾಲು ಸಾಲು ಸವಾಲು ಎದುರಿಸುತ್ತಿದೆ. ಆನ್‌ಲೈನ್ ಶಿಕ್ಷಣ, ಕೋಚಿಂಗ್, ಮಾರ್ಗದರ್ಶನ ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡಿದ್ದ ಬೈಜುಸ್ ಕಂಪನಿ ಇದೀಗ ಸಾಲದ ಸುಳಿಯಲ್ಲಿದೆ. 22 ಬಿಲಿಯನ್ ಡಾಲರ್ ಕಂಪನಿ ಇದೀಗ 3 ಸಾವಿರ ಡಾಲರ್‌ಗೆ ಕುಸಿದಿದೆ. ಕಳೆದ ಹಲವು ತಿಂಗಳಿನಿಂದ ಉದ್ಯೋಗಿಗಳಿಗೆ ಸರಿಯಾಗಿ ವೇತನ ನೀಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಇದೀಗ ಉದ್ಯೋಗಿಗಳಿಗೆ ಸ್ಯಾಲರಿ ನೀಡಲು ಬೈಜುಸ್ ಸಂಸ್ಥಾಪಕ ರವೀಂದ್ರನ್ ತಮ್ಮ ಸ್ವಂತ ಮನೆ ಹಾಗೂ ಕುಟುಂಬದವರ ಮನೆಯನ್ನು ಶೂರಿಟಿಯಾಗಿ ನೀಡಿ ಫಂಡ್ ರೈಸ್ ಮಾಡಲು ಮುಂದಾಗಿದ್ದಾರೆ.

ಬೈಜುಸ್ ಬರೋಬ್ಬರಿ 15,000 ಉದ್ಯೋಗಿಗಳಿಗೆ ವೇತನ ಬಾಕಿ ಉಳಿಸಿದೆ. ಸದ್ಯ ಬೈಜುಸ್ ಕಂಪನಿಯ ಉದ್ಯೋಗಳಿಗೆ ಸ್ಯಾಲರಿ ಹಾಗೂ ಕಂಪನಿ ಮುನ್ನಡೆಸಲು ತಕ್ಷಣವೇ 12 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದಷ್ಟು ಅವಶ್ಯಕತೆ ಇದೆ. ಹೀಗಾಗಿ ಬೆಂಗಳೂರು ದಕ್ಷಿಣದಲ್ಲಿರುವ  2 ಮನೆ, ನಿರ್ಮಾಣ ಹಂತದಲ್ಲಿರುವ ವಿಲ್ಲಾ ಸೇರಿದಂತೆ ಕುಟುಂಬಸ್ಥರ ಕೆಲ ಮನೆಗಳನ್ನು ಅಡವಿಟ್ಟಿದ್ದಾರೆ.

9,000 ಕೋಟಿ ರೂ ದಂಡ ಪಾವತಿಗೆ ಇಡಿ ನೋಟಿಸ್ ವರದಿ, ಸ್ಪಷ್ಟನೆ ನೀಡಿದ ಕಂಪನಿ!

ಬೈಜು ರವೀಂದ್ರನ ಕಂಪನಿಯನ್ನು ಉಳಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಕೊರೋನಾ ಹಾಗೂ ಅದಕ್ಕಿಂತ ಮೊದಲು ಬೈಜುಸ್ ದೇಶದ ಅತೀ ದೊಡ್ಡ ಎಜುಟೆಕ್ ಕಂಪನಿಯಾಗಿ ಬೆಳೆದಿತ್ತು. ಸಾವಿರಾರು ಕೋಟಿ ರೂಪಾಯಿ ವ್ಯವಹಾರದಲ್ಲಿ ತೊಡಗಿಸಿಕೊಂಡಿತ್ತು. ಇದೀಗ ಆರ್ಥಿಕ ನಷ್ಟ, ಸಾಲದ ಸುಳಿ, ಕಾನೂನು  ಹೋರಾಟ ಸೇರಿದಂತೆ ಹಲವು ಸಂಕಷ್ಟಗಳು ಎದುರಾಗಿದೆ.

5 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದಷ್ಟು ಆಸ್ತಿ ಹೊಂದಿದ್ದ ರವೀಂದ್ರನ್ ಇದೀಗ 400 ಮಿಲಿಯನ್ ಡಾಲರ್ ನಷ್ಟು ಆರ್ಥಿಕ ನಷ್ಟದಲ್ಲಿದ್ದಾರೆ. ಉದ್ಯೋಗಿಗಳು ವೇತನ ಸಿಗದೆ ಪರದಾಡುವಂತಾಗಿದೆ. ಹಲವರು ಕಂಪನಿ ತೊರೆದಿದ್ದಾರೆ. ಉದ್ಯೋಗಿಗಳ ಕಂಪನಿ ತೊರೆಯುವ ಮುನ್ನ ನಷ್ಟದಲ್ಲಿರುವ ಕಂಪನಿಯನ್ನು ಸರಿದೂಗಿಸಿ ಮುನ್ನಡೆಸಲು ರವೀಂದ್ರನ್ ಹೆಣಗಾಡುತ್ತಿದ್ದಾರೆ.

ಪ್ರತಿಷ್ಠಿತ BYJUS ಟ್ಯೂಷನ್ ಸೆಂಟರ್‌ನಿಂದ ಮಾನಸಿಕ ಕಿರುಕುಳ; ವಿದ್ಯಾರ್ಥಿನಿ ಪೋಷಕರು ಕಚೇರಿಯತ್ತ ಬರೋದು ಕಂಡು ಸಿಬ್ಬಂದಿ ಪರಾರಿ!

ಕೊರೋನಾ ಸಮಯದಲ್ಲಿ ಬೈಜುಸ್ ಆದಾಯದಲ್ಲಿ ದಾಖಲೆ ಬರೆದಿತ್ತು. ಕೊರೋನಾದಿಂದ ಆನ್‌ಲೈನ್ ಶಿಕ್ಷಣ ದೇಶಾದ್ಯಂತ ಚಾಲ್ತಿಗೆ ಬಂದಿತ್ತು. ಇದು ಬೈಜುಸ್ ಬಂಡವಾಳವನ್ನು ಹೆಚ್ಚಿಸಿತ್ತು. ಆದರೆ ಕೊರೋನಾ ಸರಿಯುತ್ತಿದ್ದಂತೆ ಬೈಜುಸ್ ಪತನ ಆರಂಭಗೊಂಡಿತ್ತು. ಉದ್ಯೋಗ ಕಡಿತ ಸೇರಿದಂತೆ ಹಲವು ಕಾಸ್ಟ್ ಕಟ್ಟಿಂಗ್ ಕ್ರಮಗಳನ್ನು ಕಂಪನಿ ತೆಗೆದುಕೊಂಡರೂ ಸಾಲದ ಸುಳಿಯಿಂದ ಹೊರಬರಲು ಸಾಧ್ಯವಾಗಲಿಲ್ಲ. ಹಲವು ಹೂಡಿಕೆದಾರರ ಹಿಂದೆ ಸರಿದಿದ್ದಾರೆ. ಇದೀಗ ರವೀಂದ್ರನ್ ಹೋರಾಟ ತೀವ್ರಗೊಳಿಸಿದ್ದಾರೆ. 

Follow Us:
Download App:
  • android
  • ios