ಏರಿಂಡಿಯಾದ 12,000 ಕೋಟಿ ವಿದೇಶಿ ಆಸ್ತಿ ಕೇರ್ನ್‌ ಪಾಲು ಸಾಧ್ಯತೆ!

* ತೆರಿಗೆ ವಿವಾದಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಭಾರತ ಸರ್ಕಾರದ ವಿರುದ್ಧ ಜಯ ಸಾಧಿಸಿದ ಕೇರ್ನ್‌ ಜಯ 

* ಏರಿಂಡಿಯಾದ 12,000 ಕೋಟಿಯ ವಿದೇಶಿ ಆಸ್ತಿ ಕೇರ್ನ್‌ ಪಾಲು ಸಾಧ್ಯತೆ

* ಕೇರ್ನ್‌ ವಿರುದ್ಧ ಕಾನೂನು ಹೋರಾಟಕ್ಕೆ ಭಾರತವೂ ಸಿದ್ಧತೆ

Cairn sets eyes on piercing Air India begins process to seize Indian overseas assets pod

ನವದೆಹಲಿ(ಮೇ.16): ಏರಿಂಡಿಯಾಕ್ಕೆ ಸೇರಿದ ವಿದೇಶದಲ್ಲಿರುವ .12 ಸಾವಿರ ಕೋಟಿಗೂ ಮಿಗಿಲಾದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ನಿಟ್ಟಿನಲ್ಲಿ ಕೇರ್ನ್‌ ಸಂಸ್ಥೆ ಅಮೆರಿಕದ ಕೋರ್ಟ್‌ ಮೆಟ್ಟಿಲೇರಿದೆ.

ತೆರಿಗೆ ವಿವಾದಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಭಾರತ ಸರ್ಕಾರದ ವಿರುದ್ಧ ಜಯ ಸಾಧಿಸಿದ ಕೇರ್ನ್‌ ಜಯ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕೇರ್ನ್‌ ಸಂಸ್ಥೆಗೆ 12 ಸಾವಿರ ಕೋಟಿ ರು. ಪಾವತಿಸುವಂತೆ ಮಧ್ಯಸ್ಥಿಕೆ ನ್ಯಾಯಮಂಡಳಿ ಭಾರತ ಸರ್ಕಾರಕ್ಕೆ ಸೂಚಿಸಿತ್ತು. ಆದರೆ ಇದನ್ನು ಪಾಲನೆ ಮಾಡದ ಭಾರತ ಸರ್ಕಾರದ ವಿರುದ್ಧ ಕೇರ್ನ್‌, ಅಮೆರಿಕದ ನ್ಯೂಯಾರ್ಕ್ನ ಜಿಲ್ಲಾ ನ್ಯಾಯಾಲಯದಲ್ಲಿ ಕೇಸ್‌ ಹಾಕಿದೆ.

ಜೊತೆಗೆ ಹಣ ವಸೂಲಿ ನಿಟ್ಟಿನಲ್ಲಿ ಭಾರತ ಸರ್ಕಾರಕ್ಕೆ ಸೇರಿದ ಏರ್‌ಇಂಡಿಯಾದ ವಿಮಾನಗಳು ಅದರ ವಿದೇಶಿ ಆಸ್ತಿಯನ್ನು ಗುರುತಿಸಿ ನ್ಯಾಯಾಲಯಕ್ಕೆ ಸಲ್ಲಿಸಿದೆ. ಒಂದು ವೇಳೆ ಅಮೆರಿಕ ಕೋರ್ಟ್‌ನಲ್ಲಿ ಕೇರ್ನ್‌ ಸಂಸ್ಥೆ ಜಯವಾದರೆ ಏರ್‌ಇಂಡಿಯಾದ ಸುಮಾರು 12000 ಕೋಟಿ ರು. ಮೌಲ್ಯದ ಆಸ್ತಿ ಕೇರ್ನ್‌ ಪಾಲಾಗಲಿದೆ.

Latest Videos
Follow Us:
Download App:
  • android
  • ios