BSNL ತನ್ನ ಬಳಕೆದಾರರಿಗೆ 84 ದಿನಗಳ ವ್ಯಾಲಿಡಿಟಿಯ ಹೊಸ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಈ ಪ್ಲಾನ್‌ನಲ್ಲಿ ಅನ್‌ಲಿಮಿಟೆಡ್ ಕಾಲ್, ಉಚಿತ SMS ಮತ್ತು 252GB ಡೇಟಾ ಲಭ್ಯವಿದೆ, ಇದು ಖಾಸಗಿ ಟೆಲಿಕಾಂ ಕಂಪನಿಗಳಿಗೆ ಪೈಪೋಟಿ ನೀಡುವಂತಿದೆ.
ನವದೆಹಲಿ: ಬಿಎಸ್ಎನ್ಎಲ್ ತನ್ನ ಕೋಟ್ಯಂತರ ಬಳಕೆದಾರರಿಗೆ ಕಡಿಮೆ ಬೆಲೆಯಲ್ಲಿ ಮತ್ತು ದೀರ್ಘ ವ್ಯಾಲಿಡಿಟಿಯ ಪ್ಲಾನ್ ಘೋಷಿಸಿದೆ. ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ 84 ದಿನ ವ್ಯಾಲಿಡಿಯ ಹೊಸ ಪ್ಲಾನ್ ಬಿಡುಗಡೆಗೊಳಿಸಿದೆ. ಈ ಪ್ಲಾನ್‌ನಲ್ಲಿ ಗ್ರಾಹಕರಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಪ್ರತಿದಿನ ಉಚಿತವಾಗಿ 100 ಎಸ್‌ಎಂಎಸ್, 3GB ಹೈ ಸ್ಪೀಡ್ ಡೇಟಾ ಸಿಗಲಿದೆ. ಬಳಕೆದಾರರಿಗೆ ಈ ಹೊಸ ಪ್ಲಾನ್‌ನಲ್ಲಿ ಒಟ್ಟು 252GB ಡೇಟಾ ಸಿಗಲದೆ. ಈ ಮೂಲಕ ಖಾಸಗಿ ಟೆಲಿಕಾಂ ಕಂಪನಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. ಮೂರು ಖಾಸಗಿ ಟೆಲಿಕಾಂ ಕಂಪನಿಗಳಿಗಿಂದ ಈ ಪ್ಲಾನ್ ಅತಿ ಕಡಿಮೆ ಬೆಲೆಯನ್ನು ಹೊಂದಿದೆ.
ಭಾರತ ಸಂಚಾರ ನಿಗಮ ಲಿಮಿಟೆಡ್ ತನ್ನ ವ್ಯಾಪ್ತಿಯನ್ನು ಹಂತ ಹಂತವಾಗಿ ವಿಸ್ತರಣೆ ಮಾಡಿಕೊಳ್ಳುತ್ತಿದೆ. 3G ನೆಟ್‌ವರ್ಕ್ ನಿಂದ 4G ನೆಟ್‌ವರ್ಕ್‌ಗೆ ಬಿಎಸ್ಎನ್ಎಲ್ ಬದಲಾಗುತ್ತಿದೆ. ಈ ಸಂಬಂಧ 4G ಟವರ್ ಅಳವಡಿಕೆ ಕಾರ್ಯವನ್ನು ಕ್ಷಿಪ್ರವಾಗಿ ಮಾಡುತ್ತಿದೆ. ಸರ್ಕಾರಿ ಕಂಪನಿ ಇದುವರೆಗೂ 75 ಸಾವಿರ 4G ಟವರ್ ಅಳವಡಿಕೆ ಮಾಡಿದೆ. ಶೀಘ್ರದಲ್ಲಿಯೇ ಈ ಸಂಖ್ಯೆ 1 ಲಕ್ಷಕ್ಕೆ ಏರಿಕೆಯಾಗಲಿದೆ ಎಂದು ವರದಿಯಾಗಿದೆ.
84 ದಿನದ ಹೊಸ ಪ್ಲಾನ್
ಬಿಎಸ್ಎನ್ಎಲ್ ತನ್ನ ಹೊಸ ಪ್ಲಾನ್ ಬಗ್ಗೆ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ. ಈ ಹೊಸ ಪ್ಲಾನ್ ಬೆಲೆ 599 ರೂಪಾಯಿ ಆಗಿದ್ದು, 84 ದಿನದ ವ್ಯಾಲಿಡಿಟಿಯನ್ನು ಹೊಂದಿದೆ. ಈ ಹೊಸ ಪ್ಲಾನ್‌ನ್ನು ಬಿಎಸ್ಎನ್ಎಲ್ ಸೂಪರ್ ರೀಚಾರ್ಜ್ ಎಂದು ಕರೆದಿದೆ. ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕಾಲ್ ಮತ್ತು ನ್ಯಾಶನಲ್ ರೋಮಿಂಗ್ ಲಾಭವೂ ಸಹ ಸಿಗಲಿದೆ. ಪ್ರತಿದಿನ 3G ಡೇಟಾದಂತೆ 84 ದಿನಕ್ಕೆ 252GB ಡೇಟಾ ಪ್ಯಾಕ್ ನಿಮ್ಮದಾಗಲಿದೆ.
ಇದನ್ನೂ ಓದಿ: ಕಡಿಮೆ ಬೆಲೆಯಲ್ಲಿ 6 ತಿಂಗಳ ಪ್ಲಾನ್ ಪರಿಚಯಿಸಿದ ಬಿಎಸ್‌ಎನ್‌ಎಲ್; ಇಷ್ಟಕ್ಕೆ ಅಷ್ಟು ಡೇಟಾನಾ?
ಬಿಎಸ್‌ಎನ್‌ಎಲ್ ತನ್ನ ಪ್ರತಿ ಮೊಬೈಲ್ ಪ್ಲಾನ್ ಜೊತೆಯಲ್ಲಿ ಉಚಿತವಾಗಿ BiTVಯ ಆಫರ್ ನೀಡುತ್ತದೆ. BiTV ಯಲ್ಲಿ ಗ್ರಾಹಕರು 400ಕ್ಕೂ ಅಧಿಕ ಲೈವ್ ಟಿವಿ ಚಾನೆಲ್ ವೀಕ್ಷಣೆ ಮಾಡಬಹುದು. ಮೊಬೈಲ್ BiTV ಆಕ್ಸೆಸ್ ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ. ಇತ್ತೀಚೆಗಷ್ಟೇ ಬಿಎಸ್‌ಎನ್‌ಎಲ್ ಈ ಉಚಿತ ಆಕ್ಸೆಸ್‌ನ್ನು ಭಾರತದ ಎಲ್ಲಾ ಭಾಗಕ್ಕೂ ಲಾಂಚ್ ಮಾಡಿದೆ. BiTV ಜೊತೆಯಲ್ಲಿ ಬಿಎಸ್‌ಎನ್‌ಎಲ್ ಬಳಕೆದಾರರಿಗೆ ಬಹುತೇಕ ಎಲ್ಲಾ ರೀಚಾರ್ಜ್ ಪ್ಲಾನ್‌ಗಳಲ್ಲಿ ಹೆಚ್ಚುವರಿ ಲಾಭಗಳು ಸಿಗುತ್ತವೆ.
ಛತ್ತೀಸ್‌ಗಢದ ನಕ್ಸಲ್ ಪೀಡಿತ ಪ್ರದೇಶವಾದ ಸುಕ್ಮಾದಲ್ಲಿ BSNL ತನ್ನ 4G ಮೊಬೈಲ್ ಟವರ್ ಸ್ಥಾಪಿಸಿದೆ. BSNL ಈ ಮೊಬೈಲ್ ಟವರ್ ಅನ್ನು ಸಿಆರ್‌ಪಿಎಫ್‌ನ ಮೂಲ ಶಿಬಿರದಲ್ಲಿ ಸ್ಥಾಪಿಸಿದೆ, ಇದರಿಂದ ನಕ್ಸಲ್ ಪೀಡಿತ ಪ್ರದೇಶದಲ್ಲಿ ಉತ್ತಮ ಸಂಪರ್ಕವನ್ನು ಒದಗಿಸಬಹುದು. ಅಲ್ಲದೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 4G ಮೊಬೈಲ್ ಟವರ್‌ಗಳನ್ನು ಸ್ಥಾಪಿಸುವ ಕೆಲಸವನ್ನು ಸರ್ಕಾರಿ ಟೆಲಿಕಾಂ ಕಂಪನಿ ಮಾಡಿದೆ.
ಇದನ್ನೂ ಓದಿ: BSNL ಬಳಕೆದಾರರಿಗೆ ಗುಡ್‌ನ್ಯೂಸ್; 4 ರೂಪಾಯಿಯ ಪ್ಲಾನ್ ಕಂಡು ಖಾಸಗಿ ಕಂಪನಿಗಳು ಶಾಕ್!
