Asianet Suvarna News Asianet Suvarna News

‘ಭಾರತ್‌ ಫೈಬರ್‌’ ಫ್ರಾಂಚೈಸಿಗೆ ಬಿಎಸ್‌ಎನ್‌ಎಲ್‌ ಆಹ್ವಾನ

ದಕ್ಷಿಣ ಕನ್ನಡ ಜಿಲ್ಲಾದ್ಯಂತ ಆಯ್ದ ಸ್ಥಳಗಳಲ್ಲಿ ಗ್ರಾಹಕರಿಗೆ ಭಾರತ್‌ ಫೈಬರ್‌ ಮೂಲಕ ಗುಣಮಟ್ಟದ ಇಂಟರ್ನೆಟ್‌ ಸೇವೆ ಒದಗಿಸಲು ಬಿಎಸ್ಸೆನ್ನೆಲ್‌ ಮುಂದಾಗಿದ್ದು, ಇದಕ್ಕಾಗಿ ಫ್ರಾಂಚೈಸಿ ಪಾಲುದಾರಿಕೆಗೆ ಆಸಕ್ತರನ್ನು ಆಹ್ವಾನಿಸಿದೆ. 

BSNL Invites  for Bharat Fiber Franchise gow
Author
First Published Oct 16, 2022, 1:30 PM IST

ಮಂಗಳೂರು (ಅ.16): ದಕ್ಷಿಣ ಕನ್ನಡ ಜಿಲ್ಲಾದ್ಯಂತ ಆಯ್ದ ಸ್ಥಳಗಳಲ್ಲಿ ಗ್ರಾಹಕರಿಗೆ ಭಾರತ್‌ ಫೈಬರ್‌ ಮೂಲಕ ಗುಣಮಟ್ಟದ ಇಂಟರ್ನೆಟ್‌ ಸೇವೆ ಒದಗಿಸಲು ಬಿಎಸ್ಸೆನ್ನೆಲ್‌ ಮುಂದಾಗಿದ್ದು, ಇದಕ್ಕಾಗಿ ಫ್ರಾಂಚೈಸಿ ಪಾಲುದಾರಿಕೆಗೆ ಆಸಕ್ತರನ್ನು ಆಹ್ವಾನಿಸಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದ ಬಿಎಸ್‌ಎನ್‌ಎಲ್‌ ಮಂಗಳೂರು ಮುಖ್ಯ ಮಹಾಪ್ರಬಂಧಕ ರವಿ ಜಿ.ಆರ್‌., ದ.ಕ. ಜಿಲ್ಲೆಯಲ್ಲಿ 18 ಸಾವಿರ ಸೇರಿದಂತೆ ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಬಿಎಸ್‌ಎನ್‌ಎಲ್‌ ಭಾರತ್‌ ಫೈಬರ್‌ (ಫೈಬರ್‌ ಬ್ರಾಡ್‌ ಬ್ಯಾಂಡ್‌) ಗ್ರಾಹಕರಿದ್ದಾರೆ. ದ.ಕ., ಉಡುಪಿಯಲ್ಲಿ ಈಗಾಗಲೇ 63ರಷ್ಟುಫ್ರಾಂಚೈಸಿಗಳಿದ್ದು, ಇನ್ನೂ ಅನೇಕ ಪ್ರದೇಶಗಳಲ್ಲಿ ಇಂಟರ್ನೆಟ್‌ ಸೇವೆ ಒದಗಿಸಲು ಮತ್ತಷ್ಟುಫ್ರಾಂಚೈಸಿ ಪಾಲುದಾರರನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು.  ಭಾರತ್‌ ನೆಟ್‌ ಉದ್ಯಮಿ ಎಂಬ ಹೊಸ ಫ್ರಾಂಚೈಸಿ ಮಾದರಿಯನ್ನು ಜಾರಿಗೆ ತರಲಾಗಿದ್ದು, ಆಸಕ್ತರಿಗೆ ಗ್ರಾಮೀಣ ಪ್ರದೇಶದಲ್ಲಿ ಉದ್ದಿಮೆದಾರರಾಗಲು ಅವಕಾಶವಿದೆ ಎಂದು ಹೇಳಿದ ಅವರು, ಭಾರತ್‌ ಫೈಬರ್‌ ಯೋಜನೆಗಳು ಮಾಸಿಕ 449 ರು.ನಿಂದ ಆರಂಭವಾಗುತ್ತವೆ. ಹಬ್ಬದ ಕೊಡುಗೆಯಾಗಿ 2594 ರು.ಗಳಲ್ಲಿ ಆರು ತಿಂಗಳ ಉಚಿತ ಒಎನ್‌ಟಿ (ಆಪ್ಟಿಕಲ್‌ ನೆಟ್‌ವರ್ಕ್ ಟರ್ಮಿನೇಶನ್‌)ಯೊಂದಿಗೆ ಅನಿಯಮಿತ ಇಂಟರ್‌ನೆಟ್‌ ಸಂಪರ್ಕ ಪಡೆಯಬಹುದು. ಬಿಎಸ್‌ಎನ್‌ಎಲ್‌ ಇಂಟರ್‌ನೆಟ್‌ ಸೇವೆಯನ್ನು ಗ್ರಾಮಗಳಿಗೆ ವಿಸ್ತರಿಸುವ ಯೋಜನೆ ಇದಾಗಿದ್ದು, ಗ್ರಾಮಗಳಲ್ಲಿ ಪಿಡಿಒಗಳನ್ನು ಸಂಪರ್ಕಿಸಿ ಸೇವಾ ಜಾಲವನ್ನು ಬಲಪಡಿಸಲು ನಿರ್ಧರಿಸಲಾಗಿದೆ ಎಂದರು.

4ಜಿ ಸೇವೆ ವಿಸ್ತರಣೆ: ಪ್ರಸ್ತುತ ಮಂಗಳೂರು ನಗರದಲ್ಲಿ ಮಾತ್ರವೇ ಬಿಎಸ್‌ಎನ್‌ಎಲ್‌ 4ಜಿ ಸೇವೆ ಇದೆ. ಉಳಿದೆಡೆ 2ಜಿ, 3ಜಿ ಮಾತ್ರ ಇದೆ. ಮುಂದಿನ 18 ತಿಂಗಳ ಅವಧಿಯಲ್ಲಿ 4ಜಿ ಸೇವೆಯನ್ನು ಜಿಲ್ಲೆಯ ಎಲ್ಲ ಭಾಗಗಳಿಗೂ ವಿಸ್ತರಣೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ಸರ್ಕಾರದಿಂದ ಅಗತ್ಯವಿರುವ ಯಂತ್ರೋಪಕರಣ, ಬಿಡಿಭಾಗಗಳು ಪೂರೈಕೆಯಾಗುವ ನಿರೀಕ್ಷೆ ಇದೆ ಎಂದು ರವಿ ಜಿ.ಆರ್‌. ಹೇಳಿದರು.

ಉತ್ತಮ ಸೇವೆ ನಿರೀಕ್ಷೆ: ದ.ಕ ಜಿಲ್ಲೆಯಲ್ಲಿ ಹಿಂದೆ 7.5 ಲಕ್ಷದಷ್ಟುಬಿಎಸ್ಸೆನ್ನೆಲ್‌ ಮೊಬೈಲ್‌ ಗ್ರಾಹಕರಿದ್ದರೆ, ಈಗ 7 ಲಕ್ಷ ಗ್ರಾಹಕರಿದ್ದಾರೆ. ಗ್ರಾಹಕರ ಸಂಖ್ಯೆ ತುಸು ಕುಸಿತಗೊಂಡಿದೆ. ಕೇಂದ್ರ ಸರ್ಕಾರವು ಬಿಎಸ್‌ಎನ್‌ಎಲ್‌ ಉತ್ತೇಜನಾ ಪ್ಯಾಕೇಜ್‌ ಜಾರಿಗೊಳಿಸಿರುವುದರಿಂದ ಕೆಲ ತಿಂಗಳಲ್ಲಿ ಉತ್ತಮ ಸೇವೆ ನಿರೀಕ್ಷಿಸಬಹುದಾಗಿದೆ ಎಂದರು.

BSNL ಗ್ರಾಹಕರಿಗೆ ಬಿಗ್ ಶಾಕ್, 3 ಪ್ರೀಪೇಯ್ಡ್‌ ಪ್ಲಾನ್‌ಗಳಲ್ಲಿ ಬದಲಾವಣೆ!

ಏರ್‌ ಫೈಬರ್‌ ಸೇವೆ: ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ವೇಗದ ಇಂಟರ್‌ನೆಟ್‌ ಪಡೆಯಲು ಭಾರತ್‌ ಏರ್‌ ಫೈಬರ್‌ ಸೇವೆ ಲಭ್ಯವಿದೆ. ಪ್ರಸ್ತುತ 17 ಕಡೆಗಳಲ್ಲಿ ಇದು ಸಿಗುತ್ತಿದೆ, ತಾಮ್ರದ ವೈರಿನ ಸಾಂಪ್ರದಾಯಿಕ ಬ್ರಾಡ್‌ಬ್ಯಾಂಡ್‌ ಬದಲು ಅತಿ ವೇಗದ ಫೈಬರ್‌ ಸೇವೆಗೆ ಬದಲಾಯಿಸಿಕೊಳ್ಳುವುದಕ್ಕೂ ಗ್ರಾಹಕರಿಗೆ ಉತ್ತಮ ಕೊಡುಗೆಗಳು ಲಭ್ಯವಿವೆ ಎಂದು ಮಾಹಿತಿ ನೀಡಿದರು.

ಸಾಗರದಲ್ಲಿ ಶೀಘ್ರ BSNL 4G ಸೇವೆ ಆರಂಭ; ಶಾಸಕ ಹಾಲಪ್ಪ

ಫ್ರಾಂಚೈಸಿಗೆ ಸಂಪರ್ಕಿಸಿ: ಬಿಎಸ್‌ಎನ್‌ಎಲ್‌ ಫ್ರಾಂಚೈಸಿ ಪಡೆಯುವವರಿಗೆ ಶೇ. 50ರಷ್ಟುಪಾಲುದಾರಿಕೆಯ ಅವಕಾಶವಿದ್ದು, ಆಸಕ್ತರು ಮಾರ್ಕೆಟಿಂಗ್‌ ವಿಭಾಗದ ಲೋಕೇಶ್‌ ಯು. (9448189011), ಸುಧೀರ್‌ ಕುಮಾರ್‌ (9448555433) ಅವರನ್ನು ಸಂಪರ್ಕಿಸಬಹುದು. ಗ್ರಾಹಕರು ಹೊಸ ಭಾರತ್‌ ಫೈಬರ್‌ ಸಂಪರ್ಕ ಪಡೆಯಲು 0824 2420000ನ್ನು ಸಂಪರ್ಕಿಸಬಹುದು ಎಂದು ರವಿ ಜಿ.ಆರ್‌. ತಿಳಿಸಿದರು.

Follow Us:
Download App:
  • android
  • ios