ಚಿನ್ನ ಖರೀದಿಸದೇ ಅದರ ಮಾಲೀಕರಾಗಬಹುದು: ಹೇಗೆ ಗೊತ್ತಾ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 11, Oct 2018, 4:42 PM IST
Best ways to buy gold without actually owning it
Highlights

ದೀರ್ಘಾವಧಿ ಹೂಡಿಕೆಯ ವಿಧಾನವೇ ಚಿನ್ನ ಖರೀದಿ! ಎಂದೂ ಸವೆಯದ ಅಪರೂಪದ ಲೋಹ ಚಿನ್ನ! ಹೂಡಿಕೆಯಾಗಿ ಚಿನ್ನವನ್ನು ಖರೀದಿಸುವ ಅಗತ್ಯವಿದೆಯೇ?! ಚಿನ್ನವನ್ನು ಹೊಂದದೆಯೇ ಹೂಡಿಕೆ ಮಾಡಲು ಇವೆ ಹಲವು ಮಾರ್ಗ

ಬೆಂಗಳೂರು(ಅ.11): ಮಾಧ್ಯಮಗಳ ವರದಿ ಪ್ರಕಾರ ಶೇ. 40 ರಷ್ಟು ಚಿನ್ನ ಖರೀದಿ ದಕ್ಷಿಣ ಭಾರತದಲ್ಲಿಯೇ ನಡೆಯುತ್ತದೆ. ಚಿನ್ನವೆಂದರೆ ದೀರ್ಘಾವಧಿಯ ಹೂಡಿಕೆ ಮಾಡುವ ವಿಧಾನವಾಗಿದೆ. ಚಿನ್ನವೂ ಹಲವು ವಿವಿಧ ಲೋಹಗಳಂತೆ ಸವೆಯದ ಅಪರೂಪದ ಲೋಹವಾಗಿದೆ. ತುಂಬ ಮೃದುವಾಗಿರುವ ಇದು ಧರಿಸುವ ಓಡವೆಗಳು,ಅಮೂಲ್ಯವಾದ ಕಲಾಕೃತಿಗಳು ಹಾಗೂ ಕರೆನ್ಸಿಗೆ ಆಕಾರ ನೀಡಿಲಾಗಿದೆ. ಭಾರತದಲ್ಲಿ ಪ್ರಮುಖವಾಗಿ ಚಿನ್ನವನ್ನು ಖರೀದಿಸುವುದೆಂದರೆ ಹಬ್ಬಗಳ ಆಚರಣೆ ಹಾಗೂ ಸಮೃದ್ಧಿಯ ಸಂಕೇತವಾಗಿದೆ.

ಆದ್ಯಾಗಿಯೂ, ಈಗಿನ ದಿನಗಳಲ್ಲಿ ನೀವು ನಿಜವಾಗಿಯು ಹೂಡಿಕೆಯಾಗಿ ಚಿನ್ನವನ್ನು ಖರೀದಿಸುವ ಅಗತ್ಯವಿದೆಯೇ ಎಂದರೆ ಖಂಡಿತವಾಗಿ ಅಗತ್ಯವಿದೆ ಎಂದು ಹೇಳಬಹುದು. ಆದರೆ ನೀವು ಚಿನ್ನದ ಹೂಡಿಕೆ ಮಾಡಲು ಬಯಸಿದರೆ, ನಿಜವಾಗಿಯು ಭೌತಿಕವಾಗಿ ಚಿನ್ನವನ್ನು ಹೊಂದದೆಯೇ ಹೂಡಿಕೆ  ಮಾಡಲು ಹಲವು ಮಾರ್ಗಗಳಿವೆ. ಈ ಕೆಳಗಿನ ಜಾಣ್ಮೆಯ ಹೂಡಿಕೆಗಳ ಮೂಲಕ ನಿಮ್ಮ ಚಿನ್ನವನ್ನು ಯಾವುದೇ ಚಿಂತೆಯಿಲ್ಲದೆ ಸುರಕ್ಷಿತವಾಗಿ ಹಾಗೂ ಪರಿಶುದ್ಧವಾಗಿಯೂ ಇಟ್ಟುಕೊಳ್ಳಬಹುದು

ಜಾಣ್ಮೆ ಹೂಡಿಕೆಯ ಮಾರ್ಗಗಳು:

1) ಸಾವಾರೆನ್ ಗೋಲ್ಡ್ ಬಾಂಡ್:

ಭಾರತ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದ ಪ್ರಮುಖವಾದ ಒಂದು ಉದ್ದೇಶವೆಂದರೆ ಒಡವೆ ಚಿನ್ನ ಖರೀದಿಸುವುದನ್ನು ಕಡಿಮೆಗೊಳಿಸುವುದಾಗಿದೆ. ಬಂಡವಾಳ ಲಾಭದ ಸಾಧ್ಯತೆಗಳನ್ನು ಮಾತ್ರವಲ್ಲದೇ ವರ್ಷಕ್ಕೆ 2.5% ರಷ್ಟು ಭರವಸೆಯ ಬಡ್ಡಿಯ ಆದಾಯವನ್ನೂ ನೀಡಲು ಮಾರ್ಚ್ 2017ರಲ್ಲಿ ಆರಂಭಿಸಲಾಯಿತು. ಇದು ಸರ್ಕಾರದ ಬೆಂಬಲಿತ ಯೋಜನೆಯಾಗಿದ್ದು, ಈ ಬಾಂಡ್ ಅತ್ಯಧಿಕ ಕ್ರೆಡಿಟ್ ರೇಟಿಂಗ್ ಹೊಂದಿದೆ. ಈ ಬಾಂಡ್'ಗಳನ್ನು ಭಾರತದಲ್ಲಿ ವಾಸಿಸುವ ನಾಗರಿಕರು ಒಂದು ವರ್ಷದೊಳಗೆ ಒಂದು ಗ್ರಾಂನಿಂದ 500 ಗ್ರಾಂವರೆಗೆ ವಿವಿಧ ರೀತಿಯಲ್ಲಿ ಪಡೆಯಬಹುದು. ಇವರು ತಮ್ಮ ಕುಟುಂಬದ ಸದಸ್ಯರಿಗಾಗಿ ವರ್ಷಕ್ಕೆ 500 ಗ್ರಾಂಗಳಷ್ಟು ಹೆಚ್ಚುವರಿ ಬಾಂಡುಗಳನ್ನು ಸಹ ಖರೀದಿಸಬಹುದು. ಈ ಬಾಂಡುಗಳು ಡಿಮ್ಯಾಟ್ ಫಾರ್ಮ್ ರೀತಿಯಲ್ಲಿ ಪೇಪರ್'ನಲ್ಲಿ ಲಭ್ಯವಿದೆ. ನೀವು ಮುಂದಿನ ಭಾಗದಲ್ಲಿ ಬ್ಯಾಂಕುಗಳು, ಎನ್'ಬಿಎಫ್'ಸಿಗಳು, ಅಂಚೆ ಕಚೇರಿಗಳು ಹಾಗೂ ಟ್ರೇಡಿಂಗ್ ಅಕೌಂಟ್ಗಳ ರೀತಿ ಮೀಸಲಾದ ಸಂಸ್ಥೆಗಳಲ್ಲಿಯೂ ಖರೀದಿಸಬಹುದು. ಶೀಘ್ರದಲ್ಲಿಯೇ ಎಸ್'ಜಿಬಿಯ ಭಾಗವನ್ನು ಪ್ರಕಟಿಸಲಾಗುವುದು.

2) ಗೋಲ್ಡ್ ಇಎಫ್'ಟಿಗಳು:

ಗೋಲ್ಡ್ ವಿನಿಮಯ ವ್ಯಾಪಾರ ನಿಧಿಗಳನ್ನು ಪ್ರಮುಖ ಆಸ್ತಿ ನಿರ್ವಹಣಾ ಕಂಪನಿಗಳು ಮಾರಾಟ ಮಾಡಲಿದ್ದು ಷೇರುಗಳ ಹಾಗೆ ವ್ಯಾಪಾರಿ ವಿನಿಮಯ ಕೇಂದ್ರಗಳಲ್ಲಿ ವ್ಯಾಪಾರ ಮಾಡಲಾಗಿದೆ. ಇಎಫ್'ಟಿಗಳು ಯಾವುದೇ ಪ್ರವೇಶ ಮತ್ತು ನಿರ್ಗಮನದ ಹೊರೆಗಳನ್ನು ಹೊತ್ತುಕೊಂಡು ಹೋಗುವುದಿಲ್ಲ. ಚಿನ್ನದ ನಿಜಾವಧಿಯ ಬೆಲೆಗಳಲ್ಲಿ ನಿಮ್ಮ ಹೂಡಿಕೆಯನ್ನು ಸಂಪರ್ಕಿಸಲಾಗಿದ್ದು, ಒಂದು ಗ್ರಾಂನಂತೆ ಸಣ್ಣದಾಗಿ ಹೂಡಿಕೆಯೊಂದಿಗೆ ಆರಂಭಿಸಲು ನಿಮಗೆ ಅನುವು ಮಾಡಿಕೊಡಲಾಗುತ್ತದೆ. ನಿಮ್ಮ ಚಿನ್ನದ ಇಟಿಎಫ್'ಟಿಗಳನ್ನು ಡಿಮ್ಯಾಟ್ ರೂಪದಲ್ಲಿ ಇರಿಸಲಾಗಿರುವುದರಿಂದ ಕಳ್ಳತನ ಮತ್ತು ಶುದ್ಧತೆಯ ಅಪಾಯಗಳಾಗುವ ಅವಕಾಶಗಳನ್ನು ತಪ್ಪಿಸುತ್ತದೆ. ಇಟಿಎಫ್'ಗಳನ್ನು ಖರೀದಿಸುವುದು ಮತ್ತು ಮಾರಾಟ ಮಾಡುವುದಕ್ಕೆ ನಿಮಗೆ ಬ್ರೋಕರೇಜ್ ಶುಲ್ಕವನ್ನು ವಿಧಿಸಲಾಗುವುದರಿಂದ ಎಎಂಸಿ'ಗೆ ಸಣ್ಣ ಮೊತ್ತದ ವೆಚ್ಚವಾಗಬಹುದು.

3) ಗೋಲ್ಡ್ ಮ್ಯೂಚುಯಲ್ ಫಂಡ್:

ಮ್ಯೂಚುಯಲ್ ಫಂಡ್'ಗಳ ಹೂಡಿಕೆ ವ್ಯಾಪಕ ಶ್ರೇಣಿಯ ಭದ್ರತೆಗಳಾಗಿದ್ದು ಗೋಲ್ಡ್ ಇಎಫ್'ಟಿಗಳನ್ನು ಪಡೆಯುವ ಒಂದು ಆಯ್ಕೆಯಾಗಿದೆ. ಬಹುತೇಕ ಎಎಂಸಿಗಳು ಚಿನ್ನ ಸಂಯೋಜಿತ ಮ್ಯೂಚುಯಲ್ ಫಂಡ್'ಗಳನ್ನು ಒದಗಿಸುತ್ತವೆ. ಈ ಮ್ಯೂಚುಯಲ್ ಫಂಡ್ ಯೋಜನೆಗಳ ಬಗೆಗಿನ ಪ್ರಮುಖ ವಿಷಯವೆಂದರೆ, ನೀವು ಹೂಡಿಕೆಯ ಮೊತ್ತವನ್ನು ಕಡಿಮೆ ಮೊತ್ತ ಅಂದರೆ ರೂ. 500 ರಿಂದ ಆರಂಭಿಸಬಹುದು. ಅಲ್ಲದೆ ಇದು ಒಂದು ಗ್ರಾಂ ಚಿನ್ನದ ನಿಜವಾದ ವೆಚ್ಚದ ಭಾಗವಾಗಿರುತ್ತದೆ.ಈ ಫಂಡ್'ಗಳನ್ನು ನಿಮ್ಮ ಅಗತ್ಯಗಳಿಗೆ ತಕ್ಕಂತೆ ಯಾವುದೇ ಮಿತಿಗಳಿಲ್ಲದೆ ನೀವು ಖರೀದಿ, ಹಾಗೆ ಇಟ್ಟುಕೊಳ್ಳುವುದು ಅಥವಾ ಮಾರಾಟ ಮಾಡಬಹುದು. ಗೋಲ್ಡ್ ಮ್ಯೂಚುಯಲ್ ಫಂಡ್'ಗಳನ್ನು ಸಾಲದ ಮ್ಯೂಚುಯಲ್ ಫಂಡ್'ನ ಒಂದು ರೂಪವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಎಸ್ಟಿಸಿಜಿ ಮತ್ತು ಎಲ್ಟಿಸಿಜಿ ತೆರಿಗೆಗಳ ನಿಯಮಗಳು ಇದಕ್ಕೆ ಅನ್ವಯವಾಗುತ್ತವೆ. ಈ ಫಂಡ್'ಗಳು ನಿಮ್ಮ ಟ್ಯಾಕ್ಟ್ ಸ್ಲ್ಯಾಬ್ ದರಕ್ಕೆ ಅನುಗುಣವಾಗಿ ಎಸ್ಟಿಸಿಜಿ ತೆರಿಗೆಗೆ ಮೂರು ವರ್ಷಗಳಿಗಿಂತ ಕಡಿಮೆ ಅವಧಿಯವರೆಗೆ ಅರ್ಹತೆ ಪಡೆದಿದ್ದು, ಇದು 20.6% ರಷ್ಟು ಸೂಚ್ಯಂಕದ ಪ್ರಯೋಜನಗಳನ್ನು ಹೊಂದಿರುತ್ತದೆ.

4) ಇ-ವಾಲೆಟ್:

ಪ್ರಸಿದ್ಧ ಇ-ವಾಲೆಟ್ ಅನ್ನು ಚಿನ್ನದ ಹೂಡಿಕೆ ಯೋಜನೆಗಾಗಿ ಇತ್ತೀಚಿಗೆ ಪ್ರಕಟಿಸಲಾಗಿದೆ. ಇದರಲ್ಲಿ, ಗ್ರಾಹಕರು ತಮ್ಮ ಇ-ವಾಲೆಟ್'ಗಳಿಂದ ಡಿಜಿಟಲ್ ಚಿನ್ನದ ವ್ಯಾಪಾರ ಮಾಡಬಹುದು. ಇ-ವಾಲೆಟ್ ಸಂಸ್ಥೆ ಎಂಎಂ'ಟಿಸಿ-ಪಿಎಎಂಟಿಯೊಂದಿಗೆ ಸಹಭಾಗಿತ್ವ ಹೊಂದಿದೆ.  ಎಂಎಂ'ಟಿಸಿ-ಪಿಎಎಂಟಿಯೊಂದಿಗೆ 5 ವರ್ಷದ ಅವಧಿಗಾಗಿ ಖರೀದಿಸಿದ ಚಿನ್ನವನ್ನು ಸಂಗ್ರಹಿಸಬಹುದು. ಗ್ರಾಹಕರು ಡಿಜಿಟಲ್ ಚಿನ್ನವನ್ನು ಒಡವೆ ಚಿನ್ನವಾಗಿ ಪರಿವರ್ತಿಸಲು ಮತ್ತು ಮನೆಗೆ ವಿತರಿಸುವುದಕ್ಕೆ ಅಥವಾ ತಮ್ಮ ಇ-ವಾಲೆಟ್ ಮೂಲಕ ಆನ್ಲೈನ್ನಲ್ಲಿ ಮಾರಾಟ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ.

loader