ನಿವೃತ್ತಿ ಬಳಿಕ 12 ಸಾವಿರ ಪೆನ್ಷನ್‌ ನೀಡುತ್ತೆ ಎಲ್‌ಐಸಿಯ ಈ ಯೋಜನೆ: ಮಾಡಬೇಕಿರುವುದು ಇಷ್ಟೇ...

ನಿವೃತ್ತಿಯ ನಂತರದ ಜೀವನವನ್ನು ಸುಗಮಗೊಳಿಸಲು ಭಾರತೀಯ ಜೀವ ವಿಮಾ ನಿಗಮವು ಜಾರಿಗೊಳಿಸಿರುವ ಸರಳ ಪಿಂಚಣಿ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ... 
 

benefits of saral pension plan lauched by LIC  to make life easier after retirement suc

ಭಾರತೀಯ ಜೀವ ವಿಮಾ ನಿಗಮ (LIC) ಇದಾಗಲೇ ಹಲವಾರು ಯೋಜನೆಗಳನ್ನು ಪರಿಚಯಿಸಿದೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೂ ಹಲವಾರು ಯೋಜನೆಗಳು ಇದಾಗಲೇ ಚಾಲ್ತಿಯಲ್ಲಿ ಇವೆ. ದಶಕಗಳ ಹಿಂದೆ, ಎಲ್‌ಐಸಿ ಮಾಡಿದರೆ ಅದು ಸತ್ತ ಬಳಿಕವಷ್ಟೇ ಕುಟುಂಬಸ್ಥರಿಗೆ ಸಿಗುವಂತೆ ಇತ್ತು. ಆದರೆ ಈಗ ಎಲ್ಲವೂಬದಲಾಗಿದೆ. ಕೈಯಲ್ಲಿ ಹಣವಿದ್ದಾಗ ಒಂದಿಷ್ಟು ಹೂಡಿಕೆ ಮಾಡಿದರೆ, ಇಳಿ ವಯಸ್ಸಿನಲ್ಲಿ ನೆಮ್ಮದಿಯಿಂದ ಜೀವಿಸಬಹುದಾಗಿದೆ. ಮಕ್ಕಳು, ಮೊಮ್ಮಕ್ಕಳನ್ನು ನಂಬಿ ಬದುಕುವುದು ದುಸ್ತರ ಎಂತಿರುವ ಈ ಕಾಲ ಘಟ್ಟದಲ್ಲಿ ದುಡಿಮೆ ಇರುವಾಗಲೇ ಇಂಥ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಒಂದಷ್ಟು ಲಾಭಗಳನ್ನು ವಯಸ್ಸಾದ ಬಳಿಕ ಪಡೆಯಲು ಅನುಕೂಲ ಆಗುತ್ತದೆ. ಈಗ ಅಂಥದ್ದೇ ಇನ್ನೊಂದು ಯೋಜನೆಯನ್ನು ಎಲ್‌ಐಸಿ ಪರಿಚಯಿಸಿದೆ. ಅದೇ,  ಎಲ್ಐಸಿ ಸರಳ ಪಿಂಚಣಿ ಯೋಜನೆ.

ಖಾಸಗಿ ಅಥವಾ ಸರ್ಕಾರಿ ಉದ್ಯೋಗಗಳಲ್ಲಿ ಈಗ ಪಿಂಚಣಿ ಸೌಲಭ್ಯಗಳು ಇಲ್ಲ. ಮೊದಲು ರಾಜ್ಯ ಸರ್ಕಾರದ ಹುದ್ದೆಗಳಲ್ಲಿದ್ದರೆ ಪೆನ್ಷನ್‌ ಸಿಗುತ್ತಿತ್ತು. ಆದರೆ ಈಗಿನ ಸ್ಥಿತಿ ಹಾಗಲ್ಲ. ಪಿಂಚಣಿ ಇಲ್ಲ. ಇದೇ ಕಾರಣಕ್ಕೆ, ಇಂಥದ್ದೊಂದು ಯೋಜನೆಯನ್ನು ಎಲ್‌ಐಸಿ ಪರಿಚಯಿಸಿದೆ.  ನಿವೃತ್ತಿಯ ಬಳಿಕ ಮಾಸಿಕ ಪಿಂಚಣಿಯನ್ನು ನೀವು ಇದರಿಂದ ಪಡೆದುಕೊಳ್ಳಬಹುದು.  ಒಮ್ಮೆ ಹೂಡಿಕೆ ಮಾಡಿದರೆ,  ಜೀವನಪೂರ್ತಿ ಪಿಂಚಣಿ ಪಡೆಯಬಹುದಾಗಿದೆ.  ಈ ಯೋಜನೆಯಿಂದ  ನಿವೃತ್ತಿಯ ನಂತರ ಪ್ರತಿ  ತಿಂಗಳು  ಕನಿಷ್ಠ 12 ಸಾವಿರ ರೂಪಾಯಿ ಪಡೆಯಬಹುದಾಗಿದೆ.  ಇದಕ್ಕಾಗಿ ಮಾಡಬೇಕಾದುದು ಏನೆಂದರೆ, ಯಾವುದೇ ವ್ಯಕ್ತಿ ಎಲ್ಲಿಯೇ ನೌಕರಿ ಮಾಡುತ್ತಿದ್ದರೆ, ಅವರು  ತಮ್ಮ ಪಿಎಫ್ ನಿಧಿ ಮತ್ತು ಗ್ರಾಚ್ಯುಟಿಯಿಂದ ಪಡೆದ ಮೊತ್ತವನ್ನು ಹೂಡಿಕೆ ಮಾಡಬೇಕು.  

ಪೋಸ್ಟ್ ಆಫೀಸ್​ನಲ್ಲಿ ಈ ಹೂಡಿಕೆ ಮಾಡಿ: ಪ್ರತಿ ತಿಂಗಳು 9250 ರೂಪಾಯಿ ಪಡೆದುಕೊಳ್ಳಿ!

 ಈ ಬಗ್ಗೆ ಇನ್ನಷ್ಟು ಮಾಹಿತಿ ನೀಡುವುದಾದರೆ, ಎಲ್‌ಐಸಿಯ  ಈ ಯೋಜನೆಯಲ್ಲಿ 40 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರು ಮಾತ್ರ ಮಾಡಬಹುದಾಗಿದೆ.  80 ವರ್ಷ ವಯಸ್ಸಿನವರೆಗೂ ಇದನ್ನು ಯಾವುದೇ ಸಮಯದಲ್ಲಿ ಆರಂಭಿಸಬಹುದು.  ಈ ಪಾಲಿಸಿಯ ಅಡಿಯಲ್ಲಿ  ತಿಂಗಳಿಗೆ ಮಾಸಿಕ ವರ್ಷಾಶನ  1000 ರೂಪಾಯಿಗಳನ್ನು  ಖರೀದಿಸಬೇಕು. ನೀವು ಮೂರು ತಿಂಗಳಿಗೆ ಒಮ್ಮೆ  ತ್ರೈಮಾಸಿಕ ಆಧಾರದ ಮೇಲೆ ರೂ 3,000, ಅರೆ ವಾರ್ಷಿಕ ಆಧಾರದ ಮೇಲೆ ರೂ 6,000 ಮತ್ತು ವಾರ್ಷಿಕ ಆಧಾರದ ಮೇಲೆ ರೂ 12,000 ರ ಕೂಡ ಪಡೆದುಕೊಳ್ಳಬಹುದು.  ಈ ಯೋಜನೆಯಡಿಯಲ್ಲಿ ಯಾವುದೇ ಗರಿಷ್ಠ ಹೂಡಿಕೆ ಮಿತಿ ಇಲ್ಲ. ಈ ಯೋಜನೆಯಲ್ಲಿ ನೀವು ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು.   ಸಂಗಾತಿಯು ಬದುಕುಳಿದಿದ್ದರೆ, ಸಂಗಾತಿಯು ಅವರ ಮರಣದ ತನಕ ವರ್ಷಾಶನವನ್ನು (ನಿಖರವಾದ ಮೊತ್ತ) ಪಡೆಯುವುದನ್ನು ಮುಂದುವರಿಸುತ್ತಾರೆ. ತರುವಾಯ, ಸಂಗಾತಿಯ ಮರಣದ ನಂತರ, ಖರೀದಿ ಬೆಲೆಯ 100% ಅನ್ನು ಪಾಲಿಸಿಯ ಕಾನೂನು ಉತ್ತರಾಧಿಕಾರಿ ಅಥವಾ ನಾಮಿನಿಗೆ ನೀಡಲಾಗುತ್ತದೆ.

ಒಂದು ವೇಳೆ ನಿಮ್ಮ ವಯಸ್ಸು 42 ಆಗಿದ್ದರೆ,  ನೀವು 30 ಲಕ್ಷ ರೂ.ಗಳನ್ನು ವರ್ಷಾಶನವನ್ನು ಖರೀದಿಸಿದರೆ, ಅವರು ತಿಂಗಳಿಗೆ ರೂ.12,388 ಪಿಂಚಣಿ ಪಡೆಯುತ್ತಾರೆ. ಈ ಪಾಲಿಸಿಯ ಅಡಿಯಲ್ಲಿ 6 ತಿಂಗಳು ಪೂರ್ಣಗೊಂಡರೆ, ಅಗತ್ಯವಿದ್ದರೆ ನೀವು ಅದನ್ನು ಸರೆಂಡರ್ ಮಾಡಬಹುದು. ಇದರ ಹೊರತಾಗಿ ನೀವು ಈ ಯೋಜನೆಯಡಿ ಸಾಲವನ್ನು ಸಹ ಪಡೆಯಬಹುದು. ಆದಾಗ್ಯೂ, ಸಾಲದ ಮೊತ್ತವು ನಿಮ್ಮ ಹೂಡಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ಇದಕ್ಕಾಗಿ ನೀವು  www.licindia.in ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

895 ರೂ.ಗೆ 336 ದಿನಗಳ ವ್ಯಾಲಿಡಿಟಿ, 24 ಜಿಬಿ ಡೇಟಾ: ಜಿಯೋದಿಂದ ಭರ್ಜರಿ ಆಫರ್: ಡಿಟೇಲ್ಸ್‌ ಇಲ್ಲಿದೆ...

 

Latest Videos
Follow Us:
Download App:
  • android
  • ios