Asianet Suvarna News Asianet Suvarna News

ಬೆಂಗಳೂರಿನಲ್ಲಿ ಕೋಟಿ ಕೋಟಿ ಲಾಭ ಗಳಿಸುವ ಕಂಪೆನಿಗಳೇ ತೆರಿಗೆ ಕಟ್ಟಿಲ್ಲ!

ಬಿಬಿಎಂಪಿಯು ತೆರಿಗೆ ವಂಚಕರ ಪಟ್ಟಿ ಬಿಡುಗಡೆಗೊಳಿಸಿದೆ. ರಾಜ್ಯದ ಪ್ರಮುಖ ಕಂಪೆನಿ ಹಾಗೂ ಸಂಸ್ಥೆಗಳೇ ಈ ಪಟ್ಟಿಯಲ್ಲಿರುವುದು ಅಚ್ಚರಿ ಮೂಡಿಸಿದೆ. ಅಷ್ಟಕ್ಕೂ ಪಟ್ಟಿಯಲ್ಲಿರುವ ಹೆಸರುಗಳು ಯಾವುವು? ಇಲ್ಲಿದೆ ವಿವರ

BBMP releases the list of Tax fraudsters
Author
Bangalore, First Published Jan 25, 2019, 2:06 PM IST

ಬೆಂಗಳೂರು[ಜ.25]: ಬಿಬಿಎಂಪಿಯು ಬೆಂಗಳೂರಿನ ಟಾಪ್ ಹಂಡ್ರೆಡ್ ತೆರಿಗೆ ವಂಚಕರ ಹೆಸರು ಬಯಲುಗೊಳಿಸಿದೆ. ಈ ಪಟ್ಟಿಯಲ್ಲಿ ಬಿಬಿಎಂಪಿಗೆ ತೆರಿಗೆ ವಂಚಿಸಿದ ಈ ಪಟ್ಟಿಯಲ್ಲಿ ಬಿಎಂಟಿಸಿ, ಕೆಎಸ್ಆರ್ ಟಿಸಿ, ಬಿಎಂಆರ್ ಸಿ ಸಂಸ್ಥೆಗ: ಹೆಸರುಗಳಿವೆ. ಹೀಗಾಗಿ ತನಗೆ ತೆರಿಗೆ ವಂಚಿಸಿದವರ ಕಚೇರಿಗೆ ಬೀಗ ಹಾಕಲು ಬಿಬಿಎಂಪಿ ತೀರ್ಮಾನಿಸಿದೆ.

ಯಾವ ಕಂಪನಿ..? ಎಷ್ಟು ಬಾಕಿ..?

ಆರ್ ಎನ್ ಜೆಡ್ ಇನ್ಫೋಟೆಕ್ ಕಂಪನಿ ಕಳೆದ 10 ವರ್ಷದಿಂದ ತೆರಿಗೆ ಕಟ್ಟದೆ 25,57,90,911 ರೂ. ಬಾಕಿ.

ಬೆಂಗಳೂರು ರೇಸ್ ಕೋರ್ಸ್ 2 ವರ್ಷದಿಂದ ತೆರಿಗೆ ಕಟ್ಟದೆ  1,29,30,480 ರೂ.ಬಾಕಿ

ಬಿಎಂಟಿಸಿ 5 ವರ್ಷದಿಂದ ತೆರಿಗೆ ಕಟ್ಟದೆ  7,01,18,384 ರೂ. ಬಾಕಿ.

ಕೆಎಸ್ಆರ್ಟಿಸಿ 1,81,56,137 ರೂ.

ಬಿಎಂಆರ್ಸಿಎಲ್  1,19,50,118 ರೂ.

ದಯಾನಂದ ಸಾಗರ ಕಾಲೇಜ್ 6 ವರ್ಷ 1,19,21,228 ರೂ.

ವಿಪ್ರೋ ಕಂಪನಿ 6 ವರ್ಷ 10,87,42,602 ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದೆ.

ಹೀಗೆ ಪ್ರಸಿದ್ಧ ಕಂಪೆನಿ ಹಾಗೂ ಸಂಸ್ಥೆಗಳೇ ಬಿಬಿಎಂಪಿಗೆ ತೆರಿಗೆ ಪಾವತಿಸದೆ ಕೈಕಟ್ಟಿ ಕುಳಿತುಕೊಂಡಿವೆ. ಇದನ್ನೀಗ ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿಯು ಒಂದು ತಿಂಗಳಲ್ಲಿ ತೆರಿಗೆ ಕಟ್ಟದಿದ್ರೆ ಕಚೇರಿಗಳಿಗೆ ಬಿಗ ಹಾಕುವುದಾಗಿ ನೊಟೀಸ್ ನೀಡಿದೆ.

Follow Us:
Download App:
  • android
  • ios